Pages

18 March 2014

ತಾರಾವಲೋಕನ ೧೨ - ವೀಕ್ಷಣಾ ಮಾರ್ಗದರ್ಶಿ, ಅಕ್ಟೋಬರ್‌

೨.೧೦   ಅಕ್ಟೋಬರ್

ತಾರಾ ಪಟ . ವಾಸ್ತವಿಕ




ತಾರಾ ಪಟ . ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಸಹಿತ



ತಾರಾ ಪಟ . ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಮತ್ತು ರಾಶಿಗಳ ಸೀಮಾರೇಖೆ ಮತ್ತು
ಅಕರಾದಿಯಾಗಿ ಕನ್ನಡದ ರಾಶಿನಾಮಗಳನ್ನು ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಸಹಿತ



ತಾರಾ ಪಟ . ರಾಶಿಚಕ್ರ



ವೀಕ್ಷಣಾ ಮಾರ್ಗದರ್ಶಿ

ಅಕ್ಟೋಬರ್ ೧೫ ರಂದು ರಾತ್ರಿ ಸುಮಾರು ಗಂಟೆಗೆ ನಿಮ್ಮ ವೀಕ್ಷಣಾ ಸ್ಥಳದಲ್ಲಿ ಖಮಧ್ಯದ ಉತ್ತರಕ್ಕೆ ತುಸು ದೂರದಲ್ಲಿ ಒಂದು, ಅದರ ಪಶ್ಚಿಮಕ್ಕೆ ತುಸು ದೂರದಲ್ಲಿ ಇನ್ನೊಂದು, ಖಮಧ್ಯದ ಸಮೀಪದಲ್ಲಿ ಪಶ್ಚಿಮಕ್ಕೆ ಮತ್ತೊಂದು ಹೀಗೆ ಸಾಪೇಕ್ಷವಾಗಿ ಉಜ್ವಲವಾದ ಮೂರು ತಾರೆಗಳನ್ನು ಗುರುತಿಸಿ. ಇವು ಅನುಕ್ರಮವಾಗಿ ರಾಜಹಂಸ ರಾಶಿಯ ಹಂಸಾಕ್ಷಿ, ವೀಣಾ ರಾಶಿಯ ಅಭಿಜಿತ್ ಮತ್ತು ಗರುಡ ರಾಶಿಯ ಶ್ರವಣ ತಾರೆಗಳು. ಇವನ್ನು ಗುರುತಿಸಿದ ಬಳಿಕ ಈ ಮುಂದಿನ ಸೂಚನೆಗಳಿಗೆ ಅನುಗುಣವಾಗಿ ವೀಕ್ಷಣೆ ಮುಂದುವರಿಸಿ.

ಹಂತ : ಮಾಡಬೇಕಾದ ವೀಕ್ಷಣೆಗಳು ಇವು:

* ಜೂನ್‌ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ವೃಶ್ಚಿಕ, ಸುಯೋಧನ, ಭೀಮ, ವೀಣಾ, ಉರಗಧರ ಮತ್ತು ಸರ್ಪ ರಾಶಿಗಳನ್ನು ಗುರುತಿಸಿ. ವೃಶ್ಚಿಕ ಪಶ್ಚಿಮ ದಿಶೆಯಲ್ಲಿ ತುಸು  ದಕ್ಷಿಣಕ್ಕೆ ಬಾನಂಚಿನಲ್ಲಿಯೂ ಉರಗಧರ ಮತ್ತು ಭೀಮ ಪಶ್ಚಿಮ ಬಾನಂಚಿನ ಸಮೀಪದಲ್ಲಿಯೂ ಇದೆ. ಸುಯೋಧನ ಭಾಗಶಃ ಅಸ್ತವಾಗಿದೆ.
* ಜುಲೈ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ರಾಜಹಂಸ, ಶೃಗಾಲ, ಧನಿಷ್ಠಾ, ಶರ, ಗರುಡ, ಖೇಟಕ ಮತ್ತು ದಕ್ಷಿಣ ಕಿರೀಟ ರಾಶಿಗಳನ್ನು ಗುರುತಿಸಿ.
* ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ರಲ್ಲಿ ನೀಡಿರುವ ಮಾಹಿತಿಯ ನೆರವಿನಿಂದ ಯುಧಿಷ್ಠಿರ ರಾಶಿಯನ್ನು ರಾಜಹಂಸದ ಉತ್ತರದಲ್ಲಿ ಮತ್ತು ಮುಸಲೀ ರಾಶಿಯನ್ನು ವೀಕ್ಷಿಸಿ. ಈ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಕುಂತೀ ರಾಶಿಯನ್ನೂ ಹಂತ ರಲ್ಲಿ ವಿವರಿಸಿದ ನಕುಲ ರಾಶಿಯನ್ನೂ ಗುರುತಿಸಿ. ಈ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಮೇಷ ಮತ್ತು ತಿಮಿಂಗಿಲ ರಾಶಿಗಳು ಪೂರ್ವದಲ್ಲಿ ಉದಯಿಸಿವೆ. ಪೂರ್ವ ದಿಗ್ಬಿಂದುವಿನ ಸಮೀಪದಲ್ಲಿ ಇರುವ ತಿಮಿಂಗಿಲವನ್ನೂ ಅದಕ್ಕೆ ಉತ್ತರದಲ್ಲಿ ತಾಗಿಕೊಂಡು ಮೇಷವೂ ಇದೆ, ಗುರುತಿಸಿ. ಹಂತ ರಲ್ಲಿ ವಿವರಿಸಿದ ಚಕೋರ ರಾಶಿಯು ಪೂರ್ವ ದಿಗಂತದ ಹೆಚ್ಚುಕಮ್ಮಿ ಆಗ್ನೇಯದಲ್ಲಿ ಉದಯಿಸಿದೆ. ಬಕ ರಾಶಿಯ ಪಶ್ಚಿಮಕ್ಕಿರುವ ಇದನ್ನು ಗುರುತಿಸಿ. ಹಂತ ರಲ್ಲಿ ವಿವರಿಸಿದ ಮೀನ ಮತ್ತು ದ್ರೌಪದಿ ರಾಶಿಗಳು ಪೂರ್ವದಲ್ಲಿ ಉದಯಿಸಿವೆ. ಮೇಷ, ಮೀನ ಮತ್ತು ನಕುಲ ರಾಶಿಗಳ ನೆರವಿನಿಂದ ಇವನ್ನು ಗುರುತಿಸಿ. ಹಂತ ೧೦ ರಲ್ಲಿ ವಿವರಿಸಿದ ಶಿಲ್ಪಶಾಲಾ ರಾಶಿಯೂ ಉದಯಿಸಿದೆ. ತಿಮಿಂಗಿಲದ ದಕ್ಷಿಣಕ್ಕೆ ತಾಗಿಕೊಂಡಿರುವ ಇದನ್ನು ಗುರುತಿಸಿ.
* ಆಗಸ್ಟ್‌ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಕಿಶೋರ, ಧನು, ಮಕರ, ಸೂಕ್ಷ್ಮದರ್ಶಿನಿ ಮತ್ತು ದೂರದರ್ಶಿನಿ ರಾಶಿಗಳನ್ನು ಗುರುತಿಸಿ.
* ಸೆಪ್ಟೆಂಬರ್‌ ಮಾರ್ಗದರ್ಶಿಯ ಹಂತ ರಲ್ಲಿ ವಿವರಿಸಿದ ಬಕ, ದಕ್ಷಿಣ ಮೀನ ಮತ್ತು ಕುಂಭ ರಾಶಿಗಳನ್ನು ಗುರುತಿಸಿ.
* ಮಾರ್ಚ್‌ ಮಾರ್ಗದರ್ಶಿಯ ಹಂತ 6 ರಲ್ಲಿ ವಿವರಿಸಿದ ಲಘುಸಪ್ತರ್ಷಿ ರಾಶಿ ಗುರುತಿಸಿ.

ಹಂತ : ಈ ತಿಂಗಳು ಉದಯಿಸಿರುವ ಗುರುತಿಸುವ ಕಾರ್ಯ ಈಗ ಮಾಡಬೇಕಿದೆ.

ದಕ್ಷಿಣ ದಿಗ್ಬಿಂದುವಿನ ಸಮೀಪದ ದಿಗಂತದಲ್ಲಿ ಮಯೂರ ರಾಶಿ (೪೮. ಪೇವೋ, ವಿಸ್ತೀರ್ಣ ೩೭೭.೬೬೬ ಚ ಡಿಗ್ರಿ) ಇದೆ. ಈ ರಾಶಿಯ ಉಜ್ವಲ ತಾರೆ (೧) α ಮಯೂರವನ್ನು (ತೋಉ ೧.೯೨, ದೂರ ೧೮೪ ಜ್ಯೋವ) ಮೊದಲು ಗುರುತಿಸಿ. ತದನಂತರ (೨) β ಮಯೂರವನ್ನು (ತೋಉ ೩.೪೨, ದೂರ ೧೩೯ ಜ್ಯೋವ) ತಾರೆ ಗುರುತಿಸಲು ಪ್ರಯತ್ನಿಸಿ. ಬಾನಂಚಿನಲ್ಲಿ ಭಾಗಶ: ಗೋಚರಿಸುವ ರಾಶಿ ಆದ್ದರಿಂದ ಗುರುತಿಸಲಾಗದಿದ್ದರೆ ನಿರಾಶರಾಗಬೇಕಿಲ್ಲ.
  


ಮಯೂರಕ್ಕೂ ಬಕಕ್ಕೂ ನಡುವೆ ಸಿಂಧೂ ರಾಶಿ (೮೩. ಇಂಡಸ್, ವಿಸ್ತೀರ್ಣ ೨೯೪.೦೦೬ ಚ ಡಿಗ್ರಿ) ಇದೆ. ಇದರ ಅತ್ಯುಜ್ವಲ ತಾರೆ α ಸಿಂಧೂ (ತೋಉ ೩.೧೦, ದೂರ ೧೦೨ ಜ್ಯೋವ). ಕ್ಷೀಣ ತಾರೆ. ಎಂದೇ ಗುರುತಿಸುವುದು ಬಲು ಕಷ್ಟ. ಅದನ್ನು ಅದರ ಪಾಡಿಗೆ ಬಿಡುವುದೇ ಒಳಿತು.

ಸಿಂಹಾವಲೋಕನ


ಅಕ್ಟೋಬರ್ ತಿಂಗಳಿನಲ್ಲಿ ರಾತ್ರಿ ಸುಮಾರು ೮.೦೦ ಗಂಟೆಗೆ ದೃಗ್ಗೋಚರ ಖಗೋಳಾರ್ಧವನ್ನು ಸಂಪೂರ್ಣವಾಗಿ ಅವಲೋಕಿಸಿ ಪರಿಚಯ ಮಾಡಿಕೊಂಡ ರಾಶಿಗಳನ್ನೂ, ವಿಶಿಷ್ಟ ತಾರೆಗಳನ್ನೂ ನಕ್ಷತ್ರಗಳನ್ನೂ ಪಟ್ಟಿಮಾಡಿ. ಅವನ್ನು ವೀಕ್ಷಿಸಿದ ಸಮಯ ಮತ್ತು ನಿಮ್ಮ ದೃಗ್ಗೋಚರ ಖಗೋಳದಲ್ಲಿ ಅವುಗಳ ಸ್ಥಾನವನ್ನೂ ಬರೆದಿಡಿ. 

No comments: