Pages

25 March 2014

ತಾರಾವಲೋಕನ ೧೩ - ವೀಕ್ಷಣಾ ಮಾರ್ಗದರ್ಶಿ, ನವೆಂಬರ್‌

೨.೧೧   ನವೆಂಬರ್

ತಾರಾ ಪಟ . ವಾಸ್ತವಿಕ



 ತಾರಾ ಪಟ . ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಸಹಿತ


ತಾರಾ ಪಟ . ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಮತ್ತು ರಾಶಿಗಳ ಸೀಮಾರೇಖೆ ಮತ್ತು
ಅಕರಾದಿಯಾಗಿ ಕನ್ನಡದ ರಾಶಿನಾಮಗಳನ್ನು ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಸಹಿತ



ತಾರಾ ಪಟ . ರಾಶಿಚಕ್ರ



ವೀಕ್ಷಣಾ ಮಾರ್ಗದರ್ಶಿ

ನವೆಂಬರ್ ೧೫ ರಂದು ರಾತ್ರಿ ಸುಮಾರು ಗಂಟೆಗೆ ನಿಮ್ಮ ವೀಕ್ಷಣಾ ಸ್ಥಳದಲ್ಲಿ ಪೂರ್ವ ದಿಗ್ಬಿಂದುವಿನಚಿದ ಉತ್ತರಾಭಿಮುಖವಾಗಿ ದಿಗಂತದಗುಂಟ ಕಣ್ಣು ಹಾಯಿಸಿದರೆ ಎರಡು ಉಜ್ವಲ ತಾರೆಗಳು ನಿಮ್ಮ ಗಮನ ಸೆಳೆಯುತ್ತವೆ. ಮೊದಲನೆಯದು ವೃಷಭ ರಾಶಿಯ ರೋಹಿಣಿ ತಾರೆ, ಎರಡನೆಯದು ವಿಜಯಸಾರಥಿಯ ಬ್ರಹ್ಮಹ್ಲದಯ ತಾರೆ. ಇವೆರಡೂ ರಾಶಿಗಳು ಪೂರ್ಣವಾಗಿ ಉದಯಿಸಿಲ್ಲ. ಖಮಧ್ಯದಿಂದ ವಾಯವ್ಯದತ್ತ ಕಣ್ಣು ಹಾಯಿಸಿದರೆ ಅನುಕ್ರಮವಾಗಿ ರಾಜಹಂಸ ರಾಶಿಯ ಹಂಸಾಕ್ಷಿ ತಾರೆಯೂ ವೀಣಾ ರಾಶಿಯ ಅಭಿಜಿತ್ ತಾರೆಯೂ ನಿಮ್ಮ ಗಮನ ಸೆಳೆಯುತ್ತದೆ. ಖಮಧ್ಯದಿಂದ ಪಶ್ಚಿಮ ದಿಗ್ಬಿಂದುವಿನತ್ತ ಕಣ್ಣು ಹಾಯಿಸಿದರೆ ಗರುಡ ರಾಶಿಯ ಶ್ರವಣ ನಕ್ಷತ್ರಗಮನ ಸೆಳೆಯುತ್ತದೆ. ಇವನ್ನು ಗುರುತಿಸಿದ ಬಳಿಕ ಈ ಮುಂದಿನ ಸೂಚನೆಗಳಿಗೆ ಅನುಗುಣವಾಗಿ ವೀಕ್ಷಣೆ ಮುಂದುವರಿಸಿ.

ಹಂತ : ಮಾಡಬೇಕಾದ ವೀಕ್ಷಣೆಗಳು ಇವು:

* ಜೂನ್‌ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ವೀಣಾ ರಾಶಿಯನ್ನು ಗುರುತಿಸಿ.
* ಜುಲೈ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ರಾಜಹಂಸ, ಶೃಗಾಲ, ಧನಿಷ್ಠಾ, ಶರ, ಗರುಡ ಮತ್ತು ಖೇಟಕ ರಾಶಿಗಳನ್ನು ಗುರುತಿಸಿ.
ಜನವರಿ  ತಿಂಗಳಿನ ಮಾರ್ಗದರ್ಶಿಯ ಹಂತ ರಲ್ಲಿ ನೀಡಿರುವ ಮಾಹಿತಿಯ ನೆರವಿನಿಂದ ಯುಧಿಷ್ಠಿರ ರಾಶಿಯನ್ನು ರಾಜಹಂಸದ ಉತ್ತರದಲ್ಲಿ ವೀಕ್ಷಿಸಿ. ಇದೇ ಹಂತದಲ್ಲಿ ವಿವರಿಸಿರುವ ಮುಸಲೀ ರಾಶಿಯನ್ನೂ ಗುರುತಿಸಿ.
* ಆಗಸ್ಟ್‌ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಕಿಶೋರ, ಧನು, ಮಕರ ಮತ್ತು ಸೂಕ್ಷ್ಮದರ್ಶಿನಿ ರಾಶಿಗಳನ್ನು ಗುರುತಿಸಿ. ಇವುಗಳ ಪೈಕಿ ಧನು ಅಸ್ತವಾಗುತ್ತಿದೆ.
* ಸೆಪ್ಟೆಂಬರ್‌ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಬಕ, ದಕ್ಷಿಣ ಮೀನ ಮತ್ತು ಕುಂಭ ರಾಶಿಗಳನ್ನು ಗುರುತಿಸಿ.
* ಜನವರಿ ಮಾರ್ಗದರ್ಶಿ ಹಂತ ರಲ್ಲಿ ವಿವರಿಸಿದ ಕುಂತೀ ರಾಶಿ ಗುರುತಿಸಿ.
* ಮಾರ್ಚ್‌ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಲಘುಸಪ್ತರ್ಷಿ ರಾಶಿ ಗುರುತಿಸಿ.
* ಜನವರಿ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ನಕುಲ ರಾಶಿಯನ್ನು ಗುರುತಿಸಿ. ಇದು ಈಗ ಖಮಧ್ಯದ ಸಮೀಪದಲ್ಲಿ ಇದೆ.
 * ಜನವರಿ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಮೇಷ ಮತ್ತು ತಿಮಿಂಗಿಲ ರಾಶಿಗಳು ಪೂರ್ವ ದಿಗಂತಕ್ಕಿಂತ ತುಸು ಮೇಲಿವೆ. ಇದೇ ಹಂತದಲ್ಲಿ ವಿವರಿಸಿದ ಪಾರ್ಥ ರಾಶಿ ಈಶಾನ್ಯ ದಿಗಂತದ ಸಮೀಪ ಉದಯವಾಗಿದೆ, ಗುರುತಿಸಿ. ಹಂತ ರಲ್ಲಿ ವಿವರಿಸಿದ ಚಕೋರ ರಾಶಿಯು ಖಗೋಳದ ಪೂರ್ವಾರ್ಧದಲ್ಲಿ ಇದೆ. ಬಕ ರಾಶಿಯ ಪಶ್ಚಿಮಕ್ಕಿರುವ ಇದನ್ನು ಗುರುತಿಸಿ. ಇದೇ ಹಂತದಲ್ಲಿ ವಿವರಿಸಿದ ಅಗ್ನಿಕುಂಡ ರಾಶಿ ಈಗ ಪೂರ್ವದಲ್ಲಿ ಉದಯವಾಗಿರುವುದನ್ನು ನೋಡಬಹುದು. ಹಂತ ರಲ್ಲಿ ವಿವರಿಸಿದ ಮೀನ ಮತ್ತು ದ್ರೌಪದಿ ರಾಶಿಗಳು ಖಗೋಳದ ಪೂರ್ವಾರ್ಧದಲ್ಲಿ ಇವೆ. ಮೇಷ, ಮೀನ ಮತ್ತು ನಕುಲ ರಾಶಿಗಳ ನೆರವಿನಿಂದ ಇವನ್ನು ಗುರುತಿಸಿ. ಹಂತ ೧೦ ರಲ್ಲಿ ವಿವರಿಸಿದ ಶಿಲ್ಪಶಾಲಾ ರಾಶಿಯನ್ನು ಗುರುತಿಸಿ. ಇದು ತಿಮಿಂಗಿಲದ ದಕ್ಷಿಣಕ್ಕೂ ಚಕೋರದ ಉತ್ತರಕ್ಕೂ ತಾಗಿಕೊಂಡಿದೆ.

ಹಂತ : ಈ ತಿಂಗಳು ಉದಯಿಸಿರುವ ಗುರುತಿಸುವ ಕಾರ್ಯ ಈಗ ಮಾಡಬೇಕಿದೆ.
             
 
ದಕ್ಷಿಣ ದಿಗ್ಬಿಂದುವಿಗೆ ತಾಗಿಕೊಂಡು ಶ್ಯೇನ ರಾಶಿ (೭೭. ಟ್ಯುಕೇನ, ವಿಸ್ತೀರ್ಣ ೨೯೪.೫೫೭ ಚ ಡಿಗ್ರಿ) ಭಾಗಶಃ ಉದಯಿಸಿದೆ. α ಶ್ಯೇನ (ತೋಉ ೨.೮೬, ದೂರ ೧೯೭ ಜ್ಯೋವ) ಗುರುತಿಸಲು ಪ್ರಯತ್ನಿಸಬಹುದಾದ ತಾರೆ. ಈ ಪ್ರಯತ್ನದಲ್ಲಿ ಯಶಸ್ವಿ ಆಗದಿದ್ದರೆ ರಾಶಿಯನ್ನು ಅದರ ಪಾಡಿಗೆ ಬಿಟ್ಟು ಮುಂದುವರಿಯುವುದು ಉತ್ತಮ. ಉಳಿದವು ಬಲು ಕ್ಷೀಣ ತಾರೆಗಳಾಗಿರುವುದೇ ಇದಕ್ಕೆ ಕಾರಣ.

ಸಿಂಹಾವಲೋಕನ


ನವೆಂಬರ್ ತಿಂಗಳಿನಲ್ಲಿ ರಾತ್ರಿ ಸುಮಾರು ೮.೦೦ ಗಂಟೆಗೆ ದೃಗ್ಗೋಚರ ಖಗೋಳಾರ್ಧವನ್ನು ಸಂಪೂರ್ಣವಾಗಿ ಅವಲೋಕಿಸಿ ಪರಿಚಯ ಮಾಡಿಕೊಂಡ ರಾಶಿಗಳನ್ನೂ, ವಿಶಿಷ್ಟ ತಾರೆಗಳನ್ನೂ ನಕ್ಷತ್ರಗಳನ್ನೂ ಪಟ್ಟಿಮಾಡಿ. ಅವನ್ನು ವೀಕ್ಷಿಸಿದ ಸಮಯ ಮತ್ತು ನಿಮ್ಮ ದೃಗ್ಗೋಚರ ಖಗೋಳದಲ್ಲಿ ಅವುಗಳ ಸ್ಥಾನವನ್ನೂ ಬರೆದಿಡಿ. 

No comments: