Pages

25 February 2014

ತಾರಾವಲೋಕನ ೯ - ವೀಕ್ಷಣಾ ಮಾರ್ಗದರ್ಶಿ, ಜುಲೈ

.ಜುಲೈ
ತಾರಾ ಪಟ . ವಾಸ್ತವಿಕ


ತಾರಾ ಪಟ . ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಸಹಿತ



ತಾರಾ ಪಟ . ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಮತ್ತು ರಾಶಿಗಳ ಸೀಮಾರೇಖೆ ಮತ್ತು
ಅಕರಾದಿಯಾಗಿ ಕನ್ನಡದ ರಾಶಿನಾಮಗಳನ್ನು ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಸಹಿತ



ತಾರಾ ಪಟ . ರಾಶಿಚಕ್ರ



ವೀಕ್ಷಣಾ ಮಾರ್ಗದರ್ಶಿ

ಜುಲೈ ೧೫ ರಂದು ರಾತ್ರಿ ಸುಮಾರು ಗಂಟೆಗೆ ನಿಮ್ಮ ವೀಕ್ಷಣಾ ಸ್ಥಳದಲ್ಲಿ ಪೂರ್ವದಿಗಂತದಿಂದ ಖಮಧ್ಯದತ್ತ ಒಮ್ಮೆ ನಿಧಾನವಾಗಿ ನೋಡಿ. ಖಮಧ್ಯ ಸಮೀಪದಲ್ಲಿ ಉಜ್ವಲ ತಾರೆಯೊಂದು ನಿಮ್ಮ ಗಮನ ಸೆಳೆಯುತ್ತದೆ. ಇದು ಸ್ವಾತೀ ನಕ್ಷತ್ರ ಎಂದು ಗುರುತಿಸಲಾಗುತ್ತಿರುವ ತಾರೆ. ಇದು ಸಹದೇವ ರಾಶಿಯ ಸದಸ್ಯ ತಾರೆ. ಇವನ್ನು ಗುರುತಿಸಿದ ಬಳಿಕ ಈ ಮುಂದಿನ ಸೂಚನೆಗಳಿಗೆ ಅನುಗುಣವಾಗಿ ವೀಕ್ಷಣೆ ಮುಂದುವರಿಸಿ.


ಹಂತ ೧: ಮಾಡಬೇಕಾದ ವೀಕ್ಷಣೆಗಳು ಇವು:
* ಮೊದಲು ಫೆಬ್ರವರಿ ಮಾರ್ಗದರ್ಶಿಯ ಹಂತ ಮತ್ತು ರಲ್ಲಿ ವಿವರಿಸಿದಂತೆ ಸಿಂಹ ಮತ್ತು ಲಘುಸಿಂಹ ರಾಶಿಗಳನ್ನೂ ಸಪ್ತರ್ಷಿಮಂಡಲ ಮತ್ತು ಷಷ್ಟಕ ರಾಶಿಗಳನ್ನೂ ಗುರುತಿಸಿ. ಇವು ಈಗ ಪಶ್ಚಿಮ ದಿಗಂತದ ಸಮೀಪದಲ್ಲಿವೆ.
* ತದನಂತರ ಮಾರ್ಚ್‌ ಮಾರ್ಗದರ್ಶಿ ಹಂತ ರಲ್ಲಿ ವಿವರಿಸಿದಂತೆ ಕಂದರ, ಕೃಷ್ಣವೇಣಿ ಮತ್ತು ಕಾಳಭೈರವ ರಾಶಿಗಳನ್ನು ಗುರುತಿಸಿ.
* ಏಪ್ರಿಲ್‌ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದಂತೆ ಕನ್ಯಾ ರಾಶಿಯನ್ನೂ ಗುರುತಿಸಿ.
* ಏಪ್ರಿಲ್‌ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಅಜಗರ ರಾಶಿಯನ್ನೂ ಗುರುತಿಸಿ. ಆ ವಿವರಣೆಯ ಅಂತ್ಯದಲ್ಲಿ ಇರುವ ಅಜಗರದ ಸುತ್ತಣ ರಾಶಿಗಳ ಪಟ್ಟಿ ಅದನ್ನು ಗುರುತಿಸಲು ನೆರವಾಗುತ್ತದೆ. ಇದು ಭಾಗಶಃ ಅಸ್ತವಾಗಿದ್ದರೂ ಕನಿಷ್ಠ ಪಕ್ಷ ವಲಯ ಗುರುತಿಸಿ.
* ಈಗ ಸಪ್ತರ್ಷಿಮಂಡಲದ ನೆರವಿನಿಂದ ಧ್ರುವ ತಾರೆ ಗುರುತಿಸಿದ ಬಳಿಕ ಮಾರ್ಚ್‌ ತಿಂಗಳಿನ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಲಘುಸಪ್ತರ್ಷಿ ರಾಶಿಯನ್ನು ಗುರುತಿಸಿ.
* ಏಪ್ರಿಲ್‌ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಸಹದೇವ, ಹಸ್ತಾ ಮತ್ತು ತ್ರಿಶಂಕು ರಾಶಿಗಳನ್ನು ಗುರುತಿಸಿ.
* ಮೇ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ತುಲಾ, ವೃಕ, ಕಿನ್ನರ ಮತ್ತು ಉತ್ತರ ಕಿರೀಟ ರಾಶಿಗಳನ್ನು ಗುರುತಿಸಿ.

* ಜೂನ್‌ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ವೃಶ್ಚಿಕ, ಚತುಷ್ಕ, ವೃತ್ತಿನೀ, ಸುಯೋಧನ, ಭೀಮ, ವೀಣಾ, ಉರಗಧರ ಮತ್ತು ಸರ್ಪ ರಾಶಿಗಳನ್ನು ಗುರುತಿಸಿ.

ಹಂತ ೨: ಈ ತಿಂಗಳು ಉದಯಿಸಿರುವ ರಾಶಿಗಳನ್ನು ಗುರುತಿಸುವ ಕಾರ್ಯ ಈಗ ಮಾಡಬೇಕಿದೆ.

ವೀಣಾ ಮತ್ತು ಸುಯೋಧನ ರಾಶಿಗಳ ಪೂರ್ವಕ್ಕೆ ಈಶಾನ್ಯ ದಿಗಂತದ ಸಮೀಪದಲ್ಲಿ ಇರುವ ಮೂರು ಉಜ್ವಲ ತಾರೆಗಳು ಇರುವ ಗುರುತಿಸಬಹುದಾದ ರಾಶಿ ರಾಜಹಂಸ (೫೮. ಸಿಗ್ನಸ್, ವಿಸ್ತೀರ್ಣ ೮೦೩.೯೮೩ ಚ ಡಿಗ್ರಿ). (೧) α ರಾಜಹಂಸ (ಡೆನೆಬ್, ಹಂಸಾಕ್ಷಿ, ತೋಉ ೧.೩೧, ದೂರ ೩೨೬೨ ಜ್ಯೋವ) ತಾರೆಯನ್ನು ಮೊದಲು ತದನಂತರ ರೇಖಾಚಿತ್ರದ ನೆರವಿನಿಂದ ಉಳಿದವನ್ನು ಗುರುತಿಸಬಹುದು. (೨) γ ರಾಜಹಂಸ (ತೋಉ ೨.೨೨, ದೂರ ೧೪೩೭ ಜ್ಯೋವ), (೩) ε ರಾಜಹಂಸ (ತೋಉ ೨.೪೮, ದೂರ ೭೨ ಜ್ಯೋವ), (೪) δ ರಾಜಹಂಸ (ತೋಉ ೨.೮೯, ದೂರ ೧೭೦ ಜ್ಯೋವ), (೫) β ರಾಜಹಂಸ (ಅಲ್‌ಬೀರಿಯೊ, ತೋಉ ೩.೦೭, ದೂರ ೪೦೧ ಜ್ಯೋವ), (೬) η ರಾಜಹಂಸ (ತೋಉ ೩.೯೦, ದೂರ ೧೪೦ ಜ್ಯೋವ), (೭) ι ರಾಜಹಂಸ (ತೋಉ ೩.೭೬, ದೂರ ೧೨೩ ಜ್ಯೋವ), (೮) ζ ರಾಜಹಂಸ (ತೋಉ ೩.೨೦, ದೂರ ೧೫೧ ಜ್ಯೋವ), (೯) ξ ರಾಜಹಂಸ (ತೋಉ ೩.೭೧, ದೂರ ೧೨೨೬ ಜ್ಯೋವ).
        


ರಾಜಹಂಸದ ಸುತ್ತಣ ರಾಶಿಗಳು ಇವು: ಯುಧಿಷ್ಠಿರ, ಸುಯೋಧನ, ವೀಣಾ, ಶೃಗಾಲ, ನಕುಲ, ಮುಸಲೀ.

ಜನವರಿ ತಿಂಗಳಿನಲ್ಲಿ ಗೋಚರಿಸುತ್ತಿದ್ದು ತದನಂತರ ಅಸ್ತವಾದ ಯುಧಿಷ್ಠಿರ ರಾಶಿ ರಾಜಹಂಸದ ಉತ್ತರಕ್ಕೆ ಬಾನಂಚಿನಲ್ಲಿ ಉದಯಿಸಿದೆಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ರಲ್ಲಿ ನೀಡಿರುವ ಮಾಹಿತಿಯ ನೆರವಿನಿಂದ ಈ ರಾಶಿಯನ್ನು ವೀಕ್ಷಿಸಿ.

ರಾಜಹಂಸ ರಾಶಿಗೆ ದಕ್ಷಿಣದಲ್ಲಿ ತಾಗಿಕೊಂಡು ಶೃಗಾಲ ರಾಶಿ (೭೬. ವಲ್ಪೆಕ್ಯೂಲ, ವಿಸ್ತೀರ್ಣ ೨೬೮.೧೬೫ ಚ ಡಿಗ್ರಿ) ಇದೆ. ಇದರ ಅತ್ಯಂತ ಉಜ್ವಲ ತಾರೆ α ಶೃಗಾಲವನ್ನು (ತೋಉ ೪.೪೪, ದೂರ ೩೦೩ ಜ್ಯೋವ) ಬರಿಗಣ್ಣಿನಿಂದ ಗುರುತಿಸುವುದು ಬಲುಕಷ್ಟ. ಎಂದೇ ಬರಿಗಣ್ಣಿನಿಂದ ಈ ರಾಶಿಯ ವೀಕ್ಷಣೆಗೆ ಶ್ರಮಿಸುವುದು ಬೇಡ.



ಶೃಗಾಲದ ಸುತ್ತಣ ರಾಶಿಗಳು ಇವು: ರಾಜಹಂಸ, ವೀಣಾ, ಭೀಮ, ಶರ, ಧನಿಷ್ಠಾ, ನಕುಲ.

ಶೃಗಾಲದ ದಕ್ಷಿಣ ಗಡಿಯ ಪೂರ್ವ ಭಾಗಕ್ಕೆ ತಾಗಿಕೊಂಡು ಧನಿಷ್ಠಾ ರಾಶಿಯೂ (೩೮. ಡೆಲ್‌ಫೈನಸ್, ವಿಸ್ತೀರ್ಣ ೧೮೮.೫೪೯ ಚ ಡಿಗ್ರಿ), ಪಶ್ಚಿಮ ಭಾಗಕ್ಕೆ ತಾಗಿಕೊಂಡು ಶರ ರಾಶಿಯೂ (೭೩. ಸಜೀಟ, ವಿಸ್ತೀರ್ಣ ೭೯.೯೩೨ ಚದರ ಡಿಗ್ರಿ) ಇದೆ. ಭಾರತೀಯ ಜ್ಯೋತಿಶ್ಶಾಸ್ತ್ರೀಯ ಧನಿಷ್ಠಾ ನಕ್ಷತ್ರ ಇರುವ ರಾಶಿಯ ಹೆಸರೂ ಧನಿಷ್ಠಾ. ಈ ಪುಂಜದ ಪ್ರಧಾನ ನಕ್ಷತ್ರಗಳು ಇವು: (೧) β ಧನಿಷ್ಠಾ (ರೋಟನೆವ್, ತೋಉ ೩.೬೨, ದೂರ ೧೦೦ ಜ್ಯೋವ), (೨) α ಧನಿಷ್ಠಾ (ತೋಉ ೩.೭೭, ದೂರ ೨೪೧ ಜ್ಯೋವ), (೩) ε ಧನಿಷ್ಠಾ (ತೋಉ ೪.೦೩, ದೂರ ೩೫೨ ಜ್ಯೋವ), (೪) γ ಧನಿಷ್ಠಾ (ತೋಉ ೪.೨೬, ದೂರ ೧೦೫ ಜ್ಯೋವ). ಇವುಗಳ ಪೈಕಿ ಮೊದಲನೆಯದ್ದು ನಮ್ಮ ಧನಿಷ್ಠಾ ನಕ್ಷತ್ರ. ಅದನ್ನು ಬರಿಗಣ್ಣಿನಿಂದ ಗುರುತಿಸುವುದು ಬಲು ಕಷ್ಟ. ಸಾಧ್ಯವಾಗದಿದ್ದರೆ ಬೇಸರಿಸದೇ, ವಲಯ ತಿಳಿದಿದ್ದಕ್ಕಾಗಿ ಆನಂದಿಸಿ.



ಧನಿಷ್ಠಾದ ಸುತ್ತಣ ರಾಶಿಗಳು ಇವು: ಶೃಗಾಲ, ಶರ, ಗರುಡ, ಕುಂಭ, ಕಿಶೋರ, ನಕುಲ.
                     

ಶರ ರಾಶಿಯ ಪ್ರಧಾನ ನಕ್ಷತ್ರಗಳು ಇವು: (೧) γ ಶರ (ತೋಉ ೩.೫೧, ದೂರ ೨೬೨ ಜ್ಯೋವ), (೨) δ ಶರ (ತೋಉ ೩.೮೩, ದೂರ ೪೬೧ ಜ್ಯೋವ), (೩) α ಶರ (ತೋಉ ೪.೩೮, ದೂರ ೪೬೩ ಜ್ಯೋವ), (೪) β ಶರ (ತೋಉ ೪.೩೮, ದೂರ ೪೫೭ ಜ್ಯೋವ). ಧನಿಷ್ಠಾ ನಕ್ಷತ್ರಕ್ಕಿಂತ ಉಜ್ವಲ ನಕ್ಷತ್ರವಿದ್ದರೂ ಬರಿಗಣ್ಣಿನಿಂದ ಗುರುತಿಸುವುದು ಕಷ್ಟ. ಆಗದಿದ್ದರೆ ನಿರಾಶರಾಗದೇ ಮುಂದುವರಿಯಿರಿ.
ಶರದ ಸುತ್ತಣ ರಾಶಿಗಳು ಇವು: ಶೃಗಾಲ, ಭೀಮ, ಗರುಡ, ಧನಿಷ್ಠಾ.

ಧನಿಷ್ಠಾ ರಾಶಿಯ ಪಶ್ಚಿಮ ಗಡಿಗೆ, ಶರ ರಾಶಿಯ ದಕ್ಷಿಣ ಗಡಿಗೆ ತಾಗಿಕೊಂಡು ಉಜ್ವಲ ತಾರಾಯುಕ್ತ ಗರುಡ ರಾಶಿ (೧೯. ಅಕ್ವಿಲ, ವಿಸ್ತೀರ್ಣ ೬೫೨.೪೭೩ ಚ ಡಿಗ್ರಿ) ಇದೆ.
    


ಭಾರತೀಯ ಜ್ಯೋತಿಷ್ಚಕ್ರದ ಶ್ರವಣ ನಕ್ಷತ್ರ, (೧) α ಗರುಡವನ್ನು (ಆಲ್ಟೇರ್, ತೋಉ ೦.೮೭, ದೂರ ೧೭ ಜ್ಯೋವ) ಗುರುತಿಸಿ. ತದನಂತರ ರೇಖಾಚಿತ್ರದ ನೆರವಿಂದ (೨) γ ಗರುಡ (ತೋಉ ೨.೭೧, ದೂರ ೪೮೧ ಜ್ಯೋವ), (೩) ζ ಗರುಡ (ತೋಉ ೨.೯೮, ದೂರ ೮೪ ಜ್ಯೋವ), (೪) θ ಗರುಡ (ತೋಉ ೩.೨೪, ದೂರ ೨೮೭ ಜ್ಯೋವ), (೫) δ ಗರುಡ (ತೋಉ ೩.೩೬, ದೂರ ೫೦ ಜ್ಯೋವ), (೬) λ ಗರುಡ (ತೋಉ ೩.೪೩, ದೂರ ೧೨೪ ಜ್ಯೋವ), (೭) β ಗರುಡ (ತೋಉ ೩.೭೧, ದೂರ ೪೫ ಜ್ಯೋವ), (೮) η ಗರುಡ (ತೋಉ ೩.೯೫, ದೂರ ೧೩೨೦ ಜ್ಯೋವ) ತಾರೆಗಳನ್ನು ಗುರುತಿಸಲು ಪ್ರಯತ್ನಿಸಿ.

ಗರುಡದ ಸುತ್ತಣ ರಾಶಿಗಳು ಇವು: ಶರ, ಭೀಮ, ಉರಗಧರ, ಸರ್ಪಪುಚ್ಛ, ಖೇಟಕ, ಧನು, ಮಕರ, ಕುಂಭ, ಧನಿಷ್ಠಾ.

ಗರುಡದ ನೈರುತ್ಯ ಮೂಲೆಗೆ ತಾಗಿಕೊಂಡು ಖೇಟಕ (೧೮. ಸ್ಕ್ಯೂಟಮ್, ವಿಸ್ತೀರ್ಣ ೧೦೯.೧೧೪ ಚ ಡಿಗ್ರಿ) ರಾಶಿ ಇದೆ. ಇದರ ಅತ್ಯಂತ ಉಜ್ವಲ ತಾರೆಯೇ α ಖೇಟಕ (ತೋಉ ೩.೮೫, ದೂರ ೧೭೪ ಜ್ಯೋವ). ಆದ್ದರಿಂದ ಈ ರಾಶಿಯ ಪುಂಜವನ್ನು ಬರಿಗಣ್ಣಿಂದ ಗುರುತಿಸುವ ಶ್ರಮ ತೆಗೆದುಕೊಳ್ಳುವುದೇ ಬೇಡ.
              


ಖೇಟಕದ ಸುತ್ತಣ ರಾಶಿಗಳು ಇವು: ಗರುಡ, ಧನು, ಸರ್ಪಪುಚ್ಛ.
         
ದಕ್ಷಿಣ ದಿಕ್ಕಿನಲ್ಲಿ ಕಂಗೊಳಿಸುತ್ತಿರುವ ಕಿನ್ನರಪಾದ ತಾರೆಯತ್ತ ಗಮನ ಹರಿಸಿ. ಇದರ ಆಗ್ನೇಯ ದಿಕ್ಕಿನಲ್ಲಿ ಪ್ರಕಾಶಿಸುತ್ತಿರುವ ಉಜ್ವಲ ತಾರೆ ನಮ್ಮ ಗಮನ ಸೆಳೆಯುತ್ತದೆ. ಇದು ದಕ್ಷಿಣ ತ್ರಿಕೋಣಿ ರಾಶಿಯ (೩೦. ಟ್ರೈಆಂಗ್ಯುಲಮ್ ಆಸ್‌ಟ್ರೈಲೀ, ವಿಸ್ತೀರ್ಣ ೧೦೯.೯೭೮ ಚ ಡಿಗ್ರಿ) (೧) α ದಕ್ಷಿಣ ತ್ರಿಕೋಣಿ ತಾರೆ (ಆಟ್ರಿಯ, ತೋಉ ೧.೯೧, ದೂರ ೪೩೬ ಜ್ಯೋವ). ಈ ರಾಶಿಯ ಉಳಿದ ಗುರುತಿಸಲು ಪ್ರಯತ್ನಿಸಬಹುದಾದ ತಾರೆಗಳು ಇವು: (೨) β ದಕ್ಷಿಣ ತ್ರಿಕೋಣಿ (ತೋಉ ೨.೮೩, ದೂರ ೪೦ ಜ್ಯೋವ), (೩) γ ದಕ್ಷಿಣ ತ್ರಿಕೋಣಿ (ತೋಉ ೨.೮೮, ದೂರ ೧೮೪ ಜ್ಯೋವ). 
                           
        
ದಕ್ಷಿಣ ತ್ರಿಕೋಣಿಯ ಸುತ್ತಣ ರಾಶಿಗಳು ಇವು: ಚತುಷ್ಕ, ವೃತ್ತಿ, ದೇವವಿಹಗ, ವೇದಿಕಾ.

ದಕ್ಷಿಣ ತ್ರಿಕೋಣಿಯ ಪೂರ್ವಕ್ಕೆ ತುಸು ಈಶಾನ್ಯದತ್ತ ತಾಗಿಕೊಂಡಿದೆ ವೇದಿಕಾ ರಾಶಿ (೬೯. ಏರ, ವಿಸ್ತೀರ್ಣ ೨೩೭.೦೫೭ ಚ ಡಿಗ್ರಿ). ರೇಖಾಚಿತ್ರದ ನೆರವಿನಿಂದ ಮೊದಲು (೧) β ವೇದಿಕಾ (ತೋಉ ೨.೮೨, ದೂರ ೫೪೩ ಜ್ಯೋವ) ಮತ್ತು (೨) α ವೇದಿಕಾ (ತೋಉ ೨.೮೪, ದೂರ ೨೪೨ ಜ್ಯೋವ) ತಾರೆಗಳನ್ನು ಗುರುತಿಸಿ. ತದನಂತರ (೩) ζ ವೇದಿಕಾ (ತೋಉ ೩.೧೧, ದೂರ ೫೯೦ ಜ್ಯೋವ), (೪) γ ವೇದಿಕಾ (ತೋಉ ೩.೩೨, ದೂರ ೧೧೦೯ ಜ್ಯೋವ), (೫) δ ವೇದಿಕಾ (ತೊಉ ೩.೫೯, ದೂರ ೧೮೬ ಜ್ಯೋವ), (೬) η ವೇದಿಕಾ (ತೋಉ ೩.೭೭, ದೂರ ೩೧೬ ಜ್ಯೋವ), (೭) ε ವೇದಿಕಾ (ತೋಉ ೪.೦೬, ದೂರ ೨೯೭ ಜ್ಯೋವ) ತಾರೆಗಳನ್ನು ಗುರುತಿಸಲು ಪ್ರಯತ್ನಿಸಿ.
                    

ವೇದಿಕಾದ ಸುತ್ತಣ ರಾಶಿಗಳು ಇವು: ವೃಶ್ಚಿಕ, ಚತುಷ್ಕ, ದಕ್ಷಿಣ ತ್ರಿಕೋಣಿ, ದೇವವಿಹಗ, ಮಯೂರ, ದೂರದರ್ಶಿನಿ, ದಕ್ಷಿಣ ಕಿರೀಟ.

ವೇದಿಕಾದ ಈಶಾನ್ಯಕ್ಕೆ ತಾಗಿಕೊಂಡು ಇರುವುದೇ ದಕ್ಷಿಣ ಕಿರೀಟ ರಾಶಿ (29. ಕರೋನ ಆಸ್ಟ್ರೇಲಿಸ್, ವಿಸ್ತೀರ್ಣ 127.696 ಚ ಡಿಗ್ರಿ). ಪುಂಜದ ಅತ್ಯುಜ್ವಲ ತಾರೆ β ದಕ್ಷಿಣ ಕಿರೀಟವನ್ನು (ತೋಉ ೪.೧೧, ದೂರ ೫೨೨ ಜ್ಯೋವ) ಬರಿಗಣ್ಣಿನಿಂದ ಗುರುತಿಸುವುದು ಬಲು ಕಷ್ಟವಾದ್ದರಿಂದ ಈ ರಾಶಿಯ ವಲಯವನ್ನು ಅಂದಾಜು ಮಾಡಲು ಮಾತ್ರ ಪ್ರಯತ್ನಿಸಿ.
                


ದಕ್ಷಿಣ ಕಿರೀಟದ ಸುತ್ತಣ ರಾಶಿಗಳು ಇವು: ಧನು, ವೃಶ್ಚಿಕ, ವೇದಿಕಾ, ದೂರದರ್ಶಿನಿ.

ಸಿಂಹಾವಲೋಕನ


ಜುಲೈ ತಿಂಗಳಿನಲ್ಲಿ ರಾತ್ರಿ ಸುಮಾರು ೮.೦೦ ಗಂಟೆಗೆ ದೃಗ್ಗೋಚರ ಖಗೋಳಾರ್ಧವನ್ನು ಸಂಪೂರ್ಣವಾಗಿ ಅವಲೋಕಿಸಿ ಪರಿಚಯ ಮಾಡಿಕೊಂಡ ೩೬ ರಾಶಿಗಳನ್ನೂ, ೧೨ ಉಜ್ವಲ ತಾರೆಗಳನ್ನೂ ೧೩ ನಕ್ಷತ್ರಗಳನ್ನೂ ಪಟ್ಟಿಮಾಡಿ. ಅವನ್ನು ವೀಕ್ಷಿಸಿದ ಸಮಯ ಮತ್ತು ನಿಮ್ಮ ದೃಗ್ಗೋಚರ ಖಗೋಳದಲ್ಲಿ ಅವುಗಳ ಸ್ಥಾನವನ್ನೂ ಬರೆದಿಡಿ. 

No comments: