ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್।
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್।।
[ಯಾರ ಕೃಪೆಯು ಮೂಕನನ್ನು ವಾಚಾಳಿಯನ್ನಾಗಿಯೂ ಕುಂಟನು ಪರ್ವತವನ್ನು (ಏರಿ) ದಾಟುವಂತೆಯೂ ಮಾಡುವುದೋ ಅಂತಹ ಪರಮಾನಂದ ಸ್ವರೂಪನಾದ ಮಾಧವನಿಗೆ ವಂದಿಸುತ್ತೇನೆ.]
ಇದು ಭಗವದ್ಗೀತೆಯ ೮ ನೆಯ ಧ್ಯಾನ ಶ್ಲೋಕ. ಬಲು ಸುಂದರವಾಗಿದೆಯಾದರೂ ‘ಅಸಾಧ್ಯವನ್ನು ಸಾಧ್ಯವಾಗಿಸುವ ಸಾಮರ್ಥ್ಯ ಶ್ರೀಮನ್ನಾರಾಯಣನಿಗೆ ಇದೆ ಎಂದು ನಂಬಿ, ಆತನಿಗೆ ಭಕ್ತಿ ಶ್ರದ್ಧೆಗಳಿಂದ ನಮಿಸಿದರೆ ನಿಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ’ ಎಂಬ ಭ್ರಮೆಯಲ್ಲಿ ‘ಆಸ್ತಿಕ’ರನ್ನು ಮುಳುಗಿಸುವ ಧ್ವನಿತಾರ್ಥ ಉಳ್ಳ ಶ್ಲೋಕ ಇದು ಎಂಬ ಭಾವನೆಯನ್ನು ‘ವಿಚಾರವಾದಿ’ಗಳಲ್ಲಿಯೂ ‘ನಾಸ್ತಿಕ’ರಲ್ಲಿಯೂ ಹುಟ್ಟುಹಾಕಿದರೆ ಆಶ್ಚರ್ಯವಿಲ್ಲ. ಸ್ವಘೋಷಿತ ‘ಗುರು’ಗಳನ್ನೂ, ಸ್ವಾಮೀಜಿಗಳನ್ನೂ ಒಳಗೊಂಡಂತೆ ಸಮಸ್ತ ಪುರೋಹಿತಷಾಹಿ ವರ್ಗ ಶ್ಲೋಕದಲ್ಲಿ ಉಲ್ಲೇಖಿಸಿರುವ ‘ಮಾಧವ’ನನ್ನು ಒಲಿಸಿಕೊಳ್ಳಲು ಅನುಸರಿಸಬೇಕಾದ ವಿಧಿವಿಧಾನಗಳನ್ನು ‘ಆಸ್ತಿಕ’ ವರ್ಗದ ಮಂದಿಗೆ ಮನಮುಟ್ಟುವಂತೆ ‘ತಿಳಿಸಿ’ ಅವರನ್ನು ಕಾಡುತ್ತಿರುವ ಸಂಕಷ್ಟಗಳನ್ನು ಪರಿಹರಿಸುವ ಮಧ್ಯವರ್ತಿಗಳಾಗಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂಬುದು ನನ್ನ ಅಭಿಮತ.
ನಾನು, ಅರ್ಥಾತ್ ‘ದೇವಭಾಷೆ’ಯನ್ನು ಅಧ್ಯಯಿಸದ, ‘ತ್ರಿಕಾಲ ಸಂಧ್ಯಾವಂದನೆ -----ಮುಂತಾದವನ್ನು’ ಮಾಡದ, ದೇವಾಲಯಗಳಿಗೆ ಆಕಸ್ಮಿಕವಾಗಿ ಹೋದರೂ ಜನಜಂಗುಳಿ ಇದ್ದರೆ ‘ದೇವರ ದರ್ಶನ’ ಮಾಡದೆಯೇ ಹೊರಗಿನಿಂದಲೇ ದೇವಾಲಾಯ ನೋಡಿ ಹಿಂದಿರುಗುವ ನಾನು, ಈ ಶ್ಲೋಕವನ್ನು ಇಂತು ಅರ್ಥೈಸುತ್ತೇನೆ:
‘ನಾನು ಸಾಧಿಸಲಾಗದ್ದು ಏನೂ ಇಲ್ಲ ಎಂಬ ದೃಢ ಆತ್ಮವಿಶ್ವಾಸದಿಂದ ಕಾರ್ಯೋನ್ಮುಖನಾಗುವವನು ಸಾಧಿಸಲಾಗದ್ದು ಯಾವುದೂ ಇಲ್ಲ’
ಶ್ಲೋಕದಲ್ಲಿ ಉಲ್ಲೇಖಿಸಿರುವ ‘ಮಾಧವ’ ಇರುವುದು ನಿಮ್ಮೊಳಗೆಯೇ ವಿನಾ ಹೊರಗಲ್ಲ. (ನೋಡಿ: ನಿಮಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇದೆಯೇ?) ಅಂದ ಮೇಲೆ ಕೃಪೆ ಆಗಬೇಕಾದ್ದು ನಿಮ್ಮೊಳಗಿರುವ ‘ಮಾಧವ’ನಿಂದಲೇ ವಿನಾ ಹೊರಗೆ ಎಷ್ಟು ಹುಡುಕಿದರೂ ಸಿಕ್ಕದ ಮಾಧವನಿಂದಲ್ಲ. ದೇವರು ಸರ್ವಶಕ್ತ ಅನ್ನುವುದು ನಿಜವಾದರೆ ನೀವೂ ಸರ್ವಶಕ್ತರು. ಈ ಸರ್ವಶಕ್ತತೆಯ ಲಾಭ ಪಡೆಯಬೇಕಾದರೆ ನಿಮಗೆ ನಿಮ್ಮೊಳಗಿರುವ ‘ಮಾಧವ’ನ ಸಾಕ್ಷಾತ್ಕಾರವಾಗ ಬೇಕು. ಅರ್ಥಾತ್, ನಿಮ್ಮ ನಿಜ ಸ್ವರೂಪದ ಅರಿವು ನಿಮಗಾಗಬೇಕು. ಇಂತಾಗಬೇಕಾದರೆ ಅರ್ಥಾತ್ ನಿರಂತರ ಸಾಧನೆ ಮಾಡಬೇಕು (ನೋಡಿ: ದೇವರು, ಧರ್ಮ ಮತ್ತು ಮತ, ‘ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ) ‘ಕಾಲ ಕೂಡಿ ಬಂದಾಗ’ (ನೋಡಿ: ಜ್ಞಾನೋದಯ) ಯಶಸ್ಸು ನಿಮ್ಮದಾಗುತ್ತದೆ.
ಸಂಕ್ಷಿಪ್ತವಾಗಿ. ‘ದೇವರ’ ಕೃಪೆಗಾಗಿ ಅಥವ ‘ಆತ್ಮಸಾಕ್ಷಾತ್ಕಾರ’ಕ್ಕಾಗಿ ತಪಸ್ಸು, ಪೂಜೆ ಇವೇ ಮೊದಲಾದವುಗಳಲ್ಲಿ ಸಮಯ ಹಾಳುಮಾಡದೆಯೇ ನಿಮ್ಮ ಸಾಮರ್ಥ್ಯದಲ್ಲಿ ಅಚಲ ವಿಶ್ವಾಸವಿಟ್ಟು ಅಪೇಕ್ಷಿತ ಗುರಿಸಾಧನೆಗೆ ತಕ್ಕುದಾದ ಕ್ರಿಯಾಯೋಜನೆ ತಯಾರಿಸಿ ಅದರಂತೆ ಏಕಾಗ್ರಚಿತ್ತದಿಂದ ಕಾರ್ಯೋನ್ಮುಖರಾಗಿ (ಇದೇ ತಪಸ್ಸು), ಕಾರ್ಯಸಿದ್ಧಿ ಆಗುವುದು ಖಚಿತ.

1 comment:
ಮನಸ್ಸಿದ್ದಂತೆ ಮಾದೇವಾ - ಎಂಬ ಸರಳ ಸತ್ಯ! ನಾನೂ ನಿಮ್ಮ ಗೋತ್ರದವನೇ
ಅಶೋಕವರ್ಧನ
Post a Comment