ಉರುಳಿಸಿದರೆ ಹಿಂದಿರುಗುವ ಡಬ್ಬಿ
ಶಕ್ತಿ ಸಂರಕ್ಷಣೆಯ ತತ್ವಾಧಾರಿತ ಆಟಿಕೆ ಇದು. ಇದನ್ನು ತಯಾರಿಸಲು ನೀವು ಸಂಗ್ರಹಿಸಲೇ ಬೇಕಾದ ಸಾಮಗ್ರಿಗಳು ಇಂತಿವೆ: ಒಂದು ಸ್ತಂಭಾಕೃತಿಯ ಪ್ಲಾಸ್ಟಿಕ್ ಡಬ್ಬಿ, ಒಂದು ರಬ್ಬರ್ ಬ್ಯಾಂಡ್, ಒಂದು ನಟ್ (ಚಿತ್ರ ೧).

ಇವನ್ನು ಜೋಡಿಸಲು ಒಂದು ದಬ್ಬಳ, ಮೋಂಬತ್ತಿ, ಕತ್ತರಿ, ಬೆಂಕಿಪೆಟ್ಟಿಗೆ ಮತ್ತು ನಟ್ಟಿಗೆ ಬಂಧಿಸಬಹುದಾದ ಲಭ್ಯವಿರುವ ಭಾರವಾದ ಪುಟ್ಟ ವಸ್ತು.
ಡಬ್ಬಿಯ ತಳ ಭಾಗದ ಮಧ್ಯದಲ್ಲಿ ಮತ್ತು ಮುಚ್ಚಳದ ಮಧ್ಯದಲ್ಲಿ ತಲಾ ಎರಡೆರಡು ರಂಧ್ರಗಳನ್ನು ಮಾಡಿ. ದಬ್ಬಳವನ್ನು ಮೋಂಬತ್ತಿಯ ಜ್ವಾಲೆಯಲ್ಲಿ ಕಾಯಿಸಿ ಚುಚ್ಚುವುದರ ಮುಖೇನ ಈ ಕಾರ್ಯ ಸುಲಭವಾಗಿ ಮಾಡಬಹುದು. ರಬ್ಬರ್ ಬ್ಯಾಂಡನ್ನು ಕತ್ತರಿಸಿ ಒಂದು ದಾರದಾಕೃತಿಯಾಗಿ ಪರಿವರ್ತಿಸಿ. ಇದಕ್ಕೆ ನಟ್ಟನ್ನು ಪೋಣಿಸಿ ಮಧ್ಯಭಾಗಕ್ಕೆ ತಂದು ಅದಕ್ಕೆ ಭಾರದ ವಸ್ತುವನ್ನು ಬಂಧಿಸಿ. ನಟ್ಟು ರಬ್ಬರ್ ದಾರದಲ್ಲಿ ಅತ್ತಿತ್ತ ಸರಿಯದಂತೆ ಮಾಡಿ. (ಇಂತು ಮಾಡಲು ಅಗತ್ಯವಿದ್ದರೆ ಅಂಟು ಟೇಪ್ ಅಥವ ದಾರ ಉಪಯೋಗಿಸಿ) (ಚಿತ್ರ ೨).

ಭಾರದ ಭಾಗ ಡಬ್ಬಿಯ ಒಳಗೆ ಮಧ್ಯದಲ್ಲಿ ನೇತಾಡುವಂತೆ ಭಾರ ಸಹಿತವಾದ ರಬ್ಬರ್ ದಾರವನ್ನು ಮೊದಲು ಡಬ್ಬಿಯ ತಳದ ತ್ನಂತರ ಮುಚ್ಚಳದ ರಂದ್ರಗಳ ಮೂಲಕ ಪೋಣಿಸಿ (ಇನ್ನೊಬ್ಬರ ನೆರವು ಪಡೆದರೆ ಇದನ್ನು ಸುಲಭವಾಗಿ ಮಾಡಬಹುದು). ಮುಚ್ಚಳದ ಹೊರ ಭಾಗದಲ್ಲಿ ಗಂಟು ಹಾಕಿ, ಮುಚ್ಚಳ ಭದ್ರ ಪಡಿಸಿ (ಚಿತ್ರ ೩).

ಸಮತಟ್ಟಾದ ನೆಲದಲ್ಲಿ ಡಬ್ಬಿಯನ್ನು ಉರುಳಿಸಿ. ಅದು ಸ್ವಲ್ಪ ದೂರ ಉರುಳಿದ ಬಳಿಕ ನಿಂತು ಪುನಃ ಹಿಂದಕ್ಕೆ ಉರುಳಿ ಬರುವ ಕೌತುಕ ವೀಕ್ಷಿಸಿ. ಏಕೆ ಎಂಬುದನ್ನು ತರ್ಕಿಸಿ. (ಪಾರಕ ಪ್ಲಾಸ್ಟಿಕ್ ಬಾಟಲ್ ಉಪಯೋಗಿಸಿದರೆ ಒಳಗೆ ಜರಗುವ ಪ್ರಕ್ರಿಯೆಯನ್ನು ವೀಕ್ಷಿಸಬಹುದು)
ಉರುಳುವಿಕೆಯ ವಿಡಿಯೋ ಅನ್ನು http://www.youtube.com/watch?v=2TntvWmByNE&feature=youtu.be ನಲ್ಲಿ ನೋಡಿ.

No comments:
Post a Comment