ಬಲೂನಿನೊಂದಿಗೆ ಮನರಂಜನೆ - ೧
ಗಾಳಿ ತುಂಬಿದ ಬಲೂನನ್ನು ಉರಿಉತ್ತಿರುವ ಮೋಂಬತ್ತಿಯ ಜ್ವಾಲೆಯನ್ನು ತಗುಲಿಸಿದರೆ ಏನಾಗುತ್ತದೆ? ಒಡೆದು ಹೋಗುತ್ತದೆ ಎಂದು ಎಲ್ಲರಿಗೂ ತಿಳಿದಿದೆಯಲ್ಲವೇ? ಚಿತ್ರ ೧ ನೊಡಿ.
ಬಲೂನು ಒಡೆಯಲಿಲ್ಲ. ಚಿತ್ರ ೨ ನೋಡಿ.
ಮೋಂಬತ್ತಿಯ ಜ್ವಾಲೆ ತಗುಲಿದ ತಾಣದಲ್ಲಿ ಮಸಿ ಹಿಡಿದಿದೆ. ನಂಬಲಾಗುತ್ತಿಲ್ಲ ಅಲ್ಲವೇ? ಆರಂಭದಲ್ಲಿ ಇರುವ ವಿಡಿಯೋ ನೋಡಿದರೆ ನಂಬಲು ಅಗತ್ಯವಾದ ಪುರಾವೆ ದೊರೆಯುತ್ತದೆ.
ನೀವು ಈ ಜಾದೂ ಮಾಡಬಹುದು. ಉತ್ತಮ ಗುಣಮಟ್ಟದ ಬಲೂನು ತೆಗೆದುಕೊಳ್ಳಿ (ಆರಂಭದಲ್ಲಿ ಒಂದೆರಡು ಬಲೂನು ಒಡೆಯುವ ಸಾಧ್ಯತೆ ಇರುವುದರಿಂದ ೪-೫ ಬಲೂನು ಸಂಗ್ರಹಿಸಿ ಇಟ್ಟುಕೊಂಡಿರಿ). ಮೊದಲು ಬಲೂನಿನೊಳಕ್ಕೆ ಸುಮಾರು ೨೫೦ ಮಿಲೀ ನಷ್ಟು ನೀರು ತುಂಬಿಸಿ. ತದನಂತರ ಗಾಳಿ ತುಂಬಿಸಿ ಗಂಟು ಹಾಕಿ. ಮೋಂಬತ್ತಿಯನ್ನು ಉರಿಸಿ ನಿಲ್ಲಿಸಿ. ಬಲು ಜಾಗರೂಕತೆಯಿಂದ ನೀರು ಇರುವ ಭಾಗದ ಮಧ್ಯಕ್ಕೆ ಜ್ವಾಲೆ ತಾಕುವಂತೆ ಹಿಡಿದುಕೊಳ್ಳಿ. ತಕ್ಷಣ ಬಲೂನು ಒಡೆಯುವುದಿಲ್ಲ, ಬದಲಾಗಿ ಬಲೂನಿಗೆ ಮಸಿ ಹಿಡಿಯುತ್ತದೆ.
ಉಷ್ಣವಾಹಕಗಳಿಗೆ ಸಂಬಂಧಿಸಿದ ಮಾಹಿತಿ ನಿಮಗಿದ್ದರೆ ಈ ವಿದ್ಯಮಾನಕ್ಕೆ ವೈಜ್ಞಾನಿಕ ವಿವರಣೆ ಕೊಡಲು ನಿಮಗೆ ಕಷ್ಟವಾಗುವುದಿಲ್ಲ.
(ವಿ ಸೂ: ದೀರ್ಘಕಾಲ ಹಿಡಿದರೆ ನೀರಿನ ಮೇಲ್ಮಟ್ಟದ ಅಂಚಿನಲ್ಲಿ ಒಡೆಯುತ್ತದೆ. ಈ ಪ್ರಯೋಗವನ್ನು ಮನೆಯ ಹೊರಗೆ ಅಥವ ಬಚ್ಚಲು ಮನೆಯಲ್ಲಿ ಮಾಡುವುದು ಉತ್ತಮ. ಅಕಸ್ಮಾತ್ ಬಲೂನು ಒಡೆದು ನೀರು ಚಲ್ಲಿದರೆ ಸ್ವಚ್ಛಗೊಳಿಸುವುದು ಸುಲಭ)
No comments:
Post a Comment