ಎತ್ತರ ಮಾಪಕ
ದೊಡ್ಡ ಮರ, ಕಟ್ಟಡ ಮುಂತಾದವುಗಳ ಎತ್ತರವನ್ನು ಪರೋಕ್ಷ ವಿಧಾನಗಳಿಂದ ಬಲು ಸುಲಭವಾಗಿ ಅಂದಾಜು ಮಾಡಬಹುದು. ಅದಕ್ಕೆ ನೀವು ಮಾಡಬೇಕಾದದ್ದು ಇಷ್ಟೆ: ದಪ್ಪ ರಟ್ಟಿನಿಂದ ಒಂದು ಸಮದ್ವಿಬಾಹು ಲಂಬಕೋನ ತ್ರಿಭುಜ ರಚಿಸಿ. ಅದರ ಅಳತೆಗಳು ಇಷ್ಟೇ ಇರಬೇಕೆಂಬ ನಿಯಮ ಇಲ್ಲವಾದರೂ ಸಮವಾಗಿರುವ ತಲಾ ಉದ್ದ ಕನಿಷ್ಠ ೩೦ಸೆಂಮೀ ಇರಲಿ. ಈ ತ್ರಿಭುಜದ ವಿಕರ್ಣದಗುಂಟ ಒಂದು ಕೊಳವೆಯನ್ನು ಅಂಟುಟೇಪಿನ ನೆರವಿನಿಂದ ಜೋಡಿಸಿ. ಇದು ವೀಕ್ಷಣ ಕೊಳವೆ. ಬಾಲ್ ಪಾಇಂಟ್ ಪೆನ್ನಿನಿಂದ ಇದನ್ನು ತಯಾರಿಸಬಹುದು. ವಿಕರ್ಣವು ಯಾವುದಾದರೊಂದು ಬಾಹುವನ್ನು ಸಂಧಿಸುವ ಶೃಂಗಬಿಂದುವಿನ ಸಮೀಪ ಒಂದು ಚಿಕ್ಕ ರಂಧ್ರ ಮಾಡಿ ಲಂಬಸೂತ್ರವನ್ನು ಸಿಕ್ಕಿಸಿದರೆ ಸಿದ್ಧವಾಗುತ್ತದೆ ಎತ್ತರಮಾಪಕ. ಲಂಬಸೂತ್ರವು ಕ್ಷಿತಿಜತಲಕ್ಕೆ ಲಂಬವಾಗಿಯೂ ವೀಕ್ಷಣ ಕೊಳವೆಯ ಮೂಲಕ ಸುಲಭವಾಗಿ ನೋಡಲು ಸಾಧ್ಯವಾಗುವಂತೆಯೂ ಎತ್ತರಮಾಪಕವನ್ನು ಕೈನಲ್ಲಿ ಹಿಡಿದುಕೊಳ್ಳಿ. ಎತ್ತರ ಅಂದಾಜು ಮಾಡಬೇಕಾದ ಮರ ಅಥವ ಕಟ್ಟಡದ ತುದಿಯು ವೀಕ್ಷಣ ಕೊಳವೆಯ ಮೂಲಕ ನೋಡಿದಾಗ ಗೋಚರಿಸುವ ತನಕ ಅದರಿಂದ ದೂರಕ್ಕೆ ಅಥವ ಅದರ ಸಮೀಪಕ್ಕೆ ಹೋಗಿ ನಿಲ್ಲಿ. ಆ ಸ್ಥಳದಿಂದ ಅಳತೆ ಮಾಡುತ್ತಿರುವ ಮರ ಅಥವ ಕಟ್ಟಡದ ಬುಡಕ್ಕೆ ಇರುವ ದೂರ (ಮೀಟರ್ ಗಳಲ್ಲಿ)ಅಳೆಯಿರಿ. ಅದಕ್ಕೆ ನಿಮ್ಮ ಎತ್ತರವನ್ನು (ಮೀಟರ್ ಗಳಲ್ಲಿ) ಕೂಡಿಸಿದರೆ ದೊರೆಯುತ್ತದೆ ಅಪೇಕ್ಷಿತ ಎತ್ತರ. ಏಕೆ ಎಂಬುದನ್ನು ಚಿತ್ರದ ನೆರವಿನಿಂದ ನೀವೇ ಪತ್ತೆ ಹಚ್ಚಿ.

No comments:
Post a Comment