೨.೧೨ ಡಿಸೆಂಬರ್
ತಾರಾ ಪಟ ೧. ವಾಸ್ತವಿಕ
ತಾರಾ ಪಟ ೨. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಸಹಿತ
ತಾರಾ ಪಟ ೩. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಮತ್ತು ರಾಶಿಗಳ
ಸೀಮಾರೇಖೆ ಮತ್ತು
ಅಕರಾದಿಯಾಗಿ ಕನ್ನಡದ ರಾಶಿನಾಮಗಳನ್ನು
ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಸಹಿತ
ತಾರಾ ಪಟ ೪. ರಾಶಿಚಕ್ರ
ವೀಕ್ಷಣಾ ಮಾರ್ಗದರ್ಶಿ
ಈ ಹಿಂದಿನ ತಿಂಗಳುಗಳಲ್ಲಿ ಎಲ್ಲ ರಾಶಿಗಳನ್ನು ಗುರುತಿಸಿ ಆಗಿರುವುದರಿಂದ
ಈ ತಿಂಗಳು ಗುರುತಿಸಬೇಕಾದ ಹೊಸ ರಾಶಿ ಇಲ್ಲ. ಡಿಸೆಂಬರ್ ೧೫ ರಂದು ರಾತ್ರಿ ಸುಮಾರು ೮ ಗಂಟೆಗೆ ನಿಮ್ಮ ವೀಕ್ಷಣಾ ಸ್ಥಳದಲ್ಲಿ ಪೂರ್ವ ದಿಗ್ಬಿಂದುವಿಗಿಂತ ತುಸು
ಮೇಲೆ ವಿಶಿಷ್ಟ, ವಿಚಿತ್ರ ಜ್ಯಾಮಿತೀಯ ಆಕಾರದಿಂದಲೂ ಸದಸ್ಯ ತಾರೆಗಳ ಉಜ್ವಲ ಪ್ರಭೆಯಿಂದಲೂ
ರಾರಾಜಿಸುತ್ತಿರುವ ಮೂರು ಏಕರೇಖಾಗತ ಸಮೋಜ್ವಲ ತಾರೆಗಳು ನಿಮ್ಮ ಗಮನ ಸೆಳೆಯುತ್ತದೆ. ಇವು ಮಹಾವ್ಯಾಧ ರಾಶಿಯ ಸದಸ್ಯ ತಾರೆಗಳು. ಇವನ್ನು ಗುರುತಿಸಿದ ಬಳಿಕ ಈ ಮುಂದಿನ ಸೂಚನೆಗಳಿಗೆ ಅನುಗುಣವಾಗಿ ವೀಕ್ಷಣೆ
ಮುಂದುವರಿಸಿ.
ಈ ತಿಂಗಳಿನಲ್ಲಿ ಮಾಡಬಹುದಾದ ಮಾಡಬೇಕಾದ ವೀಕ್ಷಣೆಗಳು ಇವು:
* ಜನವರಿ ಮಾರ್ಗದರ್ಶಿಯ ಹಂತ ೧ ರಲ್ಲಿ ವಿವರಿಸಿದ ಮಹಾವ್ಯಾಧ, ವೃಷಭ, ವೈತರಿಣೀ ಮತ್ತು ಶಶ ರಾಶಿಗಳನ್ನು ಗುರುತಿಸಿ. ಇದೇ ಮಾರ್ಗದರ್ಶಿಯ ಹಂತ ೩ ಮೊದಲ್ಗೊಂಡು ಹಂತ ೧೦ ರ ವರೆಗೆ ವಿವರಿಸಿದ ರಾಶಿಗಳ ಪೈಕಿ ಈ ತಿಂಗಳು ವೀಕ್ಷಿಸ ಬಹುದಾದ
ವಿಜಯಸಾರಥಿ, ಪಾರ್ಥ, ಮೇಷ, ತಿಮಿಂಗಿಲ, ಅಗ್ನಿಕುಂಡ, ಚಕೋರ, ಹೋರಾಸೂಚೀ, ವ್ರಶ್ಚನ, ದೀರ್ಘಕಂಠ, ಕುಂತೀ, ತ್ರಿಕೋಣಿ, ಮೀನ, ನಕುಲ, ದ್ರೌಪದಿ, ಮುಸಲೀ, ಯುಧಿಷ್ಠಿರ ಮತ್ತು ಶಿಲ್ಪಶಾಲಾ ರಾಶಿಗಳನ್ನು ಗುರುತಿಸಿ.
* ಜುಲೈ ಮಾರ್ಗದರ್ಶಿಯ ಹಂತ ೨ ರಲ್ಲಿ ವಿವರಿಸಿದ ರಾಜಹಂಸ, ಶೃಗಾಲ, ಧನಿಷ್ಠಾ ಮತ್ತು ಶರ ರಾಶಿಗಳನ್ನು ಗುರುತಿಸಿ. ಇವು ಪಶ್ಚಿಮ ದಿಗಂತದ ಸಮೀಪ ಇವೆ.
* ಆಗಸ್ಟ್ ಮಾರ್ಗದರ್ಶಿಯ ಹಂತ ೨ ರಲ್ಲಿ ವಿವರಿಸಿದ ಕಿಶೋರ, ಮಕರ
ಮತ್ತು ಸೂಕ್ಷ್ಮದರ್ಶಿನಿ ರಾಶಿಗಳನ್ನು ಗುರುತಿಸಿ. ಇವು
ಪಶ್ಚಿಮ ದಿಗಂತದ ಸಮೀಪ ಇವೆ.
ಉತ್ತರ ಅಕ್ಷಾಂಶಗಳಲ್ಲಿ ವಲಯದ ತುಣುಕೂ ಗೋಚರಿಸದ ರಾಶಿಗಳು: ಚಂಚಲವರ್ಣಿಕಾ ಮತ್ತು ಅಷ್ಟಕ. ಎಂದೇ, ಅವುಗಳ ಮಾಹಿತಿ ನೀಡಿಲ್ಲ.
ಸಿಂಹಾವಲೋಕನ
ಡಿಸೆಂಬರ್ ತಿಂಗಳಿನಲ್ಲಿ ರಾತ್ರಿ ಸುಮಾರು ೮.೦೦ ಗಂಟೆಗೆ ದೃಗ್ಗೋಚರ ಖಗೋಳಾರ್ಧವನ್ನು ಸಂಪೂರ್ಣವಾಗಿ ಅವಲೋಕಿಸಿ ಪರಿಚಯ
ಮಾಡಿಕೊಂಡ ರಾಶಿಗಳನ್ನೂ, ವಿಶಿಷ್ಟ ತಾರೆಗಳನ್ನೂ ‘ನಕ್ಷತ್ರ’ಗಳನ್ನೂ ಪಟ್ಟಿಮಾಡಿ. ಅವನ್ನು ವೀಕ್ಷಿಸಿದ ಸಮಯ ಮತ್ತು ನಿಮ್ಮ ದೃಗ್ಗೋಚರ
ಖಗೋಳದಲ್ಲಿ ಅವುಗಳ ಸ್ಥಾನವನ್ನೂ ಬರೆದಿಡಿ.




No comments:
Post a Comment