- ೧೪ x ೧೦ ಸೆಂಮೀ ಅಳತೆಯ ಕಾಗದ ತೆಗೆದುಕೊಳ್ಳಿ
- ೧೪ x ೫ ಸೆಂಮೀ ಅಳತೆಯ ಎರಡು ಭಾಗಗಳಾಗುವಂತೆ ಮಡಚಿ.
- ಚಿತ್ರದಲ್ಲಿ ತೋರಿಸಿದ ರೀತಿಯಲ್ಲಿ ಸುಮಾರು ೧ ಸೆಂಮೀ ಅಂತರಗಳಲ್ಲಿ ಮಡಚಿದ ಅಂಚಿನಿಂದ ಕತ್ತರಿಸಿ. ಅಂಚುಗಳಲ್ಲಿ ೦.೫ ಸೆಂಮೀ ಕತ್ತರಿಸದೇ ಬಿಡಬೇಕು.
- ಮಡಚಿದ ಅಂಚಿನ ಎದುರಿನ ಅಂಚಿನಿಂದ ಚಿತ್ರದಲ್ಲಿ ತೋರಿಸಿದ ರೀತಿಯಲ್ಲಿ ಸುಮಾರು ೧ ಸೆಂಮೀ ಅಂತರಗಳಲ್ಲಿ ಮಡಚಿದ ಅಂಚಿನಿಂದ ಕತ್ತರಿಸಿ. ಮೇಲಿನ ಅಂಚಿನಿಂದ ೦.೫ ಸೆಂಮೀ ಕತ್ತರಿಸದೇ ಬಿಡಬೇಕು. ಹೀಗೆ ಕತ್ತರಿಸುವುದನ್ನು ಸೂಚಿಸುವ ಗೆರೆಗಳು ಮೊದಲು ಕತ್ತರಿಸಿದ ಭಾಗಗಳ ಮಧ್ಯದಲ್ಲಿ ಇರುವುದನ್ನು ಗಮನಿಸಿ.
- ತದನಂತರ ಕಾಗದವನ್ನು ಮಡಚಿದ ಗೆರೆಯಗುಂಟ ಅಂಚುಗಳ ಸಮೀಪದಲ್ಲಿ ಇರುವ ೦.೫ ಸೆಂಮೀ ಭಾಗಗಳನ್ನು ಬಿಟ್ಟು ಉಳಿದ ಭಾಗಗಳನ್ನು ಕತ್ತರಿಸಿ.

ಈಗ ಬಲು ಜಾಗರೂಕತೆಯಿಂದ ಕಾಗದದ ಯಾವ ಭಾಗವೂ ಹರಿದಯ ಹೋಗದಂತೆ ಮಡಚಿದ್ದ ಕಾಗದವನ್ನು ಬಿಡಿಸಿ. ನೀವು ಜಾಗರೂಕತೆಯಿಂದ ತೂರಬಹುದಾದಷ್ಟು ದೊಡ್ಡ ರಂಧ್ರವಾಗಿರುವುದನ್ನು ನೋಡಿ.
ಚಟುವಟಿಕೆ ೩ - ನೀರಿನಲ್ಲಿ ತೇಲುತ್ತಲೇ ಮುಳುಗುವ ಚೆಂಡು
ಗಾಜಿನ ಲೋಟ ಮತ್ತು ಒಂದು ಬಾಲ್ದಿ ನೀರು, ನೀರಿನಲ್ಲಿ ತೇಲಬಲ್ಲ ಚಿಕ್ಕ ಚೆಂಡು ಅಥವ ಬೇರೆ ಯಾವುದಾದರೂ ವಸ್ತು (ಇದು ಲೋಟದ ತಳಭಾಗದ ವ್ಯಾಸಕ್ಕಿಂತ ಚಿಕ್ಕದಾಗಿರಲಿ) - ಇವಿಷ್ಟು ಈ ಚಟುವಟಿಕೆಗೆ ಬೇಕಾಗುವ ಪರಿಕರಗಳು. ಚೆಂಡನ್ನು ಬಾಲ್ದಿಯಲ್ಲಿರುವ ನೀರಿನಲ್ಲಿ ತೇಲಿಸಿ. ೧ನೇ ಚಟುವಟಿಕೆಯಲ್ಲಿ ಒಳಗಿರುವ ಕರವಸ್ತ್ರ ಒದ್ದೆಯಾಗದಂತೆ ನೀರಿನಲ್ಲಿ ಮುಳುಗಿಸಲೋಸುಗ ಲೋಟವನ್ನು ಹೇಗೆ ಹಿಡಿದುಕೊಂಡಿದ್ದಿರೋ ಅದೇ ರೀತಿಯಲ್ಲಿ ಈಗಲೂ ಲೋಟವನ್ನು ಚೆಂಡಿನ ಮೇಲೆ ಹಿಡಿದು ನೀರಿನಲ್ಲಿ ಮುಳುಗಿಸಿ. ಲೋಟ ನೀರಿನೋಳಗೆ ಪೂರ್ತಿಯಾಗಿ ಮುಳುಗಿದರೂ ಅದರೊಳಗಿರುವ ಚೆಂಡು ನೀರಿನಲ್ಲಿ ತೇಲುತ್ತಲೇ ಇರುವ ವಿಚಿತ್ರ ವಿದ್ಯಮಾನ ವೀಕ್ಷಿಸಿ. ಏಕೆ ಹೀಗಾಗುತ್ತಿದೆ ಎಂಬುದನ್ನು ನೀವೇ ವಿವರಿಸುವಿರಲ್ಲವೇ?
No comments:
Post a Comment