ಸುಮಾರು ೧ಮೀ ಉದ್ದ ಹಾಗೂ ೩-೪ಸೆಂಮೀ ಅಗಲವಿರುವ ಬಲು ತೆಳುವಾದ ಮರದ ಪಟ್ಟಿಯೊಂದನ್ನು ಸಮೀಪದ ಬಡಗಿಯಿಂದ ಸಂಗ್ರಹಿಸಿ. ಬರಿಗೈನಿಂದ ಸುಲಭವಾಗಿ ಮುರಿಯಬಹುದಾದ ಪಟ್ಟಿ ಇದಾಗಿರಬೇಕು. ಸುಮಾರು ೨೦ಸೆಂಮಿ ಭಾಗ ಹೊರಚಾಚಿರುವಂತೆ ಈ ಪಟ್ಟಿಯನ್ನು ಮೇಜಿನ ಮೇಲಿಡಿ. ಗಟ್ಟಿಯಾದ ಕಟ್ಟಿಗೆ ಅಥವ ಸುತ್ತಿಗೆಯಿಂದ ಪಟ್ಟಿಯ ಹೊರಚಾಚಿರುವ ಭಾಗದ ತುದಿಗೆ ಬಲು ಜೋರಾಗಿ ಹೊಡೆದದರೆ ಏನಾಗಬಹುದು - ಊಹಿಸಿ. ನಿನ್ನ ೂಹೆ ಸರಿಯೇ ಎಂಬುದನ್ನು ಜಾಗರೂಕತೆಯಿಂದ ಪರೀಕ್ಷಿಸಿ. ಪಟ್ಟಿ ಹಾರಿ ಅಪಘಾತವಾದೀತು, ಜೋಕೆ.

ಪುನಃ ಪಟ್ಟಿಯನ್ನು ಮೊದಲಿನಂತೆ ಮೇಜಿನ ಮೇಲಿಡಿ. ಮೇಜಿನ ಮೇಲಿರುವ ಪಟ್ಟಿಯ ಭಾಗದ ಮೇಲೆ ಯಾವುದಾದರೂ ವಾರ್ತಾಪತ್ರಿಕೆಯ ದೊಡ್ಡದಾಗಿ ಬಿಡಿಸಿದ ೩-೪ ಹಾಳೆಗಳನ್ನು ಸುಕ್ಕುಗಳೂ ಮಡಿಕೆಯ ಗೆರೆಗಳೂ ಇಲ್ಲದಂತೆ ಹರಡಿ. ಹಾಳೆಗಳ ಸರಿಸುಮಾರು ಮಧ್ಯದಲ್ಲಿ ಪಟ್ಟಿಯ ಭಾಗ ಇರಲಿ. ಈಗ . ಗಟ್ಟಿಯಾದ ಕಟ್ಟಿಗೆ ಅಥವ ಸುತ್ತಿಗೆಯಿಂದ ಪಟ್ಟಿಯ ಹೊರಚಾಚಿರುವ ಭಾಗದ ತುದಿಗೆ ಬಲು ಜೋರಾಗಿ ಹೊಡೆದದರೆ ಏನಾಗಬಹುದು - ಊಹಿಸಿ. ನಿಮ್ಮ ಊಹೆ ಸರಿಯೇ ಎಂಬುದನ್ನು ಪರೀಕ್ಷಿಸಿ. ಪಟ್ಟಿ ಹಿಂದಿನಂತೆ ಮೇಲಕ್ಕೆ ಹಾರುವುದಕ್ಕೆ ಬದಲಾಗಿ ಮುರಿಯಿತೇ? ಪಟ್ಟಿಗೆ ಹೊಡೆದಾಗ ಹಾಳೆಗಳು ಹಾರದಂತೆ ತಡೆದದ್ದು ಯಾವುದು? ಪಟ್ಟಿ ಮುರಿಯಲು ಸಾಧ್ಯವಾಗುವಂತೆ ಮೇಜಿನ ಮೇಲಿದ್ದ ಅದರ ಭಾಗವನ್ನು ಒತ್ತಿ ಹಿಡಿದದ್ದು ಯಾವುದು?
ನಾವು ವಾಯುವಿನ ಸಮುದ್ದರದ ತಳದಲ್ಲಿ ಜೀವಿಸುತ್ತಿರುವುದರಿಂದ ಆಗಿರುವ ಅನುಕೂಲಗಳನ್ನು ನೀವೇ ತರ್ಕಿಸಿ.
No comments:
Post a Comment