೧. ಈ ಪ್ರಯೋಗ ನೀರಿನ ಒಂದು ವಿಶಿಷ್ಟ ಲಕ್ಷಣವನ್ನು ನಾಟಕೀಯವಾಗಿ ಪ್ರದರ್ಶಿಸುತ್ತದೆ. ಎಂದೇ ಫಲಿತಾಂಶಕ್ಕಾಗಿ ಕಾತರದಿಂದ ಕಾಯುವ ಮನಃಸ್ಥಿತಿ ನಿರ್ಮಿಸುತ್ತದೆ. ಒಂದು ಪುಟ್ಟ

೨. ನೀರಿನ ಮೇಲ್ಮೈ ಸ್ಥಿತಿಸ್ಥಾಪಕತ್ವ ಉಳ್ಳ ತೆಳು ಪದರದಂತೆ ಇದೆ ಎಂದಾದರೆ ಅದರ ಮೇಲೆ ಬ್ಲೇಡ್ ಅಥವ ಗುಂಡುಪಿನ್ ತೇಲಿಸಲು ಸಾಧ್ಯವೇ? ೊಂದು ಲೋಟದಲ್ಲಿ ನೀರು ತುಂಬಿಸಿ

೩. ಲೋಟದಲ್ಲಿ ನೀರು ತುಂಬಿಸಿ ಎರಡು ಬೆಂಕಿಕಡ್ಡಿಗಳನ್ನು ಚಿತ್ರದಲ್ಲಿ ತೋರಿಸಿದಂತೆ ತೇಲಿಸಿ. ಎರಡು ಕಡ್ಡಿಗಳ ಮಧ್ಯೆ (ಚಿತ್ರದಲ್ಲಿ ಬಾಣದ ಗುರುತಿನಿಂದ ಸೂಚಿಸಿದಲ್ಲಿ) ಸಾಬೂನಿನ

೪. ಸೊಳ್ಳೆಪರದೆಯಂತೆ ಇರುವ ಲೋಹದ ಬಲೆಯ ಚಿಕ್ಕ ತುಂಡೊಂದನ್ನು ಸಂಗ್ರಹಿಸಿ. ಇದನ್ನು ನೀರಿನಲ್ಲಿ ತೇಲಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ. ಸಾಧ್ಯ ಎಂದಾದರೆ, ಅದರ ರಂಧ್ರಗಳ ಮೂಲಕ ನೀರು ನುಸುಳಿ ಬಲೆ ಏಕೆ ಮುಳುಗಲಿಲ್ಲ ಅನ್ನುವುದರ ಕುರಿತು ಆಲೋಚಿಸಿ. ನೀರಿನ ಮೇಲ್ಮೈ ಎಳೆತ ಇದಕ್ಕೆ ಕಾರಣವಾಗಿರಬಹುದೇ?
೫. ಮೇಲಂಚಿನ ವರೆಗೆ ನೀರು ತುಂಬಿರುವ ಒಂದು ಗಾಜಿನ ಲೋಟ ಮತ್ತು ನೀರಿನಲ್ಲಿ ತೇಲಬಲ್ಲ ಬೆಂಡಿನ ಒಂದು ಚಿಕ್ಕ ತುಂಡು ಸಂಗ್ರಹಿಸಿ. ಲೋಟವನ್ನು ಮೇಜಿನ ಮೇಲಿಟ್ಟು ಅದರ ಮೇಲಂಚಿನ ತನಕ ನೀರು ತುಂಬಿರುವುದನ್ನು ಖಾತರಿ ಪಡಿಸಿಕೊಳ್ಳಿ. ಇನ್ನೂ ಒಂದು ಚಮಚೆ ನೀರು ಸೇರಿಸಿದರೆ ಹರಚೆಲ್ಲುವಷ್ಟು ನೀರು ಲೋಟದಲ್ಲಿ ಇರಬೇಕು. ಜಾಗರೂಕತೆಯಿಂದ ಬೆಂಡಿನ ತುಂಡನ್ನು ನೀರಿನಲ್ಲಿ ತೇಲಿಸಿ ಲೋಟದ ಅಂಚಿಗೆ ತಂದು ಬಿಡಿ. ಅದು ತಾನಾಗಿಯೇ ನಿಧಾನವಾಗಿ ನೀರಿನ ಮೇಲ್ಮೈನ ಮಧ್ಯಭಾಗಕ್ಕೆ ಸರಿಯುವುದನ್ನು ವೀಕ್ಷಿಸಿ. ನೀವು ಎಷ್ಟೇ ಪ್ರಯತ್ನಿಸಿದರೂ ಅದು ಅಂಚಿನಲ್ಲಿ ನಿಲ್ಲುವುದಿಲ್ಲ. ಈ ಪ್ರಯೋಗ ಮಾಡಿದ ಬಳಿಕ ಲೋಟದಿಂದ ಕಾಲು ಭಾಗ ನೀರು ಹೊರಚೆಲ್ಲಿ. ಪುನಃ ಜಾಗರೂಕತೆಯಿಂದ ಬೆಂಡಿನ ತುಂಡನ್ನು ತೇಲಿಸಿ. ಈ ಸನ್ನಿವೇಶದಲ್ಲಿ ನೀವು ಎಷ್ಟೇ ಪ್ರಯತ್ನಿಸಿದರೂ ಅದು ಲೋಟದ ಮಧ್ಯಬಾಗದಲ್ಲಿ ನಿಲ್ಲುವುದಕ್ಕೆ ಬದಲಾಗಿ ಅಂಚಿಗೇ ಸರಿಯುವ ವಿದ್ಯಮಾನ ವೀಕ್ಷಿಸಿ.

ಇದಕ್ಕೆ ಕಾರಣ ತಿಳಿಯಲೋಸುಗ ಲೋಟದ ಮೇಲಂಚಿಗಿಂತ ಕೆಳಗೆ ಮತ್ತು ಮೇಲಂಚಿನ ತನಕವೂ ನೀರು ಇರುವಾಗ ಅದರ ಮೇಲ್ಮೈಯನ್ನು ಸೂಕ್ಷ್ಮವಾಗಿ ವೀಕ್ಷಿಸಿ. ಯಾವ ಸಂದರ್ಭದಲ್ಲಿ ನೀರಿನ ಮೇಲ್ಮೈ ನಿಮ್ನವಾಗಿಯೂ (ಅಂಚಿನಲ್ಲಿ ಇರುವುದಕ್ಕಿಂತ ಮಧ್ಯದಲ್ಲಿ ತುಸು ಕೆಳಗೆ) ಯಾವ ಸಂದರ್ಭದಲ್ಲಿ ಪೀನವಾಗಯೂ (ಮಧ್ಯದಲ್ಲಿ ಅಂಚಿಗಿಂತ ತುಸು ಮೇಲಕ್ಕೆ ಉಬ್ಬಿರುವಂತೆ) ಗೋಚರಿಸುತ್ತದೆ?
ನೀರಿನ ಆಸಂಜನ (ಅಂಟಿಕೊಳ್ಳುವ/ಅಡ್ ಹೀಷನ್) ಸಾಮರ್ಥ್ಯ ಮತ್ತು ಮೇಲ್ಮೈ ಎಳೆತಗಳು ಈ ವಿದ್ಯಮಾನಕ್ಕೆ ಕಾರಣವಿರಬಹುದೇ?
೬. ಒಂದು ಚಿಕ್ಕ ಬೋಗುಣಿಯಲ್ಲಿ ನೀರು, ಒಂದು ಚಿಕ್ಕ ಬಟ್ಟಲಿನಲ್ಲಿ ಯಾವುದಾದರೂ ತೈಲ (ಎಣ್ಣೆ), ಒಂದು ಚಮಚೆ, ಸ್ವಲ್ಪ ಮಾರ್ಜಕ ಪುಡಿ (ಡಿಟರ್ಜೆಂಟ್ ಪೌಡರ್) ಸಂಗ್ರಹಿಸಿ. ಬೋಗುಣಿಯಲ್ಲಿ ಇರುವ ನೀರಿಗೆ ತೈಲ ಸುರಿಯಿರಿ. ತೈಲ ಮತ್ತು ನೀರು ಬೆರೆಯಲೋಸುಗ ಚಮಚೆಯಿಂದ ಚೆನ್ನಾಗಿ ಕದಡಿ/ ಎಷ್ಟೇ ಕದಡಿದರೂ ತೈಲದ ವೃತ್ತಾಕಾರದ ಚಟ್ಟೆಯಾಗಿರುವ ಹನಿಗಳು ನೀರಿನ ಮೇಲ್ಮೈನಲ್ಲಿ ರೂಪುಗೊಳ್ಳುವುದನ್ನು ವೀಕ್ಷಿಸಿ. ನಿಧಾನವಾಗಿ ಅವು ಒಗ್ಗೂಡಿ ದೊಡ್ಡದೊಡ್ಡ ಹನಿಗಳಾಗುವುದನ್ನೂ ವೀಕ್ಷಿಸಿ. ತೈಲ ಮತ್ತು ನೀರು - ಈ ಎರಡೂ ದ್ರವಗಳಿಗೆ ಪ್ರಬಲವಾದ ಮೇಲ್ಮೈ ಎಳೆತ ಇದೆ. ಇವೆರಡರ ನಡುವೆ ಬಲು ದುರ್ಬಲವಾದ ಆಸಂಜನ (ಅಂಟಿಕೊಳ್ಳುವ) ಬಲ ಇದೆ. ನೀವು ವೀಕ್ಷಿಸಿದ ವಿದ್ಯಮಾನಕ್ಕೆ ಇವು ಕಾರಣಗಳಾಗಿರಬಹುದೇ? ನೀವೇ ಆಲೋಚಿಸಿ.
ತುಸು ಮಾರ್ಜಕ ಪುಡಿಯನ್ನು ತೈಲಯುತ ನೀರಿಗೆ ಹಾಕಿ ಚೆನ್ನಾಗಿ ಕದಡಿ. ತೈಲ ಮತ್ತು ನೀರು ಮೊದಲಿಗಿಂತ ಹೆಚ್ಚು ಬೆರೆಯುವಂತೆ ತೋರುತ್ತದೆ. ಅಂದ ಮೇಲೆ, ಮೇಲ್ಮೈ ಎಳೆತದ ಮೇಲೆ ಮಾರ್ಜಕ ಪುಡಿಯ ಪ್ರಭಾವ ಏನು ಎಂಬುದನ್ನು ನೀವೇ ತರ್ಕಿಸಿ.
೭. ಬುದ್ಧಿಗೊಂದು ಕಸರತ್ತು: ಬಚ್ಚಲು ಮನೆ ಅಥವ ವಾಷ್ ಬೇಸಿನ್ ಇರುವಲ್ಲಿ ಮಾಡಬೆಕಾದ ಕಸರತ್ತು ಇದು. ಒಂದು ಅಗಲ ಬಾಯಿಯ ಗಾಜಿನ ಅಥವ ಬಳುಕದ ಪ್ಲಾಸ್ಟಿಕ್ ಬಾಟಲ್, ಕರವಸ್ತ್ರ, ನೀರು, ಅನೇಕ ರಬ್ಬರ್ ಬ್ಯಾಂಡುಗಳು - ಇವಿಷ್ಟನ್ನು ಸಂಗ್ರಹಿಸಿ. ಬಾಟಲಿನ ಮುಕ್ಕಾಲು ಭಾಗಕ್ಕಿಂತ ತಸು ಹೆಚ್ಚು ನೀರು ತುಂಬಿಸಿ. ಕರವಸ್ತ್ರವನ್ನು ತುಸು ಒದ್ದೆಮಾಡಿ. ಬಾಟಲಿನ ಬಾಯಿಯನ್ನು ಬಿಗಿಯಾಗಿ ಆವರಿಸುವಂತೆ ರಬ್ಬರ್ ಬ್ಯಾಡುಗಳ ನೆರವಿನಿಂದ ಕರವಸ್ತ್ರವನ್ನು ಬಿಗಿಯಾಗಿ ಎಳೆದು ಕಟ್ಟಿ. ನೀರು ತಗಲುವ ತನಕ ಕರವಸ್ತ್ರದ ಮಧ್ಯದಲ್ಲಿ ಬೆರಳುಗಳಿಂದ ಒತ್ತಿ ಹಿಡಿಯಿರಿ. ಕರವಸ್ತ್ರವನ್ನು ಒತ್ತಿ ಹಿಡಿದುಕೊಂಡೇ ಬಾಟಲನ್ನು ಜಾಗರೂಕತೆಯೊಂದ ಬೇಗನೆ ತಲೆಕೆಳಗೆ ಮಾಡಿ ಹಿಡಿದು ಬೆರಳು ತೆಗೆಯರಿ ಮತ್ತು ತಕ್ಷಣ ಕರವಸ್ತ್ರವನ್ನು ಎಳೆದು ಬಿಗಿಮಾಡಿ. ನೀರಿನಲ್ಲಿ ಚಿಕ್ಕಚಿಕ್ಕ ಗುಳ್ಳೆಗಳು ಬಾಟಲಿನ ಬಾಯಿಯ ಕಡೆಯಿಂದ ಮೇಲಕ್ಕೇರುವ ವಿದ್ಯಮಾನ ವೀಕ್ಷಿಸಿ. ಬಾಟಲನ್ನು ತಲೆಕೆಳಗೆ ಮಾಡಿದಾಗ ನೀರು ಬಟ್ಟೆಯ ಮೂಲಕ ಸೋರಿ ಹೋಗದಿರಲು ಕಾರಣ ಏನು? ಗುಳ್ಳೆಗಳು ಉತ್ಪತ್ತಿ ಆಗಲು ಕಾರಣವೇನು?

(ಗಮನಿಸಿ: ಬಾಟಲನ್ನು ತಲೆಕೆಳಗೆ ಮಾಡಿದಾಗ ತುಸು ನೀರು ಹೊರಸೂಸಿದರೆ ಗಾಬರಿ ಆಗಬೇಡಿ. ಕೊಂಚ ಅಭ್ಯಾಸ ಮಾಡಿದರೆ ಈ ಪ್ರಯೋಗ ಕೌಶಲ ಸಿದ್ಧಿಸುತ್ತದೆ. ಆರಂಬಿಕರು ಬಾಟಲಿಗೆ ಬದಲಾಗಿ ಗಾಜಿನ ದೊಡ್ಡ ಲೋಟವನ್ನೂ ಉಪಯೋಗಿಸಿ ಅಭ್ಯಸಿಸಬಹುದು,)
No comments:
Post a Comment