ಮೋಂಬತ್ತಿಯ ತೂಗುತೊಲೆಯಾಟ (ಕ್ಯಾಂಡಲ್ ಸೀ-ಸಾ)
ಅಳತೆಪಟ್ಟಿಯೊಂದನ್ನು ನೇತುಹಾಕಿದಾಗ ಅದು ತನ್ನ ಸಮತೋಲವನ್ನು ಕಾಯ್ದುಕೊಳ್ಳಬೇಕಾದರೆ ಪಾಲಿಸಲೇಬೇಕಾದ ಷರತ್ತುಗಳು ಯಾವುವು ಎಂಬುದನ್ನು ನೀವು ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೬೫ ಮುಖೇನ ನೀವು ಅರ್ಥಮಾಡಿಕೊಂಡಿದ್ದೀರಿ. ಅಂದಮೇಲೆ, ಈ ಮುಂದಿನ ಚಟುವಟಿಕೆಯಲ್ಲಿ ಜರಗುವ ವಿದ್ಯಮಾನದ ಕಾರಣವನ್ನು ವಿವರಿಸುವುದು ನಿಮಗೆ ಕಷ್ಟವಾಗಲಾರದು --
ಎರಡೂ ತುದಿಗಳಲ್ಲಿ ಬತ್ತಿ ಕಾಣುವಂತೆ ಮೋಂಬತ್ತಿಯೊಂದನ್ನು ಸಜ್ಜುಗೊಳಿಸಿ. ದಾರದ ನೆರವಿನಿಂದ ಅದರ ಗುರುತ್ವ ಕೇಂದ್ರ ಇರುವ ತಾಣ ಪತ್ತೆಹಚ್ಚಿ (ಚಿತ್ರ ೧).

ಸರಿಸುಮಾರಾಗಿ ಗುರುತ್ವಕೇಂದ್ರ ಮೂಲಕ ಹಾದುಹೋಗುವಂತೆ ಮೋಂಬತ್ತಿಯ ುದ್ದನೆಯ ಅಕ್ಷಕ್ಕೆ ಲಂಬವಾಗಿ ದೊಡ್ಡ ಸೂಜಿಯೊಂದನ್ನು ತೂರಿಸಿ (ಚಿತ್ರ ೨, ಸೂಜಿಯನ್ನು ತುಸು ಬಿಸಿ ಮಾಡಿದರೆ ಈ ಕಾರ್ಯ ಸುಲಭ).

೨ ಲೋಟ/ಬಾಟಲ್/ಡಬ್ಬಿ ಮುಂತಾದವುಗಳ ನೆರವಿನಿಂದ ಮೋಂಬತ್ತಿಯನ್ನು ತೂಗುತೊಲೆಯಂತೆ ನಿಲ್ಲಿಸಿ (ಚಿತ್ರ ೩).

ಎರಡೂ ತುದಿಯ ಬತ್ತಿಗಳನ್ನು ಒಂದಾದ ತಕ್ಷಣ ಇನ್ನೊಂದರಂತೆ ಬೆಂಕಿಪೆಟ್ಟಿಗೆಯ ನೆರವಿನಿಂದ ಉರಿಸಿ (ಚಿತ್ರ ೪).

ಮುಂದೆ ಜರಗುವ ಮೋಂಬತ್ತಿಯ ತೊನೆದಾಟವನ್ನು ವೀಕ್ಷಿಸಿ, ಕಾರಣ ವಿವರಿಸಿ
(ನೋಡಿ: http://youtu.be/xrQFpsE4yhY)

No comments:
Post a Comment