Pages

11 February 2014

ತಾರಾವಲೋಕನ ೭ - ವೀಕ್ಷಣಾ ಮಾರ್ಗದರ್ಶಿ, ಮೇ

.ಮೇ
 ತಾರಾ ಪಟ ೧. ವಾಸ್ತವಿಕ

 ತಾರಾ ಪಟ ೨. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಸಹಿತ

 ತಾರಾ ಪಟ ೩. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಮತ್ತು ರಾಶಿಗಳ ಸೀಮಾರೇಖೆ ಮತ್ತು
ಅಕರಾದಿಯಾಗಿ ಕನ್ನಡದ ರಾಶಿನಾಮಗಳನ್ನು ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಸಹಿತ

 ತಾರಾ ಪಟ ೪. ರಾಶಿಚಕ್ರ

ವೀಕ್ಷಣಾ ಮಾರ್ಗದರ್ಶಿ 

ಮೇ ೧೫ ರಂದು ರಾತ್ರಿ ಸುಮಾರು ೮ ಗಂಟೆಗೆ ಮ್ಮ ವೀಕ್ಷಣಾ ಸ್ಥಳದಲ್ಲಿ ಪಶ್ಚಿಮ ದಿಗಂತದತ್ತ ನೋಡಿದಾಗ ಪಶ್ಚಿಮ ದಿಗ್ಬಿಂದುವಿನಲ್ಲಿ ಉಜ್ವಲ ಪ್ರಭೆಯಿಂದಲೂ ರಾರಾಜಿಸುತ್ತಿರುವ ಮೂರು ಏಕರೇಖಾಗತ ಸಮೋಜ್ವಲ ತಾರೆಗಳು ಅಸ್ತವಾಗುತ್ತಿರುವುದು ನಿಮ್ಮ ಗಮನ ಸೆಳೆಯುತ್ತದೆ. ಇವು ಮಹಾವ್ಯಾಧ ರಾಶಿಯ ಸದಸ್ಯ ತಾರೆಗಳು. ಇವನ್ನು ಗುರುತಿಸುವುದು ಕಷ್ಟವಾದರೆ, ಈ ದಿಗ್ಬಿಂದುವಿನ ಆಗ್ನೇಯಕ್ಕೆ ತುಸು ದೂರದಲ್ಲಿ ಅತ್ಯಂತ ಉಜ್ವಲ ತಾರೆಯೊಂದು ಗೋಚರಿಸುತ್ತದೆ. ಇದು ಮಹಾಶ್ವಾನ ರಾಶಿಯ ಲುಬ್ಧಕ ತಾರೆ. ಪಶ್ಚಿಮ ದಿಗ್ಬಿಂದುವಿಂದ ಪೂರ್ವ-ಉತ್ತರಕ್ಕೆ ತುಸು ದೂರದಲ್ಲಿ ಉತ್ತರ ಎರಡು ಅವಳಿ ತಾರೆಗಳು ನಿಮ್ಮ ಗಮನ ಸೆಳೆಯುತ್ತವೆ. ಇವು ಮಿಥುನ ರಾಶಿಯ ಕ್ಯಾಸ್ಟರ್ ಮತ್ತು ಪಾಲಕ್ಸ್ ತಾರೆಗಳು. ಇವನ್ನು ಗುರುತಿಸಿದ ಬಳಿಕ ಈ ಮುಂದಿನ ಸೂಚನೆಗಳಿಗೆ ಅನುಗುಣವಾಗಿ ವೀಕ್ಷಣೆ ಮುಂದುವರಿಸಿ.

         ಹಂತ : ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದಂತೆ ಮಹಾವ್ಯಾಧ, ಮಿಥುನ, ಮತ್ತು ಏಕಶೃಂಗಿ ರಾಶಿಗಳನ್ನು ವೀಕ್ಷಿಸಿ. ಮಹಾವ್ಯಾಧ, ವೃಷಭ ಮತ್ತು ಶಶ ರಾಶಿಗಳು ಅಸ್ತವಾಗುತ್ತಿವೆ. ವೈತರಿಣೀ ಅಸ್ತವಾಗಿದೆ. ತದನಂತರ ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದಂತೆ ಮಹಾಶ್ವಾನ ರಾಶಿಯನ್ನು ವೀಕ್ಷಿಸಿ. ಈ ರಾಶಿಯ ಸುತ್ತಣ ರಾಶಿಗಳ ಪೈಕಿ ಏಕಶೃಂಗಿಯನ್ನು ಹೊರತುಪಡಿಸಿ ಎಲ್ಲವೂ ಅಸ್ತವಾಗಿವೆ ಅಥವಾ ಆಗುತ್ತಿವೆ. ತದನಂತರ ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದಂತೆ ಮಾರ್ಜಾಲ, ವಿಜಯಸಾರಥಿ, ಲಘುಶ್ವಾನ ಮತ್ತು ಕರ್ಕಾಟಕ ರಾಶಿಗಳನ್ನು ವೀಕ್ಷಿಸಿ.

ಹಂತ : ಮಾಡಬೇಕಾದ ವೀಕ್ಷಣೆಗಳು ಇವು:
* ಮೊದಲು ಫೆಬ್ರವರಿ ಮಾರ್ಗದರ್ಶಿಯ ಹಂತ ಮತ್ತು ರಲ್ಲಿ ವಿವರಿಸಿದಂತೆ ಸಿಂಹ ಮತ್ತು ಲಘುಸಿಂಹ ರಾಶಿಗಳನ್ನೂ ಸಪ್ತರ್ಷಿಮಂಡಲ ಮತ್ತು ಷಷ್ಟಕ ರಾಶಿಗಳನ್ನೂ ಗುರುತಿಸಿ.
* ತದನಂತರ ಮಾರ್ಚ್ ಮಾರ್ಗದರ್ಶಿ ಹಂತ ರಲ್ಲಿ ವಿವರಿಸಿದಂತೆ ಕಂದರ, ಕೃಷ್ಣವೇಣಿ ಮತ್ತು ಕಾಳಭೈರವ ರಾಶಿಗಳನ್ನು ಗುರುತಿಸಿ.
* ಏಪ್ರಿಲ್ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದಂತೆ ಕನ್ಯಾ ರಾಶಿಯನ್ನೂ ಗುರುತಿಸಿ. ಹಂತ ರಲ್ಲಿ ವಿವರಿಸಿದ ಅಜಗರ ರಾಶಿಯನ್ನೂ ಗುರುತಿಸಿ. ಆ ವಿವರಣೆಯ ಅಂತ್ಯದಲ್ಲಿ ಇರುವ ಅಜಗರದ ಸುತ್ತಣ ರಾಶಿಗಳ ಪಟ್ಟಿ ಅದನ್ನು ಗುರುತಿಸಲು ನೆರವಾಗುತ್ತದೆ.
* ಆ ಪಟ್ಟಿಯ ನೆರವಿನಿಂದ ಮಾರ್ಚ್ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿರುವ ರೇಚಕವನ್ನೂ, ನೌಕಾಪಟವನ್ನೂ ಗುರುತಿಸಿ
* ಫೆಬ್ರವರಿ ಮಾರ್ಗದರ್ಶಿ ಹಂತ ೪ ರಲ್ಲಿ ವಿವರಿಸಿದ ದಿಕ್ಸೂಚಿಯನ್ನೂ ಗುರುತಿಸಿ.
* ಈಗ ಸಪ್ತರ್ಷಿಮಂಡಲದ ನೆರವಿನಿಂದ ಧ್ರುವ ತಾರೆ ಗುರುತಿಸಿದ ಬಳಿಕ ಮಾರ್ಚ್ ತಿಂಗಳಿನ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಲಘುಸಪ್ತರ್ಷಿ ರಾಶಿಯನ್ನು ಗುರುತಿಸಿ.
* ಏಪ್ರಿಲ್ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಸಹದೇವ, ಹಸ್ತಾ ಮತ್ತು ತ್ರಿಶಂಕು ರಾಶಿಗಳನ್ನು ಗುರುತಿಸಿ.
  
ಹಂತ : ಈ ತಿಂಗಳು ಉದಯಿಸಿರುವ ರಾಶಿಗಳನ್ನು ಗುರುತಿಸುವ ಕಾರ್ಯ ಈಗ ಮಾಡಬೇಕಿದೆ.

ಕನ್ಯಾ ರಾಶಿಯ ಆಗ್ನೇಯಕ್ಕೆ ಮತ್ತು ಅಜಗರ ರಾಶಿಗಳ ಪೂರ್ವಕ್ಕೆ ತಾಗಿಕೊಂಡು ತುಲಾ ರಾಶಿ (೨೬. ಲೀಬ್ರಾ, ವಿಸ್ತೀರ್ಣ ೫೩೮.೦೫೨ ಚ ಡಿಗ್ರಿ) ಉದಯಿಸಿದೆ. ಈ ರಾಶಿಯಲ್ಲಿ ಇರುವ ಎರಡು ಉಜ್ವಲ ತಾರೆಗಳನ್ನು ಗುರುತಿಸಬಹುದು. ಪ್ರಮುಖ ತಾರೆಗಳು ಇವು: (೧) β ತುಲಾ (ತೋಉ ೨.೬೦, ದೂರ ೧೬೧ ಜ್ಯೋವ), (೨) α ತುಲಾ (ಜುಬೆನ್ ಎಲ್ ಜೆನುಬಿ, ತೋಉ ೨.೭೪, ದೂರ ೭೮ ಜ್ಯೋವ), (೩) σ ತುಲಾ (ತೋಉ ೩.೨೮, ದೂರ ೨೮೮ ಜ್ಯೋವ), (೪) γ ತುಲಾ (ತೋಉ ೩.೯೧, ದೂರ ೧೫೩ ಜ್ಯೋವ). ಇವುಗಳ ಪೈಕಿ α೨ ತುಲಾವನ್ನು ಭಾರತೀಯ ಜ್ಯೋತಿಷ್ಚಕ್ರದ ನಕ್ಷತ್ರ ವಿಶಾಖ ಎಂದು ಪರಿಗಣಿಸಿದೆ.
        


ಸರ್ಪಶಿರ, ಕನ್ಯಾ, ಅಜಗರ, ಕಿನ್ನರ (ಮೂಲೆ), ವೃಕ, ವೃಶ್ಚಿಕ, ಉರಗಧರ ಇವು ತುಲಾದ ಸುತ್ತಣ ರಾಶಿಗಳು.
ತುಲಾ ರಾಶಿಯ ದಕ್ಷಿಣ ಪಾರ್ಶ್ವಕ್ಕೂ ಅಜಗರದ ಆಗ್ನೇಯ ಮೂಲೆಗೂ ತಾಗಿಕೊಂಡಿರುವ ರಾಶಿ ವೃಕ (೬೮. ಲ್ಯೂಪಸ್, ವಿಸ್ತೀರ್ಣ ೩೩೩.೬೮೩ ಚ ಡಿಗ್ರಿ). ಈ ಪುಂಜದ ಮೊದಲ ನಾಲ್ಕು ತಾರೆಗಳು ಇವು: (೧) α ವೃಕ (ತೋಉ ೨.೨೮, ದೂರ ೫೩೦ ಜ್ಯೋವ), (೨) β ವೃಕ (ತೋಉ ೨.೬೭, ದೂರ ೫೦೩ ಜ್ಯೋವ), (೩) γ ವೃಕ (ತೋಉ ೨.೮೧, ದೂರ ೭೩೧ ಜ್ಯೋವ), (೪) δ ವೃಕ (ತೋಉ ೩.೨೧, ದೂರ ೫೯೨ ಜ್ಯೋವ). ರೇಖಾಚಿತ್ರದ ನೆರವಿಂದ ಇವನ್ನು ಗುರುತಿಸಲು ಸಾಧ್ಯವೇ ಎಂಬುದನ್ನು ಪರೀಕ್ಷಿಸಿ. ಉಳಿದ ಕ್ಷೀಣ ತಾರೆಗಳನ್ನು ಗುರುತಿಸುವುದು ಕಷ್ಟ. ಎಂದೇ ಮಾಹಿತಿ ನೀಡಿಲ್ಲ.

 ತುಲಾ, ಅಜಗರ (ಮೂಲೆ), ಕಿನ್ನರ, ವೃತ್ತಿ, ಚತುಷ್ಕ, ವೃಶ್ಚಿಕ ಇವು ವೃಕದ ಸುತ್ತಣ ರಾಶಿಗಳು.

ವೃಕದ ಪಶ್ಚಿಮ ಅಂಚಿಗೂ ಅಜಗರದ ದಕ್ಷಿಣ ಅಂಚಿಗೂ ತಾಗಿಕೊಂಡಿದೆ ಕಿನ್ನರ ರಾಶಿ (೧೩. ಸೆಂಟಾರಸ್, ವಿಸ್ತೀರ್ಣ ೧೦೬೦.೪೨೨ ಚ ಡಿಗ್ರಿ). ಅನೇಕ ಉಜ್ವಲ ತಾರೆಗಳು ಇರುವುದರಿಂದ ರೇಖಾಚಿತ್ರದ ನೆರವಿನಿಂದ ಪುಂಜವನ್ನು ಭಾಗಶಃ ಗುರುತಿಸಬಹುದು. α ಕಿನ್ನರ (ಕಿನ್ನರ ಪಾದ, ತೋಉ ೧.೩೫, ದೂರ ೪.೪೦ ಜ್ಯೋವ), (೨) β ಕಿನ್ನರ (ಕಿನ್ನರ ಪಾರ್ಷ್ಣಿ, ತೋಉ ೦.೫೮, ದೂರ ೫೩೭ ಜ್ಯೋವ), (೩) θ ಕಿನ್ನರ (ತೋಉ ೨.೦೬, ದೂರ ೬೨ ಜ್ಯೋವ), (೪) γ ಕಿನ್ನರ (ತೋಉ ೨.೪೨, ದೂರ ೧೩೬ ಜ್ಯೋವ), (೫) ε ಕಿನ್ನರ (ತೋಉ ೨.೨೭, ದೂರ ೩೭೨ ಜ್ಯೋವ), (೬) η ಕಿನ್ನರ (ತೋಉ ೨.೩೩, ದೂರ ೩೦೭ ಜ್ಯೋವ), (೭) ζ ಕಿನ್ನರ (ತೋಉ ೨.೫೨, ದೂರ ೩೯೨ ಜ್ಯೋವ), (೮) δ ಕಿನ್ನರ (ತೋಉ ೨.೫೬, ದೂರ ೩೭೮ ಜ್ಯೋವ), (೯) ι ಕಿನ್ನರ (ತೋಉ ೨.೭೪, ದೂರ ೫೯ ಜ್ಯೋವ). ಇವುಗಳ ಪೈಕಿ ಕಿನ್ನರ ಪಾದ ಒಂದು ತ್ರಿತಾರಾ ವ್ಯವಸ್ಥೆ. ಇವುಗಳ ಪೈಕಿ ಎರಡು ಬಲು ಉಜ್ವಲವಾದವು. ಸೌರವ್ಯೂಹಕ್ಕೆ ಅತ್ಯಂತ ಸಮೀಪದ ತಾರೆ ಎಂಬ ಹೆಗ್ಗಳಿಕೆ ಈ ವ್ಯವಸ್ಥೆಯದ್ದು.

 ಅಜಗರ, ರೇಚಕ, ನೌಕಾಪಟ, ದೇವನೌಕಾ, ಮಶಕ, ತ್ರಿಶಂಕು, ವೃತ್ತಿ, ವೃಕ, ತುಲಾ (ಮೂಲೆ) ರಾಶಿಗಳು ಕಿನ್ನರವನ್ನು ಸುತ್ತುವರಿದಿವೆ.

ಸಹದೇವ ರಾಶಿಯ ಪೂರ್ವ ಗಡಿಯ ಉತ್ತರಾರ್ಧಕ್ಕೆ  ತಾಗಿಕೊಂಡು ಉತ್ತರ ಕಿರೀಟ ರಾಶಿ (೪. ಕರೋನ ಬೋರಿಆಲಿಸ್, ವಿಸ್ತೀರ್ಣ ೧೭೮.೭೧೦ ಚ ಡಿಗ್ರಿ) ಇದೆ. ರೇಖಾಚಿತ್ರದಲ್ಲಿ ತೋರಿಸಿರುವ ತಾರೆಗಳ ಪೈಕಿ ಒಂದು ಉಜ್ವಲವಾದ್ದು. ಎಂದೇ ಅದನ್ನು ಗುರುತಿಸಬಹುದು. ಉಳಿದವನ್ನು ಬರಿಗಣ್ಣಿಂದ ಗುರುತಿಸುವ ಗೋಜಿಗೆ ಹೋಗದಿದ್ದರೆ ನಷ್ಟವೇನೂ ಇಲ್ಲ. ಪುಂಜದ ಪ್ರಮುಖ ತಾರೆಗಳು ಇವು: (೧) α ಉತ್ತರ ಕಿರೀಟ (ತೋಉ ೨.೨೧, ದೂರ ೭೫ ಜ್ಯೋವ), (೨) β ಉತ್ತರ ಕಿರೀಟ (ತೋಉ ೩.೬೬, ದೂರ ೧೧೬ ಜ್ಯೋವ).

ಉತ್ತರ ಕಿರೀಟದ ಸುತ್ತಣ ರಾಶಿಗಳು ಇವು: ಭೀಮ, ಸಹದೇವ, ಸರ್ಪಶಿರ.

ದಕ್ಷಿಣ ದಿಗ್ಬಿಂದುವಿನ ಪೂರ್ವಕ್ಕೆ ಅಥವಾ ಅಸ್ತವಾಗುತ್ತಿರುವ ದೇವನೌಕಾ ರಾಶಿಯ ಪೂರ್ವಕ್ಕೆ ಬಾನಂಚಿನಲ್ಲಿ ದೃಗ್ಗೋಚರ ಖಗೋಳದೊಳಕ್ಕೆ ಇಣುಕಿ ನೋಡುತ್ತಿರುವ ರಾಶಿ ಮಶಕ (೪೯. ಮಸ್ಕ, ವಿಸ್ತೀರ್ಣ ೧೩೮.೩೫೫ ಚ ಡಿಗ್ರಿ). ಉಜ್ವಲ ತಾರೆ (೧) α ಮಶಕ (ತೋಉ ೨.೬೮, ದೂರ ೩೦೩ ಜ್ಯೋವ) ಇದ್ದರೂ ಭೂಮಿಯ ಉತ್ತರ ಅಕ್ಷಾಂಶ ಪ್ರದೇಶವಾಸಿಗಳಿಗೆ ಇದರ ದರ್ಶನ ಭಾಗ್ಯ ದೊರೆಯುವುದು ಬಲು ಕಷ್ಟ.



ಎಂದೇ, ಅದನ್ನು ಅದರ ಪಾಡಿಗೆ ಬಿಟ್ಟು ನಾವು ಮುಂದುವರಿಯೋಣ.

ಕಿನ್ನರ, ತ್ರಿಶಂಕು, ದೇವನೌಕಾ, ಚಂಚಲವರ್ಣಿಕಾ, ದೇವವಿಹಗ ಮತ್ತು ವೃತ್ತಿನೀ ರಾಶಿಗಳು ಮಶಕವನ್ನು ಸುತ್ತುವರಿದಿವೆ.

ಸಿಂಹಾವಲೋಕನ

          ಮೇ ತಿಂಗಳಿನಲ್ಲಿ ರಾತ್ರಿ ಸುಮಾರು ೮.೦೦ ಗಂಟೆಗೆ ದೃಗ್ಗೋಚರ ಖಗೋಳಾರ್ಧವನ್ನು ಸಂಪೂರ್ಣವಾಗಿ ಅವಲೋಕಿಸಿ ಪರಿಚಯ ಮಾಡಿಕೊಂಡ ೨೯ ರಾಶಿಗಳನ್ನೂ, ೧೫ ಉಜ್ವಲ ತಾರೆಗಳನ್ನೂ ೧೩ ನಕ್ಷತ್ರಗಳನ್ನೂ ಪಟ್ಟಿಮಾಡಿ. ಅವನ್ನು ವೀಕ್ಷಿಸಿದ ಸಮಯ ಮತ್ತು ನಿಮ್ಮ ದೃಗ್ಗೋಚರ ಖಗೋಳದಲ್ಲಿ ಅವುಗಳ ಸ್ಥಾನವನ್ನೂ ಬರೆದಿಡಿ.
(ಗಮನಿಸಿ: ೨೦೧೪ ನೇ ಇಸವಿಯಲ್ಲಿ ಮಿಥುನದಲ್ಲಿ ಗುರು ಗ್ರಹ ಇರುವುದು ನಿಮಗೆ ತಿಳಿದೇ ಇದೆ. ೨೦೧೪ ನೇ ಇಸವಿಯ ಮೇ ತಿಂಗಳಿನಲ್ಲಿ ತುಲಾ ರಾಶಿಯಲ್ಲಿ ಶನಿಯೂ ಕನ್ಯಾ ರಾಶಿಯಲ್ಲಿ ಕುಜ ಗ್ರಹವೂ ಅಸ್ತವಾಗುತ್ತಿರುವ ವೃಷಭ ರಾಶಿಯಲ್ಲಿ ಬುಧ ಗ್ರಹವೂ ಗೋಚರಿಸುತ್ತದೆ)

No comments: