ಕೊಟ್ಟಮಾತಿನಂತೆ ನಡೆದುಕೊಳ್ಳುವುದು ಏಕೆ ನನ್ನ ಜೀವನದರ್ಶನದ ಅವಿಭಾಜ್ಯ ಅಂಗ ಎಂಬುದನ್ನು ನನ್ನ ಜೀವನ ದರ್ಶನ – ೧೨ ರಲ್ಲಿ ವಿವರಿಸಿರುವುದು ಸರಿಯಷ್ಟೆ? ಈ ‘ಕೊಟ್ಟಮಾತಿನಂತೆ ನಡೆದುಕೊಳ್ಳುವುದು’ ಎಂಬುದನ್ನು ಕೇವಲ ‘ಇತರರಿಗೆ’ ಕೊಟ್ಟಮಾತಿನಂತೆ ನಡೆದುಕೊಳ್ಳುವುದಕ್ಕೆ ಸೀಮಿತಗೊಳಿಸಬಾರದು. ಅನೇಕ ಸಂದರ್ಭಗಳಲ್ಲಿ ‘ಇಂಥದ್ದನ್ನು’ ಮಾಡುತ್ತೇವೆ ಎಂದು ಮೌಖಿಕವಾಗಿ ಅಥವ ಮನಸ್ಸಿನಲ್ಲಿಯೇ ನಮಗೆ ನಾವೇ ಹೇಳಿಕೊಳ್ಳುವುದುಂಟು. ಇದನ್ನು ನಮಗೆ ನಾವೇ ‘ಕೊಟ್ಟಮಾತು’ ಎಂದು ಪರಿಗಣಿಸಬೇಕು ಎಂಬುದು ನನ್ನ ನಿಲುವು. ಈ ‘ಕೊಟ್ಟಮಾತಿನಂತೆ’ ನಡೆದುಕೊಳ್ಳದಿರುವುದೂ ಅಪ್ರಾಮಾಣಿಕತೆ.
‘ವ್ರತಗಳು, ಆಡಂಬರದ ಪೂಜೆಗಳು, ಯಾಂತ್ರಿಕವಾಗಿ ಮಾಡುವ ಮತೀಯ ಅಥವ ಜಾತೀಯ ಆಚರಣೆಗಳು’ ಇವೇ ಮೊದಲಾದವುಗಳನ್ನು ನಾನು ಒಪ್ಪುವುದಿಲ್ಲ ಎಂದು ಈಗಾಗಲೇ ಅನೇಕ ಬಾರಿ ಹೇಳಿದ್ದೇನೆ. ಅಂದ ಮಾತ್ರಕ್ಕೆ ಅವನ್ನು ಮಾಡುವವರನ್ನೂ ವಿರೋಧಿಸುತ್ತೇನೆ ಎಂದು ಅರ್ಥೈಸಕೂಡದು. ಯಾವುದೇ ಕಾರಣಕ್ಕೆ (ಅದು ಸರಿಯೇ ತಪ್ಪೇ ಎಂಬ ಚರ್ಚೆ ಇಲ್ಲಿ ಅಗತ್ಯವಿಲ್ಲ) ಯಾವುದೇ ಪೂಜೆ, ವ್ರತ, ಹೋಮ ಇವೇ ಮೊದಲಾದವನ್ನು ಮಾಡುತ್ತೇನೆ ಅಥವ ಮಾಡಿಸುತ್ತೇನೆ ಎಂದು ಮನಸ್ಸಿನಲ್ಲಿ ಸಂಕಲ್ಪಿಸಿಕೊಂಡವರು ಅಥವ ಬಹಿರಂಗವಾಗಿ ಹೇಳಿಕೆ ನೀಡಿದವರು ಅವನ್ನು ಹೇಳಿಕೊಂಡಂತೆ ಅಥವ ಸಂಕಲ್ಪಿಸಿದಂತೆ ಮಾಡಿಸದಿದ್ದರೆ ವಚನಭ್ರಷ್ಟರಾದಂತೆ ಎಂಬುದು ನನ್ನ ನಿಲುವು. ಈ ಹಿಂದಿನ ಲೇಖನದಲ್ಲಿ ಪ್ರತಿಪಾದಿಸಿದಂತೆ ಇದು ‘ನಮ್ಮ ಮಾತನ್ನು ನಾವೇ ಗೌರವಿಸದಿರುವಿಕೆ’ ಅನ್ನಿಸಿಕೊಳ್ಳುವುದರಿಂದ ಧರ್ಮಸಮ್ಮತವೂ ಅಲ್ಲ ಕರ್ಮಬಂಧನದಲ್ಲಿ ಸಿಲುಕಿಸುವುದೂ ಖಾತರಿ. ಮನಸ್ಸಿನಲ್ಲಿಯೇ ಸಂಕಲ್ಪಿಸಿದ್ದನ್ನು, ಅದು ಏನೇ ಆಗಿರಲಿ, ಮಾಡದೇ ಇರುವುದು ‘ಕೊಟ್ಟಮಾತನ್ನು’ ಗೌರವಿಸದಿರುವುದಕ್ಕೆ ಸಮನಾದ ಕ್ರಿಯೆ ಎಂಬುದು ನನ್ನ ನಿಲುವು.
‘ಈ ಸೋಮವಾರ ಸ್ನೇಹಿತನನ್ನು ಭೇಟಿಯಾಗುತ್ತೇನೆ’, ‘ಈ ಭಾನುವಾರ ಮನೆಯ ಕಿಟಕಿಗಳೆಲ್ಲವನ್ನೂ ಸ್ವಚ್ಛಗೊಳಿಸುತ್ತೇನೆ’, ‘ಪ್ರತೀ ದಿನ ೬ ಗಂಟೆ ಕಾಲ ಅಧ್ಯಯನ ಮಾಡುತ್ತೇನೆ’ ‘ಈ ಪರೀಕ್ಷೆಯಲ್ಲಿ ಉತ್ತೀರ್ಣನಾದರೆ ಊರ ದೇವರಿಗೆ ಕುಂಕುಮಾರ್ಚನೆ ಮಾಡಿಸುತ್ತೇನೆ’ ಇವೇ ಮೊದಲಾದ ಎಲ್ಲ ತೀರ್ಮಾನಗಳೂ ‘ನಿಮಗೆ ನೀವೇ ಕೊಟ್ಟಮಾತುಗಳು’. ಎಂದೇ. ಅದರಂತೆ ಮಾಡಲೇಬೇಕು. ನಿಮ್ಮ ಸಂಕಲ್ಪದಲ್ಲಿ ಉಲ್ಲೇಖಿಸಿದ ಕ್ರಿಯೆಗಳ ಯುಕ್ತಾಯುಕ್ತತೆಯನ್ನು, ವೈಜ್ಞಾನಿಕತೆಯನ್ನು, ಸಂಕಲ್ಪಕ್ಕೆ ಮುನ್ನವೇ ಆಲೋಚಿಸಬೇಕು, ಸಂಖಲ್ಪಿಸಿದ ನಂತರ ಅಲ್ಲ. ಸಂಕಲ್ಪ/ಕೊಟ್ಟಮಾತು ನಗಣ್ಯವಾದವುಗಳೇ, ಕ್ಷುಲ್ಲಕವಾದವುಗಳೇ, ಅತೀ ಮುಖ್ಯವಾದವುಗಳೇ ಮುಂತಾದ ಯಾವ ಅಂಶಗಳನ್ನೂ ಸಂಕಲ್ಪಾನಂತರ ಪರಿಗಣಿಸಕೂಡದು. ಮಾತು ಕೊಟ್ಟಾಗಿದೆ, ಅದರಂತೆ ನಡೆದುಕೊಳ್ಳಬೇಕಾದದ್ದು ಧರ್ಮ ಅಂದುಕೊಂಡು ನಡೆದುಕೊಳ್ಳಬೇಕು ಮತ್ತು ಅದರ ಪರಿಣಾಮಗಳನ್ನು, ಅವು ಏನೇ ಆಗಿರಲಿ, ಅನುಭವಿಸುವುದೇ ಧರ್ಮಸಮ್ಮತ ವರ್ತನೆ,
ನನ್ನ ಜೀವನದಲ್ಲಿ ನಾನು ಅಳವಡಿಸಿಕೊಂಡಿರುವ ತತ್ವ ಇದು, ಅನುಷ್ಠಾನದಲ್ಲಿ ೯೦% ಯಶಸ್ವಿಯೂ ಆಗಿದ್ದೇನೆ.

No comments:
Post a Comment