ಇಲ್ಲಿ ವರ್ಣಿಸಿರುವ ಪ್ರಯೋಗಗಳಲ್ಲಿ ಘಟಿಸುವ ವಿದ್ಯಮಾನಗಳು ಮೇಲ್ನೋಟಕ್ಕೆ ವಿಸ್ಮಯಕಾರಿ ಅನ್ನಿಸಿದರೂ ಜಡತ್ವ ತತ್ವಕ್ಕೆ ಅನುಗುಣವಾಗಿಯೇ ಜರಗುತ್ತವೆ.
೧. ಐದು ರೂಪಾಯಿಯ ೫-೧೦ ನಾಣ್ಯಗಳನ್ನು ಅಥವ ಗಾತ್ರ ಮತ್ತು ತೂಕಗಳಲ್ಲಿ ಅವನ್ನು ಹೋಲುವ ಲೋಹದ ಬಿಲ್ಲೆಗಳನ್ನು ಸಂಗ್ರಹಿಸಿ. ಅವನ್ನು ಅಚ್ಚುಕಟ್ಟಾಗಿ ಒಂದರಮೇಲೊಂದರಂತೆ ಪೇರಿಸಿ. ಅಟ್ಟಿಯನ್ನು ಬೀಳಿಸದೆಯೇ ಹಾಗೂ ಇತರ ನಾಣ್ಯಗಳನ್ನು ಮುಟ್ಟದೆಯೇ ಅಟ್ಟಿಯ ಅತ್ಯಂತ ಕೆಳಗಿನ ನಾಣ್ಯವನ್ನು ತೆಗೆಯುವುದು ಹೇಗೆ? ಅತಿ ತೆಳುವಾದ ಅಳತೆ ಪಟ್ಟಿಯಿಂದ ಮೇಜಿಗೆ ಸಮಾಂತರವಾಗಿ ಬಲು ಜೋರಾಗಿ ಬೀಸಿ ಅತ್ಯಂತ ಕೆಳಗಿನ ನಾಣ್ಯಕ್ಕೆ ಹೊಡೆಯಿರಿ (ಚಿತ್ರ ೧).
೨. ಸುಮಾರು ೫ x ೧೦ ಸೆಂಮೀ ಅಳತೆಯ ಕಾಗದದ ಪಟ್ಟಿಯೊಂದನ್ನು ತಯಾರಿಸಿ. ಸುಮಾರು ೩ ಸೆಂಮೀ ನಷ್ಟು ಭಾಗ ಮೇಜಿನ ಮೇಲೆಯೂ ಉಳಿದದ್ದು ಮೇಜಿನ ಅಂಚಿನಿಂದ ಹೊರಗೆ ಚಾಚಿರುವಂತೆಯೂ ಇಟ್ಟು ೫ ರೂಪಾಯಿಯ ನಾಣ್ಯವನ್ನು ಅದರ ಅಂಚಿನ ಮೇಲೆ ನಿಲ್ಲಿಸಿ. ನಾಣ್ಯ ಮೇಜಿನ ಮೇಲಿರುವ ಕಾಗದದ ಪಟ್ಟಿಯ ಅಂಚಿನಲ್ಲಿಯೇ ಇರಬೇಕು.
೩. ೊಂದು ಇಟ್ಟಿಗೆ ಅಥವ ತತ್ಸಮನಾದ ಘನವನ್ನು ಸಂಗ್ರಹಿಸಿ. ಇಟ್ಟಿಗೆಯನ್ನು ಕಟ್ಟಿ ನೇತು ಹಾಕಬಹುದಾದ ಹಾಗೂ ಕೈನಿಂದ ಝಾಡಿಸಿ ಎಳೆದರೆ ಸುಲಭವಾಗಿ ತುಂಡಾಗುವ ಸುಮಾರು ೩-೪ ಮೀ ಉದ್ದದ ದಾರವನ್ನೂ ಸಂಗ್ರಹಿಸಿ. ಸುಮಾರು ೧ ಮೀ ಉದ್ದದಷ್ಟು ದಾರವನ್ನು ಕತ್ತರಿಸಿ ಇಟ್ಟುಕೊಳ್ಳಿ. ಉಳಿದ ದಾರದ ನೆರವಿನಿಂದ ಇಟ್ಟಿಗೆಯನ್ನು ಯಾವುದಾದರೂ ಭದ್ರವಾದ ಆಧಾರಕ್ಕೆ ನೇತು ಹಾಕಿ. ಇಟ್ಟಿಗೆಯ ಕೆಳಭಾಗದಲ್ಲಿ ಇರುವ ನೇತುಹಾಕಿದ ದಾರದ ಮಧ್ಯ ಭಾಗಕ್ಕೆ ಕತ್ತರಿಸಿ ಇಟ್ಟುಕೊಂಡಿದ್ದ ದಾರದ ತುಂಡನ್ನು ಕಟ್ಟಿ ಇಳಿಬಿಡಿ (ಚಿತ್ರ ೩).
ಈ ಎಲ್ಲ ವಿದ್ಯಮಾನಗಳನ್ನು ಜಡತ್ವ ತತ್ವದ ನೆರವಿನಿಂದ ವಿವರಿಸಲು ಪ್ರಯತ್ನಿಸಿ.
ಈ ತನಕದ ಅನುಭವಗಳನ್ನು ಆಧರಿಸಿ ಮುಂದಿನ ಕಾರ್ಯ ಮಾಡಿ-
ಮೇಜಿನ ಮೇಲೆ ಒಂದು ಲೋಟ, ಟದರ ಬಾಯಿಯ ಮೇಲೆ ಒಂದು ಹಳೆಯ ಅಂಚೆ ಕಾರ್ಡ್, ಅದರ ಮೇಲೆ ಮಧ್ಯದಲ್ಲಿ ಒಂದು ನಾಣ್ಯ ಇಡಿ (ಚಿತ್ರ ೪).
No comments:
Post a Comment