ನೆರಳು ಗಡಿಯಾರ (ಸನ್ ಡಯಲ್)
ದಪ್ಪ ರಟ್ಟಿನಲ್ಲಿ ಚಿತ್ರ ೧ ರಲ್ಲಿ ತೋರಿಸಿದಂಥ ಲಂಬಕೋನ ತ್ರಿಭುಜ ‘ಎಬಿಸಿ’ ರಚಿಸಿ. ಪಾದ ಎಬಿ ಸುಮಾರು ೧೦ ಸೆಂಮೀ ಉದ್ದ ಇರಲಿ. ಕೋನ ಎಬಿಸಿ ನಿಮ್ಮ ಊರಿನ ಅಕ್ಷಾಂಶಕ್ಕೆ ಸಮವಾಗಿರಬೇಕು. (ಅಕ್ಷಾಂಶ ಪತ್ತೆಹಚ್ಚುವುದು ಹೇಗೆ ಎಂಬುದನ್ನು ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೪೦ ರಲ್ಲಿ ವಿವರಿಸಿದ್ದೇನೆ) ಬಲು ಜಾಗರೂಕತೆಯಿಂದ ತ್ರಿಭುಜಾಕೃತಿಯನ್ನು ರಟ್ಟಿನಿಂದ ಕತ್ತರಿಸಿ ಬೇರ್ಪಡಿಸಿ. ನೆರಳು ಗಡಿಯಾರದಲ್ಲಿ ನೆರಳು ಬೀಳಿಸಲು ಈ ರೀತಿ ತಯಾರಿಸಿದ ತ್ರಿಭುಜಾಕೃತಿಯನ್ನೇ ಉಪಯೋಗಿಸ ಬೇಕು. ಎಂದೇ, ಈ ತ್ರಿಭುಜಾಕೃತಿಗೆ ನೆರಳುಕಡ್ಡಿ (ನೋಮೋನ್) ಎಂಬ ಹೆಸರೂ ಇದೆ. ಸುಮಾರು ೨೦ ಸೆಂಮೀ ಬಾಹು ಉಳ್ಳ ಚೌಕಾಕಾರದ ರಟ್ಟಿನ ಆಧಾರ ಪೀಠದ ಮೇಲೆ ರಟ್ಟಿನ ತುಂಡುಗಳ ನೆರವಿನಿಂದ ತ್ರಿಭುಜಾಕೃತಿಯ ‘ಎಬಿ’ ಬಾಹು ಪೀಠದ ಮೇಲಿರುವಂತೆಯೂ ತ್ರಿಭುಜಾಕೃತಿ ಪೀಠಕ್ಕೆ ಲಂಬವಾಗಿ ಇರುವಂತೆಯೂ ನೆರಳು ಕಡ್ಡಿಯನ್ನು ಚಿತ್ರ ೨ ರಲ್ಲಿ ತೋರಿಸಿದಂತೆ ಭದ್ರವಾಗಿ ನಿಲ್ಲಿಸಿ. ಇದೇ ನಿಮ್ಮ ನೆರಳು ಗಡಿಯಾರ.
ನೆರಳು ಕಡ್ಡಿಯ ‘ಬಿಸಿ’ ಬಾಹುವಿನ ವಿಸ್ತರಣೆಯು ಧ್ರುವ ತಾರೆಯತ್ತ ಮುಂದುವರಿಯುವಂತೆಯೂ ‘ಎಬಿ’ ಬಾಹು ಭೌಗೋಲಿಕ ುತ್ತರ-ದಕ್ಷಿಣ ಅಕ್ಷದ ಮೇಲಿರುವಂತೆಯೂ ಆಧಾರ ಪೀಠವು ಕ್ಷಿತಜ ತಲಕ್ಕೆ ಸಮಾಂತರವಾಗಿ ಇರುವಂತೆಯೂ ಇಡೀ ದಿನ ಸೂರ್ಯನ ಬೆಳಕು ಅಬಾಧಿತವಾಗಿ ನೆರಳು ಗಡಿಯಾರದ ಮೇಲೆ ಬೀಳುವ ಸ್ಥಳದಲ್ಲಿ ಅದನ್ನು ಪ್ರತಿಷ್ಠಾಪಿಸಿ. (ಮುಂದೆ ಸಮಯ ನೋಡಬೇಕಾದರೂ ಹೀಗೆಯೇ ಇಟ್ಟು ನೋಡಬೇಕು) ‘ಸಿ’ ಶೃಂಗದ ನೆರಳು ಬೀಳುವ ಸ್ಥಳವನ್ನು ಪ್ರತೀ ಗಂಟೆಗೆ ಒಂದು ಬಾರಿಯಂತೆ ಇಡೀ ದಿನ ಆಧಾರ ಪೀಠದ ಮೇಲೆ ಗುರುತಿಸಿ ಸಮಯಸೂಚೀ ರೇಖೆಗಳನ್ನ ಎಳೆಯಿರಿ. ಪ್ರತೀ ರೇಖೆಯ ಮೇಲೆ ಅದು ಎಷ್ಟು ಗಂಟೆಯನ್ನು ಸೂಚಿಸುವ ರೇಖೆ ಎಂಬುದನ್ನ ಬರೆಯಿರಿ.

ನೆರಳು ಕಡ್ಡಿಯನ್ನು ತಯಾರಿಸಲು ಉಪಯೋಗಿಸಿದ ಅಕ್ಷಾಂಶದ ಮೇಲಿರುವ ಯಾವುದೇ ಸ್ಥಳದಲ್ಲಿ ಸೂರ್ಯನ ಬೆಳಕು ಇರುವಾಗ ಈಗಾಗಲೇ ಸೂಚಿಸಿದ ರೀತಿಯಲ್ಲಿ ಈ ನೆರಳು ಗಡಿಯಾರವನ್ನು ಪ್ರತಿಷ್ಠಾಪಿಸಿ ಸಮಯ ತಿಳಿಯಬಹುದು.

No comments:
Post a Comment