Pages

27 July 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೩೬

ಚಂದ್ರ ಭೂಮಿಯನ್ನು, ಭೂಮಿ ಸೂರ್ಯನನ್ನು ಪರಿಭ್ರಮಿಸದಿದ್ದರೆ----!

ಬಾಲ್ ಪಾಇಂಟ್ ಪೆನ್ನಿನ ಎರಡೂ ತುದಿಗಳಲ್ಲಿ ತೆರೆದಿರುವ ಖಾಲಿ ಕೊಳವೆ ತೆಗೆದುಕೊಳ್ಳಿ. ಸುಮಾರು ೧/೨  ಅಥವ ೩/೪ ಮೀ ಉದ್ದದ ಟ್ವೈನ್ ದಾರದ ತುಂಡೊಂದನ್ನು ಕೊಳವೆಯ ಮೂಲಕ ತೂರಿಸಿ. ದಾರದ ಒಂದು ತುದಿಯಲ್ಲಿ ೧-೨ ಸೀಮೆಸುಣ್ಣದ ಅಥವ ಹೆಚ್ಚುಕಮ್ಮಿ ಅಷ್ಟೇ ತೂಕದ ಬೇರೆ ಯಾವುದಾದರೂ ಕಡ್ಡಿಗಳನ್ನು ಕಟ್ಟಿ. ಇನ್ನೊಂದು ತುದಿಗೆ ಅವಕ್ಕಿಂತ ಹೆಚ್ಚುಕಮ್ಮಿ ಎರಡು ಪಟ್ಟು ಹೆಚ್ಚು ತೂಕದ ಯಾವುದಾರೂ ವಸ್ತುವನ್ನು ಕಟ್ಟಿ. ಕಡಿಮೆ ತೂಕದ ವಸ್ತು ಮೇಲೆ ಇರುವಂತೆ ಸಾಧನವನ್ನು ಭೂಮಿಗೆ ಲಂಬವಾಗಿ ಹಿಡಿದುಕೊಳ್ಳಿ. ಹೀಗೆ ಹಿಡಿದುಕೊಂಡಾಗ ಕಡಿಮೆ ತೂಕದ ವಸ್ತುವನ್ನು ಹೆಚ್ಚು ತೂಕದ್ದು ಕೊಳವೆಯತ್ತ ಎಳೆಯುತ್ತದಲ್ಲವೆ? ಕಡಿಮೆ ತೂಕದ ವಸ್ತು ಕೊಳವೆಯ ಮೇಲ್ತುದಿಯಲ್ಲಿ ನೇತಾಡುವಂತೆ ಹೆಚ್ಚು ತೂಕದ್ದನ್ನು ತುಸು ಎತ್ತಿ ಹಿಡಿಯಿರಿ. ಹೀಗೆ ಹಿಡಿದುಕೊಂಡಿರುವಾಗಲೇ, ಕಡಿಮೆ ತೂಕದ ವಸ್ತು ಕೊಳವೆಯನ್ನು ಅಕ್ಷವಾಗಿಸಿಕೊಂಡು ಅದರ ಸುತ್ತ ಪರಿಭ್ರಮಿಸುವಂತೆ ಕೊಳವೆಯನ್ನು ತಿರುಗಿಸಿ. ಎಷ್ಟು ವೇಗದಲ್ಲಿ ತಿರುಗಿಸಿದರೆ ಹೆಚ್ಚು ತೂಕದ ವಸ್ತುವನ್ನು ಸ್ವತಂತ್ರವಾಗಿ ನೇತಾಡಲು ಬಿಟ್ಟರೂ ಅದು ಅಕ್ಷದತ್ತ ಎಳೆಯಲ್ಪಡದೆ ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಪರಿಭ್ರಮಿಸುತ್ತಲೇ ಇರುತ್ತದೆ ಎಂಬುದನ್ನು ಪತ್ತೆಹಚ್ಚಿ. ಈ ವೇಗದಲ್ಲಿ ಹೆಚ್ಚಳವಾದರೆ ಅದು ಹೆಚ್ಚು ತೂಕದ್ದನ್ನು ಮೇಲಕ್ಕೆಳೆದು ತನ್ನ ಕಕ್ಷೆಯ ತ್ರಿಜ್ಯವನ್ನು ಹೆಚ್ಚಿಸಿಕೊಳ್ಳುವ ಹಾಗೂ ವೇಗದಲ್ಲ್ಲಿ ಕಡಿತ ಉಂಟಾದರೆ ಅಕ್ಷದತ್ತ ಚಲಿಸಿ ಕಕ್ಷೆಯ ತ್ರಿಜ್ಯವನ್ನು ಕಮ್ಮಿ ಮಾಡಿಕೊಳ್ಳುವ ವಿದ್ಯಮಾನ ವೀಕ್ಷಿಸಿ.



ಚಂದ್ರ ಭೂಮಿಯ ಸುತ್ತ ಅಥವ ಭೂಮಿ ಸೂರ್ಯನ ಸುತ್ತ ನಿರ್ದಿಷ್ಟ ವೇಗದಲ್ಲಿ ಪರಿಭ್ರಮಿಸದಿದ್ದರೆ ಏನಾದೀತು ಎಂಬುದನ್ನು ತರ್ಕಿಸಿ.

No comments: