ಯಾವಯಾವ ರುಚಿಯನ್ನು ಗುರುತಿಸಬಲ್ಲ ರುಚಿಮೊಗ್ಗುಗಳು ನಾಲಗೆಯ ಯಾವಯಾವ ಭಾಗದಲ್ಲಿ ಸಾಪೇಕ್ಷವಾಗಿ ಹೆಚ್ಚು ನಿಬಿಡವಾಗಿವೆ ಎಂಬುದನ್ನು ನೀವೇ ಪತ್ತೆಹಚ್ಚಿ.
ವಯಸ್ಕರ ನೆರವಿನಿಂದ ೧-೨ ಚಮಚೆಯಷ್ಟು ಸಿಹಿ, ಉಪ್ಪು, ಹುಳಿ ಮತ್ತು ಕಹಿ ರುಚಿಯುಳ್ಳ ದ್ರವರೂಪೀ ಖಾದ್ಯ ವಸ್ತುಗಳನ್ನು ಪ್ರತ್ಯೇಕ ಬಟ್ಟಲುಗಳಲ್ಲಿ ತೆಗೆದುಕೊಳ್ಳಿ. ಹಲ್ಲುಕಡ್ಡಿ (ಟೂತ್ ಪಿಕ್) ಅಥವ ತತ್ಸಮನಾದ ೮-೧೦ ಕಡ್ಡಿಗಳನ್ನು ಸಂಗ್ರಹಿಸಿ. ಒಂದು ಕಡ್ಡಿಯನ್ನು ಸಿಹಿ ದ್ರಾವಣದಲ್ಲಿ ಅದ್ದಿ ನಿಮ್ಮ ನಾಲಗೆಯ ವಿಭಿನ್ನ ಭಾಗಗಳಿಗೆ ಮುಟ್ಟಿಸುವಂತೆ ನಿಮ್ಮ ಮಿತ್ರನಿಗೆ ಹೇಳಿ. ಚಿತ್ರದಲ್ಲಿ ತೋರಿಸಿದ ವಲಯಗಳ ಪೈಕಿ ಯಾವ ವಲಯದಲ್ಲಿ ಸಿಹಿಯ ಅನುಭವಕಡ್ಡಿ ಮುಟ್ಟಿದ ತಕ್ಷಣ ಆಯಿತು ಎಂಬುದನ್ನು ದಾಖಲಿಸಿ. ಉಂಟಾದ ಸಿಹಿ ರುಚಿಯನ್ನು ನೀರಿನಿಂದ ಬಾಯಿ ಮುಕ್ಕಳಿಸಿ ಹೋಗಲಾಡಿಸಿ. ತದನಂತರ ಇದೇ ರೀತಿ ಉಳಿದ ರುಚಿಗಳನ್ನು ಸುಲಭವಾಗಿ ಗುರುತಿಸಬಲ್ಲ ವಲಯಗಳನ್ನು ಪತ್ತೆಹಚ್ಚಿ. ಪ್ರತೀ ಬಾರಿಯೂ ಹೊಸ ಕಡ್ಡಿ ಉಪಯೋಗಿಸಲು ಮತ್ತು ಪ್ರತೀ ಪ್ರಯೋಗಾನಂತರ ಬಾಯಿ ಮುಕ್ಕಳಿಸಲು ಮರೆಯಬೇಡಿ.
ಇದೇ ರೀತಿ ೪-೫ ಮಿತ್ರರ ಮೇಲೂ ಪ್ರಯೋಗ ಮಾಡಿ. ಸಿಹಿ, ಉಪ್ಪು, ಹುಳಿ ಮತ್ತು ಕಹಿ ರುಚಿಗಳನ್ನು ನಾಲಗೆ ಯಾವ ವಲಯಗಳಲ್ಲಿ ಸುಲಭವಾಗಿ ಗುರುತಿಸಬಹುದು ಎಂಬುದರ ಕುರಿತು ಸಾರ್ವತ್ರೀಕರಣ ರೂಪಿಸಲು ಪ್ರಯತ್ನಿಸಿ. ಅದು ಚಿತ್ರದಲ್ಲಿ ತೋರಿಸಿದಂತೆ ಇರುವ ಸಾಧ್ಯತೆ ಹೆಚ್ಚು.
No comments:
Post a Comment