‘ಆವಶ್ಯಕತೆಗಳು (ನೀಡ್ಸ್)’ ವ್ಯಕ್ತಿಗತವಾದವು ಆಗಿದ್ದರೂ ಅವುಗಳ ಪೂರೈಕೆಗಾಗಿ ನಾವು ನಮ್ಮ ಪರಿಸರವನ್ನು (ಭೌತಿಕ ಮತ್ತು ಸಾಮಾಜಿಕ) ಅವಲಂಬಿಸಲೇ ಬೇಕು, ಪರಿಸರದೊಂದಿಗೆ ಅನ್ಯೋನ್ಯಕ್ರಿಯೆ ನಡೆಸಲೇ ಬೇಕು. ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಂಡು ಆವಶ್ಯಕತೆಗಳನ್ನು ಪೂರೈಸಿಕೊಳ್ಳುವುದನ್ನು ಕಲಿಯಲೇ ಬೇಕು. ಇದೇ ನಮ್ಮ ಸಮಸ್ಯೆಗಳ ಮೂಲ ಎಂದು ಆವಶ್ಯಕತೆಗಳು ಶೀರ್ಷಿಕೆಯ ‘ಬ್ಲಾಗ್’ನಲ್ಲಿ ಸೂಚ್ಯವಾಗಿ ತಿಳಿಸಿದ್ದೆ. ಆಧುನಿಕ ಜಗತ್ತಿನ ಸಂಕೀರ್ಣ ಸಂರಚನೆಯ ಸಮುದಾಯಗಳಲ್ಲಿ ಬದುಕುತ್ತಿರುವ ನಾವು ನಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಅನೇಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇರುವುದೇ ಅಂತು ಹೇಳಲು ಕಾರಣ. ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಉಂಟಾಗುವುದು ಏಕೆ?
ಪ್ರತೀ ವ್ಯಕ್ತಿಯನ್ನು ಜೀವನದಾದ್ಯಂತ, ಅರ್ಥಾತ್ ಗರ್ಭಧೃತ ಅಂಡಾಣುವಿನ ರೂಪದಲ್ಲಿ ಉದಯಿಸಿದ ಕ್ಷಣದಿಂದ ಕೊನೆಯ ಉಸಿರು ಎಳೆಯುವ ತನಕ ದೈನಂದಿನ ಕಾರ್ಯ ನಿರ್ವಹಣೆಯ ಸಹಜ ಸ್ಥಿತಿಯನ್ನು ಕಾಯ್ದುಕೊಳ್ಳಲು ಪೂರೈಸಲೇ ಬೇಕಾದ ’ಆವಶ್ಯಕತೆ’ಗಳ ಪೈಕಿ ಒಂದಲ್ಲ ಒಂದು ಕಾಡುತ್ತಲೇ ಇರುವುದೂ ಅವುಗಳ ಪೂರೈಕೆಗಾಗಿ ಪರಿಸರದೊಂದಿಗೆ ಅನ್ಯೋನ್ಯಕ್ರಿಯೆ ನಡೆಸಲೇ ಬೇಕಾಗಿರುವುದೂ ನಿಮಗೆ ತಿಳಿದೇ ಇದೆ. ತಾಪತ್ರಯಗಳು ಆರಂಭವಾಗುವುದೇ ಪರಿಸರದೊಂದಿಗೆ ಅನ್ಯೋನ್ಯಕ್ರಿಯೆ ನಡೆಸಬೇಕಾದ್ದರಿಂದ!
ಆವಶ್ಯಕತೆಯೊಂದು ವ್ಯಕ್ತಿಯನ್ನು ಕಾಡುತ್ತಿದೆ ಅಂದರೆ ಅದು ಅವನಲ್ಲಿ ಅದ್ವಿತೀಯವಾದ ತುಯ್ತ (ಟೆನ್ಷನ್), ತಳಮಳ, ಉದ್ವೇಗವನ್ನು ಉತ್ಪಾದಿಸಿ ಆಂತರಿಕ ಅಸಮತೋಲ ಸ್ಥಿತಿಯನ್ನು ಉಂಟುಮಾಡುವುದು ಎಂದರ್ಥ. ಈ ಅರ್ಥ ಮನೋಗತವಾಗಲೋಸುಗ ‘ನನಗೆ ಬಾಯಾರಿಕೆ ಆಗುತ್ತಿದೆ’, ‘ನನಗೆ ಹಸಿವು ಆಗುತ್ತಿದೆ’, ‘ನನಗೆ ಸುಸ್ತಾಗಿದೆ’, ‘ಈ ಜಗತ್ತಿನಲ್ಲಿ ನಾನು ಒಂಟಿ ಅನ್ನಿಸುತ್ತಿದೆ’ ಇಂತೆಲ್ಲ ಉದ್ಗರಿಸುವ ಮುನ್ನ ನಿಮ್ಮ ಅಂತರಂಗದಲ್ಲಿ ಏನು ನಡೆಯಿತು ಎಂಬುದರ ಕುರಿತು ಆಲೋಚಿಸಿ, ಆವಶ್ಯಕತೆಯ ಪೂರೈಕೆ ಮಾಡದಿದ್ದರೆ ಅದು ಹುಟ್ಟುಹಾಕಿದ ತೀವ್ರತೆ ಸಮಯ ಕಳೆದಂತೆ ಹೆಚ್ಚುತ್ತದೆ. ಎಷ್ಟು ತೀವ್ರತೆಯ ತುಯ್ತವನ್ನು ನೀವು ತಾಳಿಕೊಳ್ಳುವಿರಿ? ಅದಕ್ಕೂ ಒಂದು ಮಿತಿ ಇರಲೇಬೇಕಲ್ಲವೆ? ಖಂಡಿತ ಇದೆ. ಆದರೆ, ಎಲ್ಲರ ತುಯ್ತ ಸಹನ ಶಕ್ತಿಯ (ಟೆನ್ಷನ್ ಟಾಲರೆನ್ಸ್) ಮೇಲ್ಮಿತಿ ಒಂದೇ ಆಗಿರುವುದಿಲ್ಲ. (ಗಮನಿಸಿ: ಈ ಶಕ್ತಿಯ ವರ್ಧನೆಯೂ ಶಾಲೆಯಲ್ಲಿ ಮತ್ತು ಮನೆಯಲ್ಲಿ ನೀಡುವ ಶಿಕ್ಷಣದ ಗುರಿಗಳ ಪೈಕಿ ಒಂದು ಆಗಿರಬೇಕು, ದುರದೃಷ್ಟವಶಾತ್ ಈಗ ಆಗಿಲ್ಲ) ಮೇಲ್ಮಿತಿ ದಾಟಿದರೆ ಪ್ರಕಟವಾಗುವ ವರ್ತನೆಯಲ್ಲಿಯು ವ್ಯಕ್ತಿ ವ್ಯತ್ಯಾಸಗಳಿವೆ. ಎಂದೇ, ಈ ಕುರಿತು ಸಾರ್ವತ್ರೀಕೃತ ಹೇಳಿಕೆ ನೀಡುವುದು ಸರಿಯಲ್ಲ. ಅದೇನೇ ಇರಲಿ, ಆವಶ್ಯಕತೆ ಹುಟ್ಟುಹಾಕುವ ತುಯ್ತದಿಂದ ಮೂಡಿಬರುತ್ತದೆ ಆವಶ್ಯಕತೆಯನ್ನು ಪೂರೈಸುವ ಸಲುವಾಗಿ ಕಾರ್ಯೋನ್ಮುಖನಾಗುವಂತೆ ವ್ಯಕ್ತಿಯನ್ನು ಉದ್ದೀಪಿಸುವ ಚಾಲಶಕ್ತಿ (ಡ್ರೈವಿಂಗ್ ಫೋರ್ಸ್). ಚಾಲಶಕ್ತಿಯಿಂದ ಉದ್ದೀಪಿತನಾಗಿ ಕಾರ್ಯಕ್ಷೇತ್ರಕ್ಕೆ ಇಳಿದವ ತನ್ನ ಆವಶ್ಯಕತೆಯನ್ನು ಪೂರೈಸಬಲ್ಲವುಗಳ ಪೈಕಿ ನಿರ್ದಿಷ್ಟವಾದ ಯಾವುದೋ ಒಂದನ್ನು ಆಯ್ಕೆ ಮಾಡುತ್ತಾನೆ. ತದನಂತರ ಆಯ್ದದ್ದನ್ನು ಪಡೆಯಲು ನಿರ್ದಿಷ್ಟ ತಂತ್ರ ರೂಪಿಸಿ ಅದರಂತೆ ಮುನ್ನಡೆಯುತ್ತಾನೆ. ಆಯ್ದದ್ದನ್ನು ಪಡೆದಾಗ ಆವಶ್ಯಕತೆ ಪೂರೈಸುತ್ತದೆ, ತಜ್ಜನಿತ ತುಯ್ತ ಮಾಯವಾಗುತ್ತದೆ, ತುಯ್ತೋತ್ಪಾದಿತ ಚಾಲಶಕ್ತಿಯೂ ಮಾಯವಾಗುತ್ತದೆ. ತತ್ಸಂಬಂಧದ ಬಾಹ್ಯ ಚಟುವಟಿಕೆಯೂ ನಿಲ್ಲುತ್ತದೆ. ಆಂತರಿಕ ಸಮತೋಲ ಪುನಃಸ್ಥಾಪನೆಯಾಗಿ ವ್ಯಕ್ತಿ ಸಂತುಷ್ಟನಾಗುತ್ತಾನೆ. ಜೀವನದಾದ್ಯಂತ ಹೀಗೇ ಜರಗುವಂತೆ ಇದ್ದಿದ್ದರೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಆವಶ್ಯಕತೆಯೇ ಇರುತ್ತಿರಲಿಲ್ಲ. ದುರದೃಷ್ಟವಶಾತ್ ವಾಸ್ತವಿಕತೆ ಇಷ್ಟು ಸರಳವಲ್ಲ.
ಆವಶ್ಯಕತೆಗಳು ನಮ್ಮನ್ನು ಕಾಡದೇ ಇರುವ ಕ್ಷಣವೇ ಇಲ್ಲ. ಪ್ರತಿಯೊಂದು ಕ್ಷಣದಲ್ಲಿಯೂ ಒಂದಲ್ಲ ಒಂದು ಆವಶ್ಯಕತೆ ನಮ್ಮನ್ನು ಕಾಡುತ್ತಿರುತ್ತದೆ. ಅನೇಕ ಆವಶ್ಯಕತೆಗಳನ್ನು ಶಾಶ್ವತವಾಗಿ ಪೂರೈಸಲು ಸಾಧ್ಯವೇ ಇಲ್ಲ. ಆದ್ದರಿಂದ ಪ್ರತಿಯೊಬ್ಬನೂ ಪ್ರತೀ ಕ್ಷಣವೂ ಏನಾದರೊಂದು ಚಟುವಟಿಕೆಯಲ್ಲಿ (ಕನಿಷ್ಠ ಪಕ್ಷ ಉಸಿರಾಟದಲ್ಲಿ) ತೊಡಗಿರುತ್ತಾನೆ. ಯಾವುದೇ ಆವಶ್ಯಕತೆಯ ಪೂರೈಕೆ ಆಗುವುದೂ ಆಗದಿರುವುದು ಭೌತಿಕ/ಸಾಮಾಜಿಕ ಪರಿಸರವನ್ನು ಮಾತ್ರವಲ್ಲದೆ ನಮ್ಮ ಸಾಮರ್ಥ್ಯಗಳನ್ನೂ (ಅಂತಸ್ಥವಾಗಿರುವ ಜ್ಞಾನ, ಕುಶಲತೆ, ಮನೋಧರ್ಮಗಳ ವಿಶಿಷ್ಟ ಪಾಕ) ಅವಲಂಬಿಸಿರುತ್ತದೆ. ಪ್ರತಿಕೂಲ ಭೌತಿಕ/ಸಾಮಾಜಿಕ ಪರಿಸರ, ಸಾಮರ್ಥ್ಯದ ಅಭಾವ - ಇವೆರಡೂ ಒಟ್ಟಾಗಿ ಅಥವ ಇವೆರಡರ ಪೈಕಿ ಒಂದು ನಮ್ಮ ಆವಶ್ಯಕತೆಯ ಪೂರೈಕೆಗೆ ಅಡ್ಡಿ ಉಂಟು ಮಾಡಬಹುದು. ಇಂಥ ಎಲ್ಲ ಸನ್ನಿವೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಆವಶ್ಯಕತೆ ಪೂರೈಸಿಕೊಳ್ಳಲು ಸಾಧ್ಯವೇ ಇಲ್ಲ. ಯಾವ ಸನ್ನಿವೇಶದಲ್ಲಿ ಎಷ್ಟು ಹೊಂದಾಣಿಕೆ ಮಾಡಿಕೊಳ್ಳ ಬೇಕು ಎಂಬ ತೀರ್ಮಾನ ವ್ಯಕ್ತಿಯ ಅಂತಸ್ಥ ಮೌಲ್ಯಾಗಳನ್ನು ಆಧರಿಸಿರುತ್ತದೆ. ಎಂದೇ, ಕೆಲವರು ಕೆಲವು ಹೊಂದಾಣಿಕೆಗಳನ್ನು ಬಲು ಸುಲಭವಾಗಿ ಮಾಡಿಕೊಳ್ಳುತ್ತಾರೆ, ಕೆಲವರು ಯಾವ ಸನ್ನಿವೇಶದಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಇನ್ನು ಕೆಲವರು ಎಲ್ಲ ಸನ್ನಿವೇಶಗಳಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಕೆಲವರು ತಮ್ಮ ಉಳಿವಿಗೆ ಕುತ್ತು ಬಂದಾಗ ಮಾತ್ರ ಹೊಂದಾಣಿಕೆ ಮಾಡಿಕೊಳಲ್ಳುತ್ತಾರೆ, ಕೆಲವರು ತಮ್ಮ ಪ್ರಾಣ ಹೋದರೂ ಮಾಡಿಕೊಳ್ಳಲು ಒಪ್ಪುವುದಿಲ್ಲ.
ಆವಶ್ಯಕತೆಯನ್ನು ಪೂರೈಸಬಲ್ಲದ್ದು ಯಾವುದು ಅಥವ ಏನು ಎಂಬುದನ್ನು ತೀರ್ಮಾನಿಸುವ ಪ್ರಕ್ರಿಯೆಯೇ ಗುರಿ ನಿರ್ಧರಿಸುವಿಕೆ. ಆವಶ್ಯಕತೆಯ ಸ್ವರೂಪ, ತನ್ನ ಮತ್ತು ಪರಿಸರ ವಿಧಿಸುವ ಇತಿಮಿತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಗುರಿ ನಿರ್ಧರಿಸಬೇಕು. ಈ ಹಂತದಲ್ಲಿಯೇ ಕೆಲವರು ಎಡವುತ್ತಾರೆ. ಇವರು ಮುಂದೆ ತಮ್ಮ ಗುರಿಯನ್ನು ಬದಲಿಸುವುದರ ಮುಖೇನ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಗುತ್ತದೆ. ಸಾಧನೀಯವಾದ ಗುರಿಯೇ ಆಗಿದ್ದರೂ ಯುಕ್ತ ವಿಧಾನದಲ್ಲಿ ಸಾಧನೆ ಮಾಡಬೇಕಲ್ಲವೇ? ಗುರಿ ಸಾಧನೆಯ ವಿಧಾನದ ಆಯ್ಕೆಯಲ್ಲಿಯೂ ತಪ್ಪಾಗುವ ಸಾಧ್ಯತೆ ಇದೆ. ಅಂತಾದರೆ ಮುಂದೆ ವಿಧಾನ ಬದಲಿಸುವುದರ ಮೂಲಕ ಅಥವ ಗುರಿಯನ್ನೇ ಬದಲಿಸುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಗುತ್ತದೆ.
ಯಾವುದೇ ಹಂತದಲ್ಲಿ ನಾವು ಎಡವುವಂತೆ ಮಾಡುವ ತಡೆಗಳು ಯಾವುವು? ಕೆಲವು ತಡೆಗಳ ಮೂಲ ನಾವೇ ಆಗಿರುತ್ತೇವೆ. ಸಾಮರ್ಥ್ಯ ಇಲ್ಲದಿದ್ದರೂ ಇದೆ ಎಂದು ತಿಳಿದಿರುವುದು, ಇರುವ ಸಾಮರ್ಥ್ಯದ ಉತ್ಪ್ರೇಕ್ಷಿತ ಕಲ್ಪನೆ, ಸಾಮರ್ಥ್ಯ ಇದ್ದರೂ ಇಲ್ಲ ಎಂದು ನಂಬಿರುವುದು, ನಿಜವಾಗಲೂ ಸಾಮರ್ಥ್ಯ ಇಲ್ಲದಿರುವುದು, ದೈಹಿಕ ನ್ಯೂನತೆಗಳು, ಮಾನಸಿಕ ಸಂಘರ್ಷಗಳನ್ನು ಅಥವ ಉಭಯಸಂಕಟಗಳನ್ನು (ಉದಾ: ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಲಿ? ಆಪೇಕ್ಷಿತ ಆಯ್ಕೆಗೆ ಲಗತ್ತಿಸಿದಂತೆ ಅನಪೇಕ್ಷಿತ ಫಲಗಳೂ ಇವೆಯಾದ್ದರಿಂದ ಆಯ್ಕೆ ಮಾಡಲೋ ಬೇಡವೋ?) ಪರಿಹರಿಸಲು ಅಸರ್ಮಥತೆ - ಇವು ವ್ಯಕ್ತಿಜನ್ಯ ತಡೆಗಳು. ಕೆಲವು ತಡೆಗಳ ಮೂಲ ಸಾಮಾಜಿಕ ಪರಿಸರದಲ್ಲಿ ಇರುತ್ತದೆ. ಸಮಾಜ ರೂಪಿತ ನಿಯಮಗಳು, ಸಂಪ್ರದಾಯಗಳು - ಇವು ಸಮಾಜಜನ್ಯ ತಡೆಗಳು. ಕೆಲವೊಮ್ಮೆ ನೈಸರ್ಗಿಕ ವಿದ್ಯಮಾನಗಳೇ (ಉದಾ: ಪ್ರವಾಹ, ಬರಗಾಲ, ಭೂಕಂಪ---) ತಡೆಗಳಾಗುವುದೂ ಉಂಟು. ತಡೆಯ ಸ್ವರೂಪ ಏನೇ ಇರಲಿ, ಅದನ್ನು ನಿವಾರಿಸದೇ ಇದ್ದರೆ ಆವಶ್ಯಕತೆ ಪೂರೈಸಿಕೊಳ್ಳಲು ಸಾಧ್ಯವಿಲ್ಲ. ಅನೇಕ ಸಂದರ್ಭಗಳಲ್ಲಿ ತಡೆಯನ್ನು ನಾಶ ಮಾಡಲು ಸಾಧ್ಯವಾಗುವುದಿಲ್ಲ. ಹಾಗೆಂದು ಆವಶ್ಯಕತೆಯನ ಪೂರೈಕೆಯನ್ನು ನಿರ್ಲಕ್ಷಿಸುವಂತೆಯೂ ಇಲ್ಲ. ಆದ್ದರಿಂದ ನಮ್ಮ ಕಾರ್ಯವಿಧಾನ ಬದಲಿಸಿ ತಡೆಯನ್ನು ದಾಟಿ ಗುರಿ ಸಾಧಿಸಬೇಕು ಅಥವ ಗುರಿಯನ್ನೇ ಬದಲಿಸಬೇಕು. ಇದೇ ಹೊಂದಾಣಿಕೆ.
ಇಡೀ ಜೀವನವೇ ಹೊಂದಾಣಿಕೆಗಳ ಸರಪಣಿ ಅಲ್ಲವೇ ಎಂಬುದರ ಕುರಿತು ಈಗ ನೀವೇ ಆಲೋಚಿಸಿ.

No comments:
Post a Comment