ನೀರಿನಲ್ಲಿ ಉಷ್ಣದ ಸಾಗಣೆ
ವಾಯುವನ್ನು ಬಿಸಿ ಮಾಡಿದರೆ ಬಿಸಿಯಾದ ವಾಯು ಮೇಲಕ್ಕೆ ಚಲಿಸುತ್ತದೆ. ಸಾಪೇಕ್ಷವಾಗಿ ತಂಪಾದ ವಾಯು ಬೇರೆಡೆಯಿಂದ ಬಂದು ಆ ಸ್ಥಳವನ್ನು ಆಕ್ರಮಿಸುತ್ತದೆ ಎಂಬುದನ್ನು ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೯ ರಲ್ಲಿ ಪ್ರಸ್ತುತ ಪಡಿಸಿದೆ. ನೀರಿನಲ್ಲಿ ಏನಾಗುತ್ತದೆ ಎಂಬುದನ್ನು ಪತ್ತೆಹಚ್ಚಲು ಮಾಡಬೇಕಾದ ಚಟುವಟಿಕೆ ಇದು.
ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೨೦ ರಲ್ಲಿ ವಿವರಿಸಿದಂಥ ಔಷಧದ ಚಿಕ್ಕ ಖಾಲಿ ಬಾಟಲಿನ ರಬ್ಬರ್ ಬಿರಡೆಯಲ್ಲಿ ಎರಡು ರಂಧ್ರಗಳನ್ನು ಮಾಡಿ ಬಾಲ್ ಪಾಇಂಟ್ ಪೆನ್ನಿನ ಎರಡು ಖಾಲಿ ರೀಫಿಲ್ ನಳಿಕೆಗಳನ್ನು (ಬಾಲ್ ಕಿತ್ತುಹಾಕಿದ್ದು) ತೂರಿಸಿ. ಒಂದು ರೀಫಿಲ್ಲಿನ ಒಂದು ತುದಿ ಬಾಟಲಿನ ತಳದ ಸಮೀಪದಲ್ಲಿಯೂ ಇನ್ನೊಂದು ತುದಿ ಬಿರಡೆಯ ಮೇಲ್ಭಾಗದ ಸಮೀಪದಲ್ಲಿ ಇರಲಿ. ಮತ್ತೊಂದು ರೀಫಿಲ್ಲಿನ ಒಂದು ತುದಿ ಬಿರಡೆಯ ಕೆಳಭಾಗದ ಸಮೀಪದಲ್ಲಿಯೂ ಇನ್ನೊಂದು ತುದಿ ಬಿರಡೆಯ ಮೇಲ್ಭಾಗದಿಂದ ಸಾಧ್ಯ ಇರುವಷ್ಟು ಹೆಚ್ಚು ಮೇಲೆಯೂ ಇರಲಿ.
ಬಾಟಲಿನಲ್ಲಿ ಯಾವುದಾದರೂ ಬಣ್ಣ ಬೆರೆಸಿದ ಕುದಿ ಬಿಸಿನೀರನ್ನು ತುಂಬಿಸಿ ರೀಫಿಲ್ ಯುತ ಬಿರಡೆ ಹಾಕಿ. ತಕ್ಷಣ ಬಾಟಲನ್ನು ಬೇರೆ ಯಾವುದಾದರೂ ಅಗಲ ಬಾಯಿಯ ದೊಡ್ಡ ಗಾಜಿನ
ಅಥವ ಪ್ಲಾಸ್ಟಿಕ್ಕಿನ ಬಾಟಲಿನ ತಳದಲ್ಲಿ ನಿಲ್ಲಿಸಿ. ದೊಡ್ಡ ಬಾಟಲಿನಲ್ಲಿ ತಣ್ಣೀರು ತುಂಬಿಸಿ. ಚಿಕ್ಕ ಬಾಟಲಿನಲ್ಲಿ ಇರುವ ಬಿಸಿನೀರು ಯಾವ ಕೊಳವೆಯ ಮೂಲಕ ಎತ್ತ ಚಲಿಸುತ್ತದೆ ಎಂಬುದನ್ನು ಗಮನಿಸಿ. ಚಿಕ್ಕ ಬಾಟಲಿನಿಂದ ಹೊರಬಂದ ನೀರಿನ ಜಾಗವನ್ನು ಭರ್ತಿ ಮಾಡಿದ್ದು ಯಾವುದು ಮತ್ತು ಯಾವ ಕೊಳವೆಯ ಮೂಲಕ ಎಂಬುದನ್ನೂ ಚಿಕ್ಕ ಬಾಟಲಿನ ಬಿರಡೆಗೆ ಇಲ್ಲಿ ತಿಳಿಸಿರುವಂತೆಯೇ ರೀಫಿಲ್ಲಿನ ನಳಿಕೆಗಳನ್ನು ಏಕೆ ಜೋಡಿಸಬೇಕು ಎಂಬುದನ್ನೂ ತರ್ಕಿಸಿ.
ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೯ ರಲ್ಲಿ ಪ್ರಸ್ತುತ ಪಡಿಸಿದ ವಾಯು ಸಂಬಂಧಿತ ಪ್ರಯೋಗದಲ್ಲಿ ಮಾಡಿದ ವೀಕ್ಷಣೆಗೂ ಈ ಪ್ರಯೋಗದಲ್ಲಿ ಮಾಡಿದ ವೀಕ್ಷಣೆಗೂ ಹೋಲಿಕೆ ಏನಾದರೂ ಇದೆಯೇ? ಎರಡೂ ಚಟುವಟಿಕೆಗಳನ್ನು ಆಧರಿಸಿ ಸಾರ್ವತ್ರೀಕರಣ ರೂಪಿಸಲು ಸಾಧ್ಯವೇ? ಆಲೋಚಿಸಿ.
ವಾಯುವನ್ನು ಬಿಸಿ ಮಾಡಿದರೆ ಬಿಸಿಯಾದ ವಾಯು ಮೇಲಕ್ಕೆ ಚಲಿಸುತ್ತದೆ. ಸಾಪೇಕ್ಷವಾಗಿ ತಂಪಾದ ವಾಯು ಬೇರೆಡೆಯಿಂದ ಬಂದು ಆ ಸ್ಥಳವನ್ನು ಆಕ್ರಮಿಸುತ್ತದೆ ಎಂಬುದನ್ನು ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೯ ರಲ್ಲಿ ಪ್ರಸ್ತುತ ಪಡಿಸಿದೆ. ನೀರಿನಲ್ಲಿ ಏನಾಗುತ್ತದೆ ಎಂಬುದನ್ನು ಪತ್ತೆಹಚ್ಚಲು ಮಾಡಬೇಕಾದ ಚಟುವಟಿಕೆ ಇದು.
ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೨೦ ರಲ್ಲಿ ವಿವರಿಸಿದಂಥ ಔಷಧದ ಚಿಕ್ಕ ಖಾಲಿ ಬಾಟಲಿನ ರಬ್ಬರ್ ಬಿರಡೆಯಲ್ಲಿ ಎರಡು ರಂಧ್ರಗಳನ್ನು ಮಾಡಿ ಬಾಲ್ ಪಾಇಂಟ್ ಪೆನ್ನಿನ ಎರಡು ಖಾಲಿ ರೀಫಿಲ್ ನಳಿಕೆಗಳನ್ನು (ಬಾಲ್ ಕಿತ್ತುಹಾಕಿದ್ದು) ತೂರಿಸಿ. ಒಂದು ರೀಫಿಲ್ಲಿನ ಒಂದು ತುದಿ ಬಾಟಲಿನ ತಳದ ಸಮೀಪದಲ್ಲಿಯೂ ಇನ್ನೊಂದು ತುದಿ ಬಿರಡೆಯ ಮೇಲ್ಭಾಗದ ಸಮೀಪದಲ್ಲಿ ಇರಲಿ. ಮತ್ತೊಂದು ರೀಫಿಲ್ಲಿನ ಒಂದು ತುದಿ ಬಿರಡೆಯ ಕೆಳಭಾಗದ ಸಮೀಪದಲ್ಲಿಯೂ ಇನ್ನೊಂದು ತುದಿ ಬಿರಡೆಯ ಮೇಲ್ಭಾಗದಿಂದ ಸಾಧ್ಯ ಇರುವಷ್ಟು ಹೆಚ್ಚು ಮೇಲೆಯೂ ಇರಲಿ.
ಬಾಟಲಿನಲ್ಲಿ ಯಾವುದಾದರೂ ಬಣ್ಣ ಬೆರೆಸಿದ ಕುದಿ ಬಿಸಿನೀರನ್ನು ತುಂಬಿಸಿ ರೀಫಿಲ್ ಯುತ ಬಿರಡೆ ಹಾಕಿ. ತಕ್ಷಣ ಬಾಟಲನ್ನು ಬೇರೆ ಯಾವುದಾದರೂ ಅಗಲ ಬಾಯಿಯ ದೊಡ್ಡ ಗಾಜಿನ

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೯ ರಲ್ಲಿ ಪ್ರಸ್ತುತ ಪಡಿಸಿದ ವಾಯು ಸಂಬಂಧಿತ ಪ್ರಯೋಗದಲ್ಲಿ ಮಾಡಿದ ವೀಕ್ಷಣೆಗೂ ಈ ಪ್ರಯೋಗದಲ್ಲಿ ಮಾಡಿದ ವೀಕ್ಷಣೆಗೂ ಹೋಲಿಕೆ ಏನಾದರೂ ಇದೆಯೇ? ಎರಡೂ ಚಟುವಟಿಕೆಗಳನ್ನು ಆಧರಿಸಿ ಸಾರ್ವತ್ರೀಕರಣ ರೂಪಿಸಲು ಸಾಧ್ಯವೇ? ಆಲೋಚಿಸಿ.
No comments:
Post a Comment