ರಾಮಾಯಣಕ್ಕೆ ಸಂಬಂಧಿಸಿದಂತೆ ಕೆಲವು ದಿನಾಂಕಗಳು. ಈ ದಿನಾಂಕಗಳನ್ನು ಅಮೇರಿಕದ ನಾಸಾ ಸಂಸ್ಥೆ ಉಪಯೋಗಿಸುವ ‘Archeo-Astronomy’ ತಂತ್ರಾಂಶದ ನೆರವಿನಿಂದ ಲೆಕ್ಕಿಸಲಾಗಿದೆ ಎಂದು ಇದರ ಸಂಶೋಧಕರು ಹೇಳಿಕೊಂಡಿದ್ದಾರೆ. ಆಸಕ್ತರು ಮುಂದೆ ಕೊಟ್ಟಿರುವ ಅಂತರ್ಜಾಲ ವಿಳಾಸಗಳಿಗೆ ಭೇಟಿ ನೀಡಬಹುದು.
೧. ಶ್ರೀರಾಮನ ಜನನ: ೧೦ ಜನವರಿ, ೫೧೧೪ ಕ್ರಿ ಪೂ. ಮಧ್ಯಾಹ್ನ ೧೨ - ೧ ಗಂಟೆ ನಡುವೆ. (ಚೈತ್ರ ಶುಕ್ಲ ನವಮಿ)
೨. ಭರತನ ಜನನ: ೧೧ ಜನವರಿ, ೫೧೧೪ ಕ್ರಿ ಪೂ. ಬೆಳಿಗ್ಗೆ ೪.೩೦ ಗಂಟೆ
೩. ಶ್ರೀರಾಮ ಪಟ್ಟಾಭಿಷೇಕದ ಹಿಂದಿನ ದಿನ: ೪ ಜನವರಿ ೫೦೮೯ ಕ್ರಿ ಪೂ.
೪. ಶ್ರೀರಾಮ ವನವಾಸಕ್ಕೆ ಹೊರಟದ್ದು: ೫ ಜನವರಿ, ೫೦೮೯ ಕ್ರಿ ಪೂ
೫. ಖರ, ದೂಷಣ ಸಂಬಂಧಿತ ವಿದ್ಯಮಾನ: ೭ ಅಕ್ಟೋಬರ್, ೫೦೭೭ ಕ್ರಿ ಪೂ. (ಸೂರ್ಯಗ್ರಹಣದ ದಿನ, ಪಂಚವಟಿಯಲ್ಲಿ ಗರಿಷ್ಟ ಮಿತಿ ತಲುಪಿದ್ದು ೧೫.೧೦ ಗಂಟೆಗೆ)
೬. ವಾಲಿಯ ವಧೆ: ೩ ಏಪ್ರಿಲ್, ೫೦೭೬ ಕ್ರಿ ಪೂ (ಸೂರ್ಯ ಗ್ರಹಣ, ಅಮವಾಸ್ಯೆ ಆಷಾಢ ಬೆಳಿಗ್ಗೆ)
೭. ಹನುಮಂತ ಲಂಕೆಗೆ ಭೇಟಿ ನೀಡಿದ್ದು: ೧೨ ಸೆಪ್ಟೆಂಬರ್, ೫೦೭೬ ಕ್ರಿ ಪೂ. (ಚಂದ್ರ ಗ್ರಹಣ)
೮. ಲಂಕೆಯಿಂದ ಹನುಮಂತ ವಾಪಾಸಾದದ್ದು: ೧೪ ಸೆಪ್ಟೆಂಬರ್, ೫೦೭೬ ಕ್ರಿ ಪೂ.
೯. ಲಂಕೆಗೆ ವಾನರಸೈನ್ಯ ಹೋದದ್ದು: ೨೦ ಸೆಪ್ಟೆಂಬರ್, ೫೦೭೬ ಕ್ರಿ ಪೂ.
೧೦. ರಾವಣನ ವಧೆ: ೪ ಡಿಸೆಂಬರ್, ೫೦೭೬ ಕ್ರಿ ಪೂ.
೧೧. ಶ್ರೀರಾಮ ೧೪ ವರ್ಷಗಳ ವನವಾಸ ಪೂರ್ಣಗೊಳಿಸಿದ್ದು: ೨ ಜನವರಿ, ೫೦೭೫ ಕ್ರಿ ಪೂ.
1. http://www.ramayanaresearch.com/index.html
2. http://www.lazydesis.com/chai-time/215378-dating-ramayana-period-my-fantastic-research.html
3. http://historicalrama.org/home.html
No comments:
Post a Comment