ಒಂದು ಪವಾಡ ಸದೃಶ ಕಾರ್ಯ
ಒಂದು ಚೆಂಬು ತುಂಬ ಅಕ್ಕಿ ಮತ್ತು ಒಂದು ಚಾಕು (ಚಿತ್ರ ೧) - ಇವಿಷ್ಟು ಸಾಮಗ್ರಿ ಇದ್ದರೆ ಈ ಪವಾಡ ಮಾಡಬಹುದು.

ಚಿತ್ರದಲ್ಲಿ ತೋರಿಸಿದ ಆಕಾರದ ತುದಿ ಉಳ್ಳ ಚಾಕು ಚೂಪು ತುದಿ ಉಳ್ಳ ಚಾಕುವಿಗಿಂತ ಉತ್ತಮ. ಚೆಂಬು ಅಕ್ಕಿಯನ್ನು ಮೇಜಿನ ಮೇಲೆ ಇಟ್ಟು ಚಾಕುವನ್ನು ಅಕ್ಕಿಯೊಳಗೆ ಚೆಂಬಿನ ತಳದ ತನಕ ತೂರಿಸಿ ಹೊರ ತೆಗೆಯಿರಿ (ಚಿತ್ರ ೨).

ಚಾಕು ಸರಾಗವಾಗಿ ಹೊರ ಬರುತ್ತದೆ. ಚಾಕು ಹೊರತೆಗೆಯುವಾಗ ಅದರೊಂದಿಗೆ ಅಕ್ಕಿ ತುಂಬಿದ ಚೆಂಬು ಕೂಡ ಮೇಲಕ್ಕೆ ಬರುವಂತೆ ಮಾಡುವುದು ಸಾಧ್ಯವೇ? (ಚಿತ್ರ ೩).

ಸಾಧ್ಯ! ನೀವು ಮಾಡ ಬೇಕಾದದ್ದು ಇಷ್ಟು - ಚಾಕುವನ್ನು ಚೆಂಬಿನ ತಳದ ತನಕ ಅಕ್ಕಿಯೊಳಗೆ ತೂರಿಸುವುದು ಮೇಲಿನ ತನಕ ಹೊರಗೆಳೆಯುವುದು ಪ್ರಕ್ರಿಯೆಯನ್ನು ನಿರಂತರವಾಗಿ ಮುಂದುವರಿಸಿ (ನೋಡಿ: http://www.youtube.com/watch?v=B0BMNEHzlyw&context=C3107dd8ADOEgsToPDskKEXk77bTv6OCnlF661nWsX). ಕ್ರಮೇಣ ಚೆಂಬಿನ ತಳದ ತನಕ ಅಕ್ಕಿಯೊಳಗೆ ಚಾಕು ತೂರಿಸುವುದು ಕಠಿನವಾಗತಡಗುತ್ತದೆ. ಕೊನೆಗೆ ಬಲ ಪ್ರಯೋಗಿಸಿ ತೂರಿಸ ಬೇಕಾಗುತ್ತದೆ. ಕೊನೆಗೊಂದು ಸಲ ಚಾಕಿನೊಂದಿಗೆ ಚೆಂಬೂ ಮೇಲಕ್ಕೆ ಬರುತ್ತದೆ. ಅಂದ ಹಾಗೆ ‘ಪವಾಡ’ ಎಂಬ ಭ್ರಮೆ ಮೂಡಿಸಲು ‘ತೂರಿಸುವುದು-ಹೊರಗೆಳೆಯುವುದು’ ಪ್ರಕ್ರಿಯೆಯ ಅವಧಿಯಲ್ಲಿ ನಿಮಗೆ ತೋಚಿದ ‘ಮಂತ್ರ’ ಹೇಳುತ್ತಿರಿ.

1 comment:
೧)ನೀವು ಅಪ್ಲೋಡ್ ಮಾಡಿದ ವಿಡಿಯೋದಲ್ಲಿ ಚೆಂಬು ಮೆಲಕ್ಕೆ ಬಂದ ಭಾಗ ಇಲ್ಲ ;
೨) ಹೀಗೆ ಆಗುವುದಕ್ಕೆ ವೈಜ್ಞಾನಿಕ ವಿವರಣೆ ಕೊಟ್ಟಿದ್ದರೆ ಚೆನ್ನಾಗಿತ್ತು.
Post a Comment