Pages

8 May 2012

‘ಗುರು’ ಎಂಬ ಪರಿಕಲ್ಪನೆ

ನಮ್ಮ ಪೈಕಿ ಬಹುಮಂದಿ ನಮಗೆ ಲಾಭದಾಯಕ ಆಗಬಹುದಾದ ಸನ್ನಿವೇಶಗಳಲ್ಲಿ ನಮ್ಮ ‘ಶಿಕ್ಷಕ (ಟೀಚರ್)’ ರನ್ನು ಗುರು ಎಂದು ಸಂಬೋಧಿಸಿ ಅವರ ಮೆಚ್ಚುಗೆಗೆ ಪಾತ್ರರಾಗಲು ಪ್ರಯತ್ನಿಸಿದ್ದುಂಟು. ವಾಸ್ತವವಾಗಿ ನಮ್ಮ ಪುರಾತನರು ಯಾರನ್ನು ಗುರು ಎಂದು ಉಲ್ಲೇಖಿಸುತ್ತಿದ್ದರೋ ಅವರಲ್ಲಿ ಗೋಚರಿಸುತ್ತಿದ್ದ ಲಕ್ಷಣಗಳು ಇಂದಿನ ‘ಶಿಕ್ಷಕ (ಟೀಚರ್)’ಗಳಲ್ಲಿ ಗೋಚರಿಸುತ್ತದೆಯೇ? ‘ಗುರು’ ಎಂಬ ಪದ ಆಂಗ್ಲಭಾಷೆಯ ‘ಟೀಚರ್’ ಎಂಬ ಪದಕ್ಕೆ ಸಮಾನಾರ್ಥಕವಾಗಬಲ್ಲುದೇ

ಈ ಪ್ರಶ್ನೆಗೆ ಉತ್ತೆರ ಕಂಡುಕೊಳ್ಳಲು ನೆರವು ನೀಡುತ್ತದೆ ಈ ಮುಂದಿನ ‘ಸಾಮ್ಯತೆ-ವ್ಯತ್ಯಾಸಗಳ’ ಪಟ್ಟಿ. ಈ ಪಟ್ಟಿಯ ರೂವಾರಿ ಯಾರು ಎಂಬುದು ತಿಳಿದಿಲ್ಲ. ಎಂದೇ, ‘ಅಜ್ಞಾತ ಅನಾಮಧೇಯ ರೂಪಿತ’ ಅಂದುಕೊಳ್ಳಲು ಅಡ್ಡಿಯಿಲ್ಲ. (ಗಮನಿಸಿ ; ಇದರ ರೂವಾರಿ ನಾನಲ್ಲ)

ಶಿಕ್ಷಕರು (ಟೀಚರ್)ಗುರುಗಳು
ನಮ್ಮ ಬೆಳೆವಣಿಗೆಯ ಜವಾಬ್ದಾರಿಯನ್ನು ತಾವು ಹೊರುತ್ತಾರೆನಮ್ಮ ಬೆಳೆವಣಿಗೆಯ ಜವಾಬ್ದಾರಿಯನ್ನು ನಾವೇ ಹೊತ್ತುಕೊಳ್ಳುವಂತೆ ಮಾಡುತ್ತಾರೆ
ನಮ್ಮ ಬೆಳೆವಣಿಗೆಗೆ ಅಗತ್ಯವಾದವುಗಳನ್ನು ಗುರುತಿಸಿ ಅವುಗಳ ಪೈಕಿ ನಮ್ಮಲ್ಲಿ ಇಲ್ಲದಿರುವವನ್ನು ನೀಡಲು ಪ್ರಯತ್ನಿಸುತ್ತಾರೆಬೆಳೆವಣಿಗೆಗೆ ಅಡ್ಡಿಯುಂಟು ಮಾಡುತ್ತಿರುವ ನಮ್ಮಲ್ಲಿರುವವನ್ನು ತೆಗೆದು ಹಾಕುತ್ತಾರೆ
ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆಪ್ರಶ್ನೆಗಳಿಗೆ ನಾವು ನೀಡುವ ಉತ್ತರಗಳ ಕುರಿತು ನಮ್ಮನ್ನೇ ಪ್ರಶ್ನಿಸುತ್ತಾರೆ
ಜೀವನದ ಗೋಜಲುಗಳಿಂದ ಹೊರಬರಲು ನೆರವು ನೀಡುತ್ತಾರೆಜೀವನದ ಗೋಜಲುಗಳನ್ನು ನಾಶ ಮಾಡುತ್ತಾರೆ
ವಿಧೇಯತೆ ಮತ್ತು ಶಿಸ್ತನ್ನು ಅಪೇಕ್ಷಿಸುತ್ತಾರೆಶ್ರದ್ಧೆ ಮತ್ತು ನಮ್ರತೆಯನ್ನು ಅಪೇಕ್ಷಿಸುತ್ತಾರೆ
‘ಬಾಹ್ಯ’ ಜಗತ್ತಿನಲ್ಲಿ ಪಯಣಿಸಲು ಅಗತ್ಯವಾದ ‘ಉಡುಪನ್ನು’ ನಮಗೆ ತೊಡಿಸಿ ಸಜ್ಜುಗೊಳಿಸುತ್ತಾರೆ‘ಆಂತರಿಕ’ ಜಗತ್ತಿನಲ್ಲಿ ಪಯಣಿಸಲು ಅನುಕೂಲವಾಗುವಂತೆ ನಮ್ಮನ್ನು ‘ವಿವಸ್ತ್ರ’ರನ್ನಾಗಿಸಿ ಸಜ್ಜುಗೊಳಿಸುತ್ತಾರೆ
ವಿಕಾಸ ಪಥದಲ್ಲಿ ಮಾರ್ಗದರ್ಶಿಯಾಗುತ್ತಾರೆವಿಕಾಸ ಪಥ ತೋರಿಸುವ ‘ಕೈಕಂಬ’ವಾಗುತ್ತಾರೆ
ಯಶಸ್ಸಿನ ಹಾದಿಯಲ್ಲಿ ನಮ್ಮನ್ನು ಕಳುಹಿಸುತ್ತಾರೆಸ್ವಾತಂತ್ರ್ಯದ ಹಾದಿಯಲ್ಲಿ ನಮ್ಮನ್ನು ಕಳುಹಿಸುತ್ತಾರೆ
ವಿಶ್ವದ ಆಗುಹೋಗುಗಳನ್ನೂ ಅದರ ನಿಜ ಸ್ವರೂಪವನ್ನು ವಿವರಿಸುತ್ತಾರೆನಮ್ಮ ಮನಸ್ಸಿನ ಆಗುಹೋಗುಗಳನ್ನೂ ನಮ್ಮ ನಿಜ ಸ್ವರೂಪವನ್ನೂ ವಿವರಿಸುತ್ತಾರೆ
೧೦ಜಗತ್ತಿನಲ್ಲಿ ಹೇಗೆ ವ್ಯವಹರಿಸಬೇಕೆಂಬುದು ತಿಳಿಯುವಂತೆ ಮಾಡುತ್ತಾರೆಜಗತ್ತಿಗೂ ನಮಗೂ ಇರುವ ಸಂಬಂಧವನ್ನೂ ಜಗತ್ತಿಗೆ ಸಂಬಂಧಿಸಿದಂತೆ ಸಾಪೇಕ್ಷವಾಗಿ ನಮ್ಮ ಸ್ಥಾನಮಾನ  ಏನು ಎಂಬುದನ್ನೂ ತಿಳಿಯುವಂತೆ ಮಾಡುತ್ತಾರೆ
೧೧ನಮಗೆ ಹೊಸ ಮಾಹಿತಿ ಒದಗಿಸುವುದರ ಮುಖೇನ ನಮ್ಮ ಅಹಂ ಮೇಲಕ್ಕೇರುವಂತೆ ಮಾಡುತ್ತಾರೆನಾವು ಸಂಪಾದಿಸಿದ ಮಾಹಿತಯಲ್ಲಿನ ಲೋಪದೋಷಗಳನ್ನು ತೋರಿಸಿ ಅಹಂ ಅನ್ನು ದುರ್ಬಲಗೊಳಿಸುತ್ತಾರೆ
೧೨ನಾವು ನಿಶಿತಮತಿಗಳಾಗುವಂತೆ ಮಾಡುತ್ತಾರೆನಾವು ಪೂರ್ವಗ್ರಹಗಳಿಲ್ಲದ ಮುಕ್ತಮನಸ್ಸಿನವರಾಗುವಂತೆ ಮಾಡುತ್ತಾರೆ
೧೩ನಮ್ಮ ಮನಸ್ಸನ್ನು ಪ್ರಭಾವಿಸುತ್ತಾರೆನಮ್ಮ ಆತ್ಮವನ್ನು ಸ್ಪರ್ಶಿಸುತ್ತಾರೆ
೧೪ನಾವು ಜ್ಞಾನಿಗಳು (ನಾಲೆಜೆಬಲ್) ಆಗಲು ನೆರವು ನೀಡುತ್ತಾರೆನಾವು ವಿವೇಕಿಗಳಾಗಲು (ವೈಸ್) ನೆರವು ನೀಡುತ್ತಾರೆ
೧೫ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ ಎಂಬುದನ್ನು ಕಲಿಯಲು ಸಹಾಯ ಮಾಡುತ್ತಾರೆವಿವಾದಾಂಶಗಳಿಗೆ ಸಂಬಂಧಿಸಿದಂತೆ ದೃಢ ನಿರ್ಧಾರ ಕೈಗೊಳ್ಳುವುದು ಹೇಗೆಂಬುದನ್ನು ತೋರಿಸುತ್ತಾರೆ
೧೬ಕ್ರಮಬದ್ಧವಾಗಿ ಆಲೋಚಿಸುವುದರ ಮುಖೇನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದನ್ನು ಕಲಿಯಲು ನೆರವು ನೀಡುತ್ತಾರೆಅಸಾಂಪ್ರದಾಯಿಕ ಅಥವ ಅತಾರ್ಕಿಕ ವಿಧಾನಗಳಿಂದ ಆಲೋಚಿಸುವ ಮುಖೇನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದನ್ನು ಕಲಿಯಲು ನೆರವು ನೀಡುತ್ತಾರೆ
೧೭ತಂದೆ-ಮಗ ಸಂಬಂಧಕ್ಕೆ ಸಮನಾದದ್ದು ಶಿಕ್ಷಕ - ವಿದ್ಯಾರ್ಥಿ ಸಂಬಂಧತಾಯಿ-ಮಗು ಸಂಬಂಧಕ್ಕೆ ಸಮನಾದದ್ದು ಗುರು-ಶಿಷ್ಯ ಸಂಬಂಧ
೧೮ಶಿಕ್ಷಕರನ್ನು ಪಡೆಯುವುದು ಸುಲಭಶಿಕ್ಷಕರನ್ನು ಪಡೆಯುವಂತೆ ಗುರುವನ್ನು ಪಡೆಯಲು ಸಾಧ್ಯವಿಲ್ಲ. ಗುರು ತನ್ನ ಶಿಷ್ಯನನ್ನು ತಾನಾಗಿಯೇ ಆಯ್ದು ಶಿಷ್ಯ ಎಂದು ಸ್ವೀಕರಿಸಬೇಕು
೧೯ಕೈ ಹಿಡಿದು ಮುನ್ನಡೆಸುತ್ತಾರೆತಾವೇ ಅನುಕರಣಯೋಗ್ಯ ಮಾದರಿಯಾಗಿ ಮುನ್ನಡೆಸುತ್ತಾರೆ
೨೦ನಮಗೆ ಆದೇಶಿಸುತ್ತಾರೆನಮ್ಮನ್ನು ರೂಪಿಸುತ್ತಾರೆ
೨೧ವಿದ್ಯಾಭ್ಯಾಸದ ಅಂತ್ಯದಲ್ಲಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆವಿದ್ಯಾಭ್ಯಾಸದ ಅಂತ್ಯದಲ್ಲಿ ನಾವು ಕೃತಜ್ಞತಾಪೂರ್ವಕವಾಗಿ ಋಣಿಗಳಾಗುತ್ತೇವೆ

5 comments:

Kusuma.S.Reddy said...

BahaLa Chennagide...A teacher can not be a 'guru' all the times.. Idu Odi nammajja HELutidda shloka nenapaaitu... 'Guru'vina lakshnagala bagge..

Brahmaanandham Parama Sukhadam
Kevalam Jnaana Murthim
Dhvandhvaa Theetham Gagana Sadhrisham
Tathvam Asyaadi Lakshyam
Ekam Nithyam Vimalam Achalam
Sarvadhee Saakshi Bhutham
Bhavaatheetham Thriguna Rahitham
Sadhgurum Tham Namaami.

raoavg said...

ನಿಜ.

Badari Narayana said...

ನಮ್ಮ ನಮ್ಮ ಬಾಳಿನಲ್ಲಿ ಮರೆಯದೆ ಆದರ್ಶಪ್ರಾಯರಾಗಿ ಉಳಿಯುವ ಮಹನಿಯರ ಗುಣ ಲಕ್ಷಣಗಳು ಎಂತಹವು ಎಂದು ಸರಳ ಪಟ್ಟಿಯಂತೆ ಸುಲಲಿತವಾಗಿ ಬಿಚ್ಚಿಟ್ಟಿದೆ ಈ ನಿಮ್ಮ ಬರಹ.
ನಾವು ಗುರುಗಳೆಂದು ಗೌರವಿಸಿ ಏಕೆ ನೆನೆಯುತ್ತೇವೆ, ನಮ್ಮ ಜೀವನಕ್ಕೆ ಹೇಗೆ ಅಡಿಪಾಯ ಹಾಕಿದರು, ಒಂದು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಹೇಗೆ ಸದಾ ಸಿದ್ದರಿದ್ದರು ಎಲ್ಲವೂ ಸುಲಭವಾಗಿ ತಾಳೆಯಾಗುತ್ತದೆ.
ಕನ್ನಡದಲ್ಲಿ ಈ ಮಾಹಿತಿಯನ್ನು ನೀಡಿದ್ದಕ್ಕೆ ನನ್ನ ಗುರು ನಮನ.

raoavg said...

ಧನ್ಯವಾದಗಳು

abhinava said...

guru is god but teacher is truth god idu nana nambike