೧. ಮೇಜಿನ ಮೇಲೆ ಒಂದು ಬಕೆಟ್ ನೀರನ್ನು ಇಡಿ. ಕೆಳಗೆ ನೆಲದ ಮೇಲೆ ಒಂದು ಖಾಲಿ ಬಕೆಟ್ ಇಡಿ. ಮೇಲಿನ ಮೇಲಿನ ಬಕೆಟ್ಟಿನ ಬಾಯಿ ಮತ್ತು ಕೆಳಗಿನ ಬಕೆಟ್ಟಿನ ತಳ ನಡುವಿನ ಅಂತರದ ಸುಮಾರು ಇ.೫ ಪಟ್ಟು ಹೆಚ್ಚು ಉದ್ದವಿರುವ ಒಂದು ಸಪುರವಾದ ರಬ್ಬರ್ ಅಥವ ಪ್ಲಾಸ್ಟಿಕ್ ಕೊಳವೆಯನ್ನು ತೆಗೆದುಕೊಳ್ಳಿ. ಮೊದಲು ಅದರ ಒಂದು ತುದಿಯನ್ನು ಮೇಲಿನ ಬಕೆಟ್ಟಿನ ನೀರಿನಲ್ಲಿ ಮುಳುಗಿಸಿ ಹಿಡಿದುಕೊಂಡು ತದನಂತರ ಕೊಳವೆಯ
ಮೇಲ್ಮಟ್ಟದಲ್ಲಿ ಇರುವ ಧಾರಕದ ಒಳಗಿರುವ ಯಾವುದೇ ದ್ರಾವಕವನ್ನು ಕೆಳಮಟ್ಟದಲ್ಲಿ ಇರುವ ಧಾರಕಕ್ಕೆ ವರ್ಗಾಯಿಸಲು ಬಳಸುವ ಅಸಮ ಬಾಹುಗಳು ಉಳ್ಳ ತಲೆಕೆಳಗಾದ U ಆಕಾರದ ಕೊಳವೆಯೇ ಸೈಫನ್. ಚಿಕ್ಕ ಬಾಹು ಮೇಲಿನ ಧಾರಕದೊಳಗೂ ಉದ್ದನೆಯ ಬಾಹು ಕೆಳಗಿನ ಧಾರಕದೊಳಗೂ ಇರುವುದನ್ನು ಗಮನಿಸಿ.
ಸೈಫನ್ನಿನ ಮೂಲಕ ನೀರು ಹರಿಯುತ್ತಿರುವಾಗ ಕೆಳಗಿನ ಬಕೆಟ್ಟನ್ನು ನಿಧಾನವಾಗಿ ಮೇಲಕ್ಕೆತ್ತಿ. ನೀರು ಹರಿಯುವುದು ನಿಂತಾಗ ಎರಡೂ ಬಕೆಟ್ಟುಗಳಲ್ಲಿ ನೀರಿನ ಸಾಪೇಕ್ಷ ಮಟ್ಟಗಳನ್ನು ಗಮನಿಸಿ. ನೀರು ಕೆಳಗಿನಿಂದ ಮೇಲಕ್ಕೆ ನಿಜವಾಗಿ ಹರಿಯುತ್ತದೆಯೇ? ಸೈಫನ್ನಿನ ಚಿಕ್ಕ ಬಾಹುವಿನಲ್ಲಿ ನೀರು ಮೇಲೇರಲು ಕಾರಣ ಏನು? ಈ ಕಾರಣದಿಂದ ನೀರು ಎಷ್ಟು ಮೇಲೇರಲು ಸಾಧ್ಯ ಎಂಬುದನ್ನು ಆವಿಷ್ಕರಿಸುವ ಬಯಕೆ ನಿಮಗಿದ್ದರೆ ಮೇಲ್ಮಟ್ಟದಲ್ಲಿ ಸುಮಾರು ೩೫ ಅಡಿ ಎತ್ತರದ ಬಕೆಟ್ ಇಡಬೇಕಾದೀತು! (ಲೋಟ ಮತ್ತು ಸೈಕಲ್ ವಾಲ್ ಟ್ಯೂಬ್ ಉಪಯೋಗಿಸಿಯೂ ಈ ಪ್ರಯೋಗ ಮಾಡಬಹುದು)
೨. ಯಾವುದಾದರೂ ಒಂದು ಹಳೆಯ ಪ್ಲಾಸ್ಟಿಕ್ ಡಬ್ಬಿಯ ತಳಭಾಗದಲ್ಲಿ ಒಂದು ರಂಧ್ರ ಮಾಡಿ. ಆ ರಂಧ್ರದ ಮೂಲಕ ಒಂದು ರಬ್ಬರ್ ಅಥವ ಪ್ಲಾಸ್ಟಿಕ್ ನ ಸಪುರವಾದ ಕೊಳವೆಯನ್ನು ತೂರಿಸಿ. ಡಬ್ಬಿಯ ಒಳಗಿರುವ ಕೊಳವೆಯ ಭಾಗವನ್ನು
ಇಷ್ಟು ಪೂರ್ವಸಿದ್ಧತೆ ಮಾಡಿದ ನಂತರ ಡಬ್ಬಿಗೆ ನಿಧಾನವಾಗಿ ನೀರು ತುಂಬಿಸಿ. ಡಬ್ಬಿಯಲ್ಲಿ ನೀರಿನ ಮಟ್ಟ ನಿರ್ದಿಷ್ಟ ಸ್ಥಾನವನ್ನು ದಾಟಿದೊಡನೆ ತಾನಾಗಿ ಕೊಳವೆಯ ಮೂಲಕ ಡಬ್ಬಿಯ ಹೊರಕ್ಕೆ ಹರಿದು ಹೋಗುವ ವಿದ್ಯಮಾನ ವೀಕ್ಷಿಸಿ. ಕಾರಣ ತರ್ಕಿಸಿ.
ಈ ಪ್ರಯೋಗದಲ್ಲಿ ನೀವು ಆವಿಷ್ಕರಿಸಿದ ಅಂಶದ ನೆರವಿನಿಂದ ಹಿಂದಿನ ಪ್ರಯೋಗದಲ್ಲಿ ಸೈಫನ್ ಮೂಲಕ ನೀರು ಹರಿಯುವಂತೆ ಮಾಡಲು ಅನುಸರಿಸಿದ ತಂತ್ರಗಳಲ್ಲಿ ಹುದುಗಿದ್ದ ತತ್ವ ಏನು ಎಂಬುದನ್ನು ಪತ್ತೆ ಹಚ್ಚಿ. ಎಂಬುದನ್ನು ವಿವರಿಸಿ.
ಸೈಫನ್ ಕಾರಂಜಿ
ಸುಮಾರು ೫ ಅಡಿ ಉದ್ದ ಇರುವ ಸೈಕಲ್ ವಾಲ್ ಟ್ಯೂಬ್, ವಾಯು ಒಳನುಸುಳದಷ್ಟು ಬಿಗಿಯಾದ ರಬ್ಬರ್ ಬಿರಡೆ ಇರುವ ಖಾಲಿ ಔಷಧದ ಬಾಟಲ್ (ದೊಡ್ಡದಾದಷ್ಟೂ ಒಳ್ಳೆಯದು) ಒಂದನ್ನು ಸಂಗ್ರಹಿಸಿ. ಆಸ್ಪತ್ರೆಗಳಲ್ಲಿ ಇದನ್ನು ಸುಲಭವಾಗಿ ಪಡೆಯಬಹುದು. ಬಾಟಲನ್ನು ಚೆನ್ನಾಗಿ ತೊಳೆಯಿರಿ. ಸಾಮಾನ್ಯ ಬಾಲ್ ಪಾಇಂಟ್ ಪೆನ್ನಿನ (ಜಿಲ್ ಪೆನ್ ಅಲ್ಲ) ಇಂಕ್ ಅಂಟಿಕೊಂಡಿರದ ಎರಡು ಖಾಲಿ ರೀಫಿಲ್ ಕೊಳವೆಗಳನ್ನು ಸಂಗ್ರಹಿಸಿ. ಅಕಸ್ಮಾತ್ ಅಲ್ಲಲ್ಲಿ ಇಂಕ್ ಅಂಟಿಕೊಂಡಿದ್ದರೆ ಡಿಟರ್ಜೆಂಟಿನ ಪ್ರಬಲ ದ್ರಾವಣ ಅಥವ ಗ್ಲಿಸರಿನ್ ನಿಂದ ತೊಳೆದು ತೆಗೆಯಿರಿ. ದಪ್ಪನೆಯ ಸೂಜಿಯೊಂದನ್ನು ರಬ್ಬರ್ ಬಿರಡೆಯ ಕೇಂದ್ರಬಿಂದುವಿನ ಎರಡು ಪಕ್ಕಗಳಲ್ಲಿ ತೂರಿಸಿ ರಂಧ್ರ ಮಾಡಿ. ಸೂಜಿ ತೆಗೆದೊಡನೆ ಮಾಡಿದ ರಂಧ್ರಗಳು ಸುಭವಾಗಿ ಗೋಚರಿಸುವುದಿಲ್ಲ ಎಂಬುದನ್ನು ಗಮನಿಸಿ. ಎರಡು ರೀಫಿಲ್ ಕೊಳವೆಗಳನ್ನು ರಬ್ಬರ್ ಬಿರಡೆಗೆ ಚಿತ್ರದಲ್ಲಿ ತೋರಿಸಿದಂತೆ ಸೇರಿಸಿ. ಒಂದು ರೀಫಿಲ್ಲಿನ ತುದಿ
ಕಾರಂಜಿಯನ್ನು ಚಾಲೂ ಮಾಡುವ ವಿಧಾನ:- ಕೆಳಗಿನ ಖಾಲಿ ಪಾತ್ರೆಯ ಒಳಗಿರುವ ರಬ್ಬರ್ ಕೊಳವೆಯ ತುದಿಯನ್ನು ಎತ್ತಿ ಮೇಲಿನ ಪಾತ್ರೆಯ ನೀರಿನಲ್ಲಿ ಮೂಳುಗಿಸಿ ಹಿಡಿದುಕೊಳ್ಳಿ. ಮೇಲಿನ ಪಾತ್ರೆಯ ನೀರಿನಲ್ಲಿ ಮುಳುಗಿದ್ದ ರಬ್ಬರ್ ಕೊಳವೆಯ ತುದಿಯನ್ನು ಹೊರತೆಗೆದು ಬಾಯಿಯಿಂದ ಹೀರುವುದರ ಮೂಲಕ ಬಾಟಲಿನ ಅರ್ಧದಷ್ಟು ನೀರು ತುಂಬಿಸಿ. ತಕ್ಷಣ ರಬ್ಬರ್ ಕೊಳವೆಗಳನ್ನು ಮೊದಲಿನಂತೆಯೇ ಇಡಿ. ಮೇಲಿನ ಪಾತ್ರೆಯಲ್ಲಿ ನೀರು ಇರುವ ತನಕ ಬಾಟಲಿನ ಒಳಗೆ ಪುಟ್ಟ ಕಾರಂಜಿ ಚಿಮ್ಮವುದನ್ನು ನೋಡಿ ಆನಂದಿಸಿ.
ಈ ರೀತಿ ಆಗಲು ಕಾರಣ ಏನು? ನೀವೇ ಆಲೋಚಿಸಿ. ಇದನ್ನು ಸೈಫನ್ ಕಾರಂಜಿ ಎಂದು ಕರೆಯಲು ಕಾರಣ ಏನು? ಊಹಿಸಿ.
No comments:
Post a Comment