ಸೂರ್ಯ ಮತ್ತು ಚಂದ್ರರ ವ್ಯಾಸವನ್ನು ಸರಿಸುಮಾರಾಗಿ ಅಂದಾಜಿಸುವುದು
ದಪ್ಪರಟ್ಟಿನ ನೋಟ್ಬುಕ್ಕಿನ ಒಂದು ಕಾರ್ಡ್ ಬೋರ್ಡ್ ರಟ್ಟು. ಬಿಳಿ ಕಾಗದದ ಒಂದು ಹಾಳೆ, ಅಲ್ಯುಮಿಮಯಮ್ಮಿನ ಒಂದು ತೆಳುಹಾಳೆ (ಜ್ಯಾಮ್ ಬಾಟಲ್ ಮುಂತಾದವುಗಳಲ್ಲಿ ಮೊಹರು ಮಾಡಲು ಬಳಸುವ ಹಾಳೆಯೂ ಆದೀತು), ಬಲು ಚೂಪಾಗಿರುವ ತುಸು ದಪ್ಪನಾದ ಸೂಜಿ ಅಥವ ಅಂಥದ್ದೇ ಯಾವುದಾದರೂ ಸಾಧನ, ಅಂಟು ಟೇಪ್, ಮೋಂಬತ್ತಿ, ಬೆಂಕಿ ಪೆಟ್ಟಿಗೆ, ಕತ್ತರಿ, ಅಳತೆಪಟ್ಟಿ - ಇವಿಷ್ಟು ಸಾಮಗ್ರಿ ಸಂಗ್ರಹಿಸಿ. ಅಳತೆಪಟ್ಟಿ ಉಪಯೋಗಿಸಿ ನಿಖರವಾಗಿ ಅಳೆಯಬಲ್ಲ ಒಬ್ಬ ವಿಶ್ವಾಸಾರ್ಹ ಮಿತ್ರನನ್ನು ಚಟುವಟಿಕೆಗೆ ನೆರವು ನೀಡಲು ವಿನಂತಿಸಿ.
ರಟ್ಟಿನ ಮಧ್ಯಭಾಗದಲ್ಲಿ ೨ x ೨ ಸೆಂಮೀ ಅಳತೆಯ ಚಚ್ಚೌಕಾಕಾರದ ರಂಧ್ರ ಮಾಡಿ. ಅಂಟು ಟೇಪಿನ ನೆರವಿನಿಂದ ಅಲ್ಯುಮಿನಿಯಮ್ ಹಾಳೆಯನ್ನು ರಂಧ್ರ ಮಚ್ಚುವಂತೆ ನಿಲ್ಲಿಸಿ. ಹಾಳೆಯ ಮಧ್ಯಭಾಗದಲ್ಲಿ ಸೂಜಿಯ ನೆರವಿನಿಂದ ಚಿಕ್ಕ ರಂಧ್ರ ಮಾಡಿ. ಸೂಜಿಯಿಂದ ಮಾಡಿದ ರಂಧ್ರ
ಉಳ್ಳ ಈ ಸಾಧನವನ್ನು ಸೂಜಿರಂಧ್ರ ವೀಕ್ಷಕ ಎಂದು ಹೆಸರಿಸೋಣ. ಈ ವಿಕ್ಷಕ ಸಮರ್ಪಕವಾಗಿದೆಯೇ ಎಂಬುದನ್ನು ಇಂತು ಪರೀಕ್ಷಿಸಿ - ಕತ್ತಲೆ ಕೋಣೆಯಲ್ಲಿ ಮೋಂಬತ್ತಿಯನ್ನು ಉರಿಸಿ ಮೇಜಿನ ಮೇಲೆ ನಿಲ್ಲಿಸಿ. ಅದರಿಂದ ಸುಮಾರು ೧೦ ಸೆಂಮೀ
ದೂರದಲ್ಲಿ ಸೂಜಿರಂಧ್ರ ವೀಕ್ಷಕವನ್ನು ನಿಲ್ಲಿಸಿ. ವೀಕ್ಷಕದ ಯಾವ ಪಾರ್ಶ್ವದಲ್ಲಿ ಮೋಂಬತ್ತಿ ಇದೆಯೋ ಅದರ ವಿರುದ್ಧ ಪಾರ್ಶ್ವದಲ್ಲಿ ವೀಕ್ಷಕದಿಂದ ನಿರ್ದಿಷ್ಟ ದೂರದಲ್ಲಿ ಹಿಡಿದ ಬಿಳಿ ಕಾಗದದ ಹಾಳೆಯ ಮೇಲೆ ಮೋಂಬತ್ತಿಯ ಜ್ವಾಲೆಯ ಬಿಂಬ ಗೋಚರಿಸುತ್ತದೆ. ರಂಧ್ರದ ಅಂಚು ನಯವಾಗಿ ಇಲ್ಲದಿದ್ದರೆ ಬಿಂಬದ ಅಂಚು ಸ್ಪಷ್ಟವಾಗಿ ಇರುವುದಿಲ್ಲ. ರಂಧ್ರದ ಅಂಚು ನಯವಾಗಿ ಇರುವುದನ್ನು ಖಾತರಿ ಮಾಡಿಕೊಳ್ಳಿ. ಹಾಳೆಯನ್ನು ವೀಕ್ಷಕದತ್ತ ಹಾಗೂ ವೀಕ್ಷಕದಿಂದ ದೂರ ಸರಿಸಿದರೆ ಬಿಂಬದ ಗಾತ್ರದಲ್ಲಿ ಆಗುವ ಬದಲಾವಣೆ ಗಮನಿಸಿ.
ಸೂಜಿರಂಧ್ರ ವೀಕ್ಷಕದ ನೆರವಿನಿಂದ ಸೂರ್ಯನ ಬಿಂಬವನ್ನು ಬಿಳಿಯ ಹಾಳೆಯ ಮೇಲೆ
ಪಡೆಯಿರಿ. ಬಿಂಬದ ವ್ಯಾಸವನ್ನೂ ವೀಕ್ಷಕದಿಂದ ಬಿಂಬಕ್ಕಿರುವ ದೂರವನ್ನು ಅಳತೆಪಟ್ಟಯಿಂದ ಅಳೆಯವಂತೆ ನಿಮ್ಮ ಮಿತ್ರನಿಗೆ ಹೇಳಿ. ಈ ಮುಂದೆ ಕೊಟ್ಟಿರುವ ಸೂತ್ರ ಉಪಯೋಗಿಸಿ ಸೂರ್ಯನ ಸರಿಸುಮಾರಾದ ವ್ಯಾಸವನ್ನು ಲೆಕ್ಕಿಸಿ. ಸೂತ್ರದಲ್ಲಿ ಆದೇಶಿಸುವ ಎಲ್ಲ ಅಳತೆಗಳ ಏಕಮಾನ ಒಂದೇ ಆಗಿರುವುದನ್ನು ಖಾತರಿ ಪಡಿಸಿಕೊಳ್ಳಿ.
(ಸೂರ್ಯನ ಬಿಂಬದ ವ್ಯಾಸ/ವೀಕ್ಷಕದಿಂದ ಬಿಂಬಕ್ಕೆ ಇರುವ ದೂರ) x ಭೂಮಿಯಿಂದ ಸೂರ್ಯನಿಗೆ ಇರುವ ದೂರ = ಸೂರ್ಯನ ವ್ಯಾಸ
ಇದೇ ರೀತಿ ಹುಣ್ಣಿಮೆಯ ದಿನದಂದು ಚಂದ್ರನ ವ್ಯಾಸವನ್ನೂ ಅಂದಾಜು ಮಾಡಿ. ಸೂತ್ರದಲ್ಲಿ ಸೂರ್ಯ ಎಂದಿರುವಲ್ಲಿ ಚಂದ್ರ ಎಂದು ಬರೆದರೆ ಅಗತ್ಯವಾದ ಸೂತ್ರ ಲಭಿಸುತ್ತದೆ,
(ಭೂಮಿಯಿಂದ ಸೂರ್ಯನಿಗೆ ಇರುವ ದೂರ = ಸುಮಾರು ೧೪೯,೬೦೦,೦೦೦ ಕಿಮೀ. ಭೂಮಿಯಿಂದ ಚಂದ್ರನಿಗೆ ಇರುವ ದೂರ = ಸುಮಾರು ೩೮೪,೦೦೦ ಕಿಮೀ.
ದಪ್ಪರಟ್ಟಿನ ನೋಟ್ಬುಕ್ಕಿನ ಒಂದು ಕಾರ್ಡ್ ಬೋರ್ಡ್ ರಟ್ಟು. ಬಿಳಿ ಕಾಗದದ ಒಂದು ಹಾಳೆ, ಅಲ್ಯುಮಿಮಯಮ್ಮಿನ ಒಂದು ತೆಳುಹಾಳೆ (ಜ್ಯಾಮ್ ಬಾಟಲ್ ಮುಂತಾದವುಗಳಲ್ಲಿ ಮೊಹರು ಮಾಡಲು ಬಳಸುವ ಹಾಳೆಯೂ ಆದೀತು), ಬಲು ಚೂಪಾಗಿರುವ ತುಸು ದಪ್ಪನಾದ ಸೂಜಿ ಅಥವ ಅಂಥದ್ದೇ ಯಾವುದಾದರೂ ಸಾಧನ, ಅಂಟು ಟೇಪ್, ಮೋಂಬತ್ತಿ, ಬೆಂಕಿ ಪೆಟ್ಟಿಗೆ, ಕತ್ತರಿ, ಅಳತೆಪಟ್ಟಿ - ಇವಿಷ್ಟು ಸಾಮಗ್ರಿ ಸಂಗ್ರಹಿಸಿ. ಅಳತೆಪಟ್ಟಿ ಉಪಯೋಗಿಸಿ ನಿಖರವಾಗಿ ಅಳೆಯಬಲ್ಲ ಒಬ್ಬ ವಿಶ್ವಾಸಾರ್ಹ ಮಿತ್ರನನ್ನು ಚಟುವಟಿಕೆಗೆ ನೆರವು ನೀಡಲು ವಿನಂತಿಸಿ.
ರಟ್ಟಿನ ಮಧ್ಯಭಾಗದಲ್ಲಿ ೨ x ೨ ಸೆಂಮೀ ಅಳತೆಯ ಚಚ್ಚೌಕಾಕಾರದ ರಂಧ್ರ ಮಾಡಿ. ಅಂಟು ಟೇಪಿನ ನೆರವಿನಿಂದ ಅಲ್ಯುಮಿನಿಯಮ್ ಹಾಳೆಯನ್ನು ರಂಧ್ರ ಮಚ್ಚುವಂತೆ ನಿಲ್ಲಿಸಿ. ಹಾಳೆಯ ಮಧ್ಯಭಾಗದಲ್ಲಿ ಸೂಜಿಯ ನೆರವಿನಿಂದ ಚಿಕ್ಕ ರಂಧ್ರ ಮಾಡಿ. ಸೂಜಿಯಿಂದ ಮಾಡಿದ ರಂಧ್ರ

ಸೂಜಿರಂಧ್ರ ವೀಕ್ಷಕದ ನೆರವಿನಿಂದ ಸೂರ್ಯನ ಬಿಂಬವನ್ನು ಬಿಳಿಯ ಹಾಳೆಯ ಮೇಲೆ

(ಸೂರ್ಯನ ಬಿಂಬದ ವ್ಯಾಸ/ವೀಕ್ಷಕದಿಂದ ಬಿಂಬಕ್ಕೆ ಇರುವ ದೂರ) x ಭೂಮಿಯಿಂದ ಸೂರ್ಯನಿಗೆ ಇರುವ ದೂರ = ಸೂರ್ಯನ ವ್ಯಾಸ
ಇದೇ ರೀತಿ ಹುಣ್ಣಿಮೆಯ ದಿನದಂದು ಚಂದ್ರನ ವ್ಯಾಸವನ್ನೂ ಅಂದಾಜು ಮಾಡಿ. ಸೂತ್ರದಲ್ಲಿ ಸೂರ್ಯ ಎಂದಿರುವಲ್ಲಿ ಚಂದ್ರ ಎಂದು ಬರೆದರೆ ಅಗತ್ಯವಾದ ಸೂತ್ರ ಲಭಿಸುತ್ತದೆ,
(ಭೂಮಿಯಿಂದ ಸೂರ್ಯನಿಗೆ ಇರುವ ದೂರ = ಸುಮಾರು ೧೪೯,೬೦೦,೦೦೦ ಕಿಮೀ. ಭೂಮಿಯಿಂದ ಚಂದ್ರನಿಗೆ ಇರುವ ದೂರ = ಸುಮಾರು ೩೮೪,೦೦೦ ಕಿಮೀ.
No comments:
Post a Comment