‘ಅವ್ಯವಸ್ಥೆಯಲ್ಲಿ ಸುವ್ಯವಸ್ಥೆ ಕಾಣುವ ಪ್ರವೃತ್ತಿ’ – ಇದು ಎಲ್ಲ ಮಾನವರ ಸ್ವಭಾವಸಿದ್ಧ ಪ್ರವೃತ್ತಿ. ಅವ್ಯವಸ್ಥೆಯನ್ನು ಗ್ರಹಿಸಲು ನಮ್ಮ ಮಿದುಳು ನಿರಾಕರಿಸುತ್ತದೆ. ಅವ್ಯವಸ್ಥೆಯಲ್ಲಿ ಏನಾದರೊಂದು ಸುವ್ಯವಸ್ಥೆಯನ್ನು ಹುಡುಕಿ ಅರ್ಥೈಸಲು ಅದು ಪ್ರಯತ್ನಿಸುತ್ತದೆ - ಈ ಕುರಿತು ಈ ಹಿಂದೆಯೇ ವಿವರಣೆ ನೀಡಿದ್ದೇನೆ. (ನೋಡಿ: ಅವ್ಯವಸ್ಥೆಯಲ್ಲಿ ಸುವ್ಯವಸ್ಥೆ ಕಾಣುವ ಪ್ರವೃತ್ತಿ) ‘ಅರ್ಥವಿಹೀನವಾದದ್ದರಲ್ಲಿಯೂ ಸೇರಿದಂತೆ ಎಲ್ಲದರಲ್ಲಿಯೂ ಅರ್ಥ ಹುಡುಕುವ, ಹುಡುಕಿದಾಗ ಸಿಕ್ಕದಿದ್ದರೆ ಸೃಷ್ಟಿಸುವ ಪ್ರವೃತ್ತಿ’ - ಇದೂ ಎಲ್ಲ ಮಾನವರ ಸ್ವಭಾವಸಿದ್ಧ ಪ್ರವೃತ್ತಿ. ಭಾಷೆ ಈ ಪ್ರವೃತ್ತಿಯನ್ನು ಪೋಷಿಸುತ್ತದೆ. ಜ್ಞಾನೇಂದ್ರಿಯಗಳ ಮುಖೇನ ನಿಸರ್ಗದಿಂದ ಪಡೆದ ಮಾಹಿತಿಯನ್ನು ಅರ್ಥೈಸಲೋಸುಗ ಮತ್ತು ತಾನು ಅರ್ಥೈಸಿದ್ದನ್ನು ಇತರರಿಗೆ ತಿಳಿಸಲೋಸುಗ ಮಾನವನೇ ಸೃಷ್ಟಿಸಿದ ಹತಾರ ಭಾಷೆ ಎಂಬ ತಥ್ಯವನ್ನು ಜ್ಞಾಪಿಸಿಕೊಳ್ಳಿ, ಇಂತೇಕೆ ಎಂಬುದು ಅರ್ಥವಾಗುತ್ತದೆ. ವ್ಯಕ್ತಿಯ ಪದ ಸಂಪತ್ತಿನ ಶ್ರೀಮಂತಿಕೆ ಅಧಿಕವಾದಷ್ಟೂ ಹೆಚ್ಚು ಹೆಚ್ಚು ಅರ್ಥಗಳನ್ನು ವ್ಯಕ್ತಿ ಕಾಣುತ್ತಾನೆ, ಸೃಷ್ಟಿಸುತ್ತಾನೆ. ಸಂಶಯವೇ? ಈ ಮುಂದಿನ ೨ ಪ್ರಯೋಗಗಳನ್ನು ಮಾಡಿ ನೋಡಿ (ಮನೋವಿಜ್ಞಾನದಲ್ಲಿ ಪ್ರಕ್ಷೇಪಣ ತಂತ್ರಗಳಲ್ಲಿ ಉಪಯೋಗಿಸುವ ಮಾನಸಿಕ ಪರೀಕ್ಷೆಗಳಿಂದ ಈ ಚಿತ್ರಗಳನ್ನು ಆಯ್ದುಕೊಂಡಿದ್ದೇನೆ) -
ಪ್ರಯೋಗ ೧:
ಚಿತ್ರ ೧ ನೋಡಿ, ತಕ್ಷಣ ಅದು ಯಾವುದರ ಚಿತ್ರ ಎಂಬುದನ್ನು ಹೇಳಿ.

ಚಿತ್ರ ೨ ನೋಡಿ. ತೋರಿಸಿದ ಸನ್ನಿವೇಶ ಉಂಟಾಗಲು ಕಾರಣ ಏನು ಇದ್ದಿರಬಹುದು, ತೋರಿಸಿದ ಸನ್ನಿವೇಶದಲ್ಲಿ ಏನು ಆಗುತ್ತಿದೆ, ತೋರಿಸಿದ ವ್ಯಕ್ತಿಯ ಭಾವನೆಗಳು ಮತ್ತು ಆಲೋಚನೆಗಳು ಏನು ಇರಬಹುದು, ಮುಂದೆ ಏನಾಗಬಹುದು - ಈ ಪ್ರಶ್ನೆಗಳನ್ನು ಉತ್ತರಿಸಿ.

ಪ್ರಯೋಗ ೨: ನಿಮ್ಮ ಮಿತ್ರರನ್ನು ಪ್ರಯೋಗ ೧ ಕ್ಕೆ ಒಳಪಡಿಸಿ.
ಎರಡೂ ಪ್ರಯೋಗಗಳ ಫಲಿತಾಂಶಗಳನ್ನು ಪರಿಶೀಲಿಸಿ. ಉತ್ತರಗಳು ಬೇರೆಬೇರೆ ಆಗಿರುತ್ತವೆ. ಕಾರಣ ಊಹಿಸಬಲ್ಲಿರಾ?
ವಾಸ್ತವವಾಗಿ ಇವೆರಡೂ ಅರ್ಥವಿಹೀನ ಚಿತ್ರಗಳು. ಮೊದಲನೆಯದ್ದು ಶಾಯಿಯಿಂದ ಮಾಡಿದ ಸಮ್ಮಿತಿ ಉಳ್ಳ ಕಲೆ, ಎರಡನೆಯದ್ದು ಕೃತಕವಾಗಿ ಸೃಷ್ಟಿಸಿದ ನಾಟಕೀಯ ಸನ್ನಿವೇಶ. ಬೇರೆ ಬೇರೆ ನೋಡುಗರಿಗೆ ಬೇರೆ ಬೇರೆ ಅರ್ಥವನ್ನು ಇವು ಒದಗಿಸಿದ್ದು ಏಕೆ?
ಅಂದಮೇಲೆ, ಅರ್ಥಗಳು ಇರುವುದು ಬಾಹ್ಯ ಪ್ರಪಂಚದಲ್ಲಿ ಅಲ್ಲ, ಅವು ಇರುವುದು ನೋಡುಗರ ಮನಸ್ಸಿನಲ್ಲಿ. ಅವುಗಳ ಅಭಿವ್ಯಕ್ತಿಯ ಮಾಧ್ಯಮವೇ ಭಾಷೆ. ಐ ಎ ರಿಚರ್ಡ್ಸ್ (೧೮೯೩-೧೯೭೯) ಎಂಬಾತ ಪ್ರತಿಪಾದಿಸಿದ ‘ಅರ್ಥದ ಅರ್ಥ’ ಸಿದ್ಧಾಂತದ ಪ್ರಕಾರ ‘ಅರ್ಥ ಇರುವುದು ವ್ಯಕ್ತಿಗಳ ಮನಸ್ಸಿನಲ್ಲಿಯೇ ವಿನಾ ಪದಗಳಲ್ಲಿಯೂ ಅಲ್ಲ, ಬಾಹ್ಯ ಜಗತ್ತಿನಲ್ಲಿ ಜರಗುವ ವಿದ್ಯಮಾನಗಳಲ್ಲಿಯೂ ಅಲ್ಲ’. ಆದ್ದರಿಂದಲೇ ಒಂದು ಪದ ಅಥವ ಪದಪುಂಜವನ್ನು ಯಾವ ಸನ್ನಿವೇಶದಲ್ಲಿ ಯಾರು ಹೇಗೆ ಹೇಳಿದರು ಎಂಬುದನ್ನು ಆಧರಿಸಿ ಬೇರೆಬೇರೆ ವ್ಯಕ್ತಿಗಳು ಬೇರೆಬೇರೆ ರೀತಿಯಲ್ಲಿ ತಮ್ಮ ಪೂರ್ವಾನುಭವಗಳು ಮತ್ತು ಪೂರ್ವಗ್ರಹಗಳನ್ನು ಆಧರಿಸಿ ಅರ್ಥೈಸುತ್ತಾರೆ. ‘ಒಂದು ಪದ ಅಥವ ಪದಪುಂಜಕ್ಕೆ ಅದ್ವಿತೀಯವಾದ ಒಂದು ನಿಷ್ಕೃಷ್ಟ ಅರ್ಥ ಇದೆ’ ಎಂಬ ಮೂಢನಂಬಿಕೆ ಆಳವಾಗಿ ಬೇರೂರಿರುವುದೇ ಇಷ್ಟೆಲ್ಲ ತಾಪತ್ರಯಕ್ಕೆ ಕಾರಣ ಅನ್ನುತ್ತಾನೆ ರಿಚರ್ಡ್ಸ್. ಈ ಸಿದ್ಧಾಂತವನ್ನು ಜೀರ್ಣಿಸಿಕೊಂಡರೆ ಇತರರೊಂದಿಗೆ ಮಾತನಾಡುವಾಗ ಉದ್ಭವಿಸುವ ವಾದವಿವಾದಗಳನ್ನೂ ಮನಸ್ತಾಪಗಳನ್ನೂ ಗೊಂದಲವನ್ನೂ ಬಲು ಸುಲಭವಾಗಿ ನಿವಾರಿಸಬಹುದು. ಯಾವುದೇ ಪದ ಅಥವ ಪದಪುಂಜವನ್ನು ಹೇಳಿದವರು ಯಾವ ಅರ್ಥದಲ್ಲಿ ಹೇಳಿದರೋ ಕೇಳುಗರ ಮನಸ್ಸಿನಲ್ಲಿಯೂ ಅದೇ ಅರ್ಥ ಸ್ಫುರಿಸಿದರೆ ಗೊಂದಲವಾಗಲೀ ತಪ್ಪುಗ್ರಹಿಕೆಯಿಂದ ವೈಮನಸ್ಯಗಳಾಗಲೀ ಉಂಟಾಗುವುದಿಲ್ಲ. ವಾಸ್ತವದಲ್ಲಿ ನಮ್ಮ ಮತ್ತು ನಮ್ಮ ಬಂಧುಗಳ (ವಿಶೇಷತಃ ಗಂಡ - ಹೆಂಡತಿ, ತಂದೆತಾಯಿ - ಮಕ್ಕಳು, ಸಹೋದರ-ಸಹೋದರಿಯರು) ಮತ್ತು ಸಹೋದ್ಯೋಗಿಗಳ ನಡುವಣ ಸಂವಹನದಲ್ಲಿ ಅನೇಕ ಸಂದರ್ಭಗಳಲ್ಲಿ ಒಬ್ಬರು ಯಾವ ಅರ್ಥದಲ್ಲಿ ಒಂದು ಪದ ಅಥವ ಪದಪುಂಜವನ್ನು ಪ್ರಯೋಗಿಸಿರುತ್ತಾರೋ ಅದನ್ನು ಇನ್ನೊಬ್ಬರು ಅದೇ ಅರ್ಥದಲ್ಲಿ ಗ್ರಹಿಸುವುದಕ್ಕೆ ಬದಲಾಗಿ ಬೇರೊಂದು ಅರ್ಥದಲ್ಲಿ ಗ್ರಹಿಸುತ್ತಾರೆ. ಕೆಲವೊಮ್ಮೆ ಇಂಥ ನಿಕಟವರ್ತಿಗಳ ನಡುವಣ ಸಂವಹನದಲ್ಲಿ ‘ಮಾತುಗಳಲ್ಲಿ ಹೇಳಿದ್ದು’ ಮಾತ್ರವಲ್ಲದೆ ‘ಹೇಳದಿರುವುದೂ’ ಪ್ರಸಾರವಾಗುತ್ತದೆ. ಮಾತನಾಡುವಾಗ ಮಾತನಾಡುವವರ ಮನಸ್ಸಿನಲ್ಲಿದ್ದ ನಿಜವಾದ ಭಾವನೆಗಳೂ ಉದ್ದೇಶಗಳೂ ‘ಮಾತುಗಳಲ್ಲಿ ಹೇಳದಿರುವುದು’ ವರ್ಗಕ್ಕೆ ಸೇರದ ವಸ್ತುಗಳು. ಇವು ‘ದೇಹಭಾಷೆಯ’ ಮುಖೇನ ಅವರಿಗರಿವಿಲ್ಲದೆಯೇ ಪ್ರಸಾರವಾಗುತ್ತಿರುತ್ತವೆ. ‘ಮಾತುಗಳಲ್ಲಿ ಹೇಳಿದ್ದು’ ‘ಮಾತುಗಳಲ್ಲಿ ಹೇಳದಿರುವುದಕ್ಕೆ’ ತಾಳೆಯಾಗದಿದ್ದರೆ ಮಾನವ ಸಂಬಂಧಗಳು ಅಪ್ರಾಮಾಣಿಕವಾದವೂ ಕೃತಕವಾದವೂ ಆಗುತ್ತವೆ, ಕ್ರಮೇಣ ಕೆಟ್ಟುಹೋಗುತ್ತದೆ.
ಮುಂದೆ ನೀಡಿರುವ ಉದಾಹರಣೆಗಳನ್ನು ಪರಿಶೀಲಿಸಿ. ಈ ಉದಾಹರಣೆಗಳು ನನ್ನ ಅನುಭವದಿಂದ ಆಯ್ದವು.
ಉದಾಹರಣೆ ೧.
ಸಂದರ್ಭ
ನನ್ನ ಹತ್ತಿರವಿದ್ದ ದುಬಾರಿ ಬೆಲೆಯ ಧೂಳು-ತೊಡಪವನ್ನು (ಮಾಪ್) ದುರಸ್ತಿ ಮಾಡಲು ಬೆಂಗಳೂರಿನಲ್ಲಿರುವ ನನ್ನ ಮಗನಿಗೆ ಕೊಟ್ಟಿದ್ದೆ. ಅದು ದುರಸ್ತಿಯಾಗಿ ಬಂದ ಬಳಿಕ ಮೊದಲ ಬಾರಿ ಉಪಯೋಗಿಸುವಾಗ ಹಿಂದೆ ಗೋಚರಿಸದಿದ್ದ ತೊಂದರೆಯೊಂದು ಗೋಚರಿಸಿತು.
ತದನಂತರ ನಡೆದದ್ದು
ತೊಂದರೆಯನ್ನು ಪ್ರಾತ್ಯಕ್ಷಿಕೆಯ ನೆರವಿನಿಂದ ನನ್ನ ಹೆಂಡತಿಗೆ ವಿವರಿಸಿದ ಬಳಿಕ ಇಂತೆಂದೆ: “ ಇದನ್ನು ಯಾರೋ ‘ಲಾಕ್ ಆನ್’ ಸ್ಥಿತಿಯಲ್ಲಿ ಬಲವಂತವಾಗಿ ತಿರುಗಿಸಿರಬೇಕು. ಅದ್ದರಿಂದ ಈ ತೊಂದರೆ ಸೃಷ್ಟಿಯಾಗಿದೆ”
ಈ ಹೇಳಿಕೆಗೆ ಅವಳ ಪ್ರತಿಕ್ರಿಯೆ: “ನಾನು ಅದನ್ನು ಮುಟ್ಟಿ ಕೂಡಾ ನೋಡಿಲ್ಲ”
ನಾನು: “ನೀನು ಮುಟ್ಟಿದ್ದೀ ಎಂದು ನಾನು ಹೇಳಲೇ ಇಲ್ಲವಲ್ಲ”
ಅವಳು: “ಈ ಮನೇಲಿ ಇರೋದೇ ನಾವಿಬ್ಬರು. ಅಂದ ಮೇಲೆ ‘ಯಾರೋ’ ಅಂದರೆ ಇನ್ನೇನು ಅರ್ಥ?”
‘ದುರಸ್ತಿ ಮಾಡುವಾಗ ಯಾರೋ ಮಾಡಿರಬೇಕು’ ಎಂಬ ಅರ್ಥದಲ್ಲಿ ‘ಯಾರೋ ಮಾಡಿರಬೇಕು’ ಎಂದು ನಾನು ಹೇಳಿದ್ದನ್ನು ನನ್ನ ಹೆಂಡತಿ ಅರ್ಥೈಸಿದ್ದು ಹೇಗೆಂಬುದನ್ನು ಗಮನಿಸಿ. ಇದಕ್ಕೆ ಕಾರಣ, ಇದನ್ನು ಹೇಗೆ ತಪ್ಪಿಸಬಹುದಿತ್ತು ಇವೇ ಮೊದಲಾದವನ್ನು ನೀವೇ ಆಲೋಚಿಸಿ.
ಉದಾಹರಣೆ ೨.
ಸಂದರ್ಭ
ಔಷಧಿ ಅಂಗಡಿಯೊಂದರಲ್ಲಿ ನನಗೆ ಬೇಕಾಗಿದ್ದ ಔಷಧಿಗಳನ್ನು ಖರೀದಿಸುವಾಗ ನಡೆದ ವಿದ್ಯಮಾನ ಇದು. ಅಂಗಡಿಯವ ನನಗೆ ಬೇಕಿದ್ದ ಔಷಧಿಗಳ ದಾಸ್ತಾನು ಇರುವುದನ್ನು ಗಣಕದಲ್ಲಿ ನೋಡಿ ಖಚಿತಪಡಿಸಿಕೊಂಡು ‘ಬಿಲ್’’ ಮಾಡಿ ಹಣ ಪಡೆದ ಬಳಿಕ ಔಷಧಿಗಳನ್ನು ಜೋಡಿಸತೊಡಗಿದ. ಗಣಕದ ಪ್ರಕಾರ ದಾಸ್ತಾನು ಇರಬೇಕಿದ್ದ ಒಂದು ಔಷಧಿ ಇರಲಿಲ್ಲ.
ತದನಂತರ ನಡೆದದ್ದು
ಅಂಗಡಿಯವ: “ಸರ್, ಈ ಔಷಧಿ ಸ್ಟಾಕ್ ಇಲ್ಲ. ಕಾಂಪ್ಯೂಟರ್ ಸ್ಟಾಕ್ ಇದೆ ಅಂತ ತೋರಿಸಿದ್ದರಿಂದ ಹೀಗಾಗಿದೆ. ಸಾರಿ ಸರ್. ಸಾಯಂಕಾಲದ ಹೊತ್ತಿಗೆ ತರಿಸಿ ಇಟ್ಟಿರ್ತೇನೆ. ದಯವಿಟ್ಟು ಬಂದು ತಗೊಳ್ಳಿ”
ನಾನು: “ ಅದಕ್ಕಾಗಿ ಇನ್ನೊಂದು ಸಲ ಬರಬೇಕಾಲ್ಲಪ್ಪ. ಆಯಿತು ಬಿಡು. ಇನ್ನೊಂದು ಸಲ ಹೀಗೆ ಮಾಡಬೇಡ”
ಸಂಜೆ ಸುಮಾರು ೫ ಗಂಟೆಗೆ ಅಂಗಡಿಗೆ ಹೋದೆ. ‘ಬಾಕಿ ಇದೆ’ ಎಂಬ ಟಿಪ್ಪಣಿ ಇದ್ದ ಬಿಲ್ ತೋರಿಸಿ ಔಷಧಿ ಕೊಡುವಂತೆ ಕೇಳಿದೆ.
ಅದನ್ನು ನೋಡಿದ ಅಂಗಡಿಯವ: “ಇದು ಇನ್ನೂ ಬಂದಿಲ್ಲ ಸರ್. ೬-೬.೩೦ ಮೇಲೆ ಬನ್ನಿ ಸರ್”
ಅಂಗಡಿಯವನ ಪ್ರಕಾರ ‘ಸಂಜೆ’ ಅಂದರೆ ೬-೬.೩೦ ರ ನಂತರ. ‘ಸಂಜೆ’ ಪದವನ್ನು ನಾನು ಅರ್ಥೈಸಿದ್ದು ಹೇಗೆಂಬುದನ್ನು ಗಮನಿಸಿ. ಇದಕ್ಕೆ ಕಾರಣ, ಇದನ್ನು ಹೇಗೆ ತಪ್ಪಿಸಬಹುದಿತ್ತು ಇವೇ ಮೊದಲಾದವನ್ನು ನೀವೇ ಆಲೋಚಿಸಿ.
ಉದಾಹರಣೆ ೩.
ಸಂದರ್ಭ
ನಮ್ಮ ಮನೆಯ ಕೈತೋಟದ ಹೂಕುಂಡಗಳಲ್ಲಿದ್ದ ಗಿಡಗಳನ್ನು ಪೆಟ್ಟಾಗದಂತೆ ಹೊರತೆಗೆದು ಹೊಸಮಣ್ಣು ಗೊಬ್ಬರ ತುಂಬಿಸಿ ಪುನಃ ನೆಡಲೋಸುಗ ‘ನಂಬಿಕಸ್ತ’’ ಎಂದು ಬೇರೆಯವರು ಶಿಫಾರಸ್ಸು ಮಾಡಿದ್ದ ಒಬ್ಬ ಕೆಲಸಗಾರನೊಂದಿಗೆ ವ್ಯವಹಾರ ಕುದುರಿಸಿದ ಬಳಿಕ ಆತ ಕೇಳಿದಷ್ಟು ಮುಂಗಡ ಹಣ ಕೊಟ್ಟು ಕಳುಹಿಸಿದ್ದಾಯಿತು. ಮರುದಿನ ಬೆಳಿಗ್ಗೆ ಮಣ್ಣು ಮತ್ತು ಗೊಬ್ಬರದೊಂದಿಗೆ ಹಾಜರಾಗುವುದಾಗಿ ತಿಳಿಸಿ ಆತ ಹೋಗಿದ್ದ.
ತದನಂತರ ನಡೆದದ್ದು
ಮಾರನೇ ದಿನ ಆತ ಬರಲಿಲ್ಲ. ನನ್ನ ತೀರ್ಮಾನ: “ಆತ ನಂಬಿಕಸ್ತನಲ್ಲ. ಮೈಸೂರಿನ ಕಾರ್ಮಿಕರು ವಿಶ್ವಾಸಾರ್ಹರಲ್ಲ’’
ಅದರ ಮರುದಿನವೂ ಆತ ನಾಪತ್ತೆ. ನನ್ನ ತೀರ್ಮಾನ ಗಟ್ಟಿಯಾಯಿತು. ಮೂರನೇ ದಿನ ಆತ ಮಣ್ಣು ಗೊಬ್ಬರಗಳೊಂದಿಗೆ ಪ್ರತ್ಯಕ್ಷನಾದ. ಅನಾರೋಗ್ಯ ನಿಮಿತ್ತ ಹೇಳಿದ ದಿನ ಬರಲಾಗಲಿಲಲ್ಲವೆಂದು ತಿಳಿಸಿದ.
ಈ ವಿದ್ಯಮಾನವನ್ನು ಇನ್ನೊಮ್ಮೆ ಪರಿಶೀಲಿಸಿ.
ತಥ್ಯ: ಹೇಳಿದ ದಿನ ಆತ ಬರಲಿಲ್ಲ
ಅವನ ವರ್ತನೆಗೆ ತಕ್ಷಣ ನಾನು ನೀಡಿದ ಅರ್ಥ: ಆತ ನಂಬಿಕಸ್ತನಲ್ಲ. ಮೈಸೂರಿನ ಕಾರ್ಮಿಕರು ವಿಶ್ವಾಸಾರ್ಹರಲ್ಲ.
ಇಂತು ಅರ್ಥೈಸಿದ್ದು ಸರಿಯೇ ನೀವೇ ಆಲೋಚಿಸಿ.
ಈ ಮುಂದಿನ ಉದಾಹರಣೆಗಳು ನಾನು ಗಮನಿಸಿದವುಗಳಿಂದ ಆಯ್ದವು.
ಉದಾಹರಣೆ ೪.
ತಥ್ಯ
ಒಬ್ಬ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ
ಕೆಲವರು ಅರ್ಥೈಸಿದ್ದು
*ಅವನು ಸರಿಯಾಗಿ ಓದಲಿಲ್ಲ
*ಅವನು ದಡ್ಡ
ಇಂತು ಅರ್ಥೈಸಿದ್ದು ಸರಿಯೇ ನೀವೇ ಆಲೋಚಿಸಿ.
ಉದಾಹರಣೆ ೫.
ತಥ್ಯ
ಅರಣ್ಯ ಇಲಾಖೆಯ ಕೆಳಹಂತದ ನೌಕರನೊಬ್ಬ ದೊಡ್ಡಮನೆಯೊಂದನ್ನು ಕಟ್ಟಿಸಿದ
ಕೆಲವರು ಅರ್ಥೈಸಿದ್ದು
*ಅವನು ಚೆನ್ನಾಗಿ ಲಂಚ ತೆಗೆದುಕೊಂಡಿರಬೇಕು
ಇಂತು ಅರ್ಥೈಸಿದ್ದು ಸರಿಯೇ ನೀವೇ ಆಲೋಚಿಸಿ.
ಉದಾಹರಣೆ ೬.
ತಥ್ಯ
ವಿದ್ಯಾರ್ಥಿನಿಯೊಬ್ಬಳು ತರಗತಿಯ ಆಂತರಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದಳು
ಕೆಲವರು ಅರ್ಥೈಸಿದ್ದು
*ಅವಳು ವಿಭಾಗ ಮುಖ್ಯಸ್ಥರ ಜಾತಿಯವಳೋ ಸಂಬಂಧಿಯೋ ಆಗಿರಬೇಕು
ಇಂತು ಅರ್ಥೈಸಿದ್ದು ಸರಿಯೇ ನೀವೇ ಆಲೋಚಿಸಿ.
ಈ ಎಲ್ಲ ಉದಾಹರಣೆಗಳು ‘ಅನೇಕ ಅನರ್ಥಗಳ ಮೂಲ - ಎಲ್ಲವನ್ನೂ ಅರ್ಥೈಸುವ ಪ್ರವೃತ್ತಿ’ ಎಂಬುದನ್ನು ಸಾಬೀತು ಪಡಿಸುತ್ತವೆಯಲ್ಲವೇ?
ಈಗ ನೀವೇ ಆಲೋಚಿಸಿ, ಈ ಪ್ರವೃತ್ತಿಯನ್ನು ನಿಯಂತ್ರಣದಲ್ಲಿ ಇರಿಸಿಕೊಂಡರೆ ಮಾನವ ಸಂಬಂಧಗಳು ಎಷ್ಟು ಉತ್ತಮಗೊಳ್ಳುತ್ತವೆ ಎಂಬುದನ್ನು.

1 comment:
ಸೋದಾಹರಣ ವಿಶ್ಲೇಷಣೆ ತುಂಬ ಚೆನ್ನಾಗಿದೆ. ಈ ಹೇಳಿಕೆ, ಗ್ರಹಿಕೆಗಳ ವ್ಯತ್ಯಾಸ ಕಳೆಯುವುದಕ್ಕೇ ನಾವೆಷ್ಟು ಮೀನು ತಿಂದರೂ I mean, mean ಬಳಸಿದರೂ ಕಡಿಮೆಯೇ
Post a Comment